ಮಲ್ಯರಿಂದ ಅಕ್ರಮವಾಗಿ ಸಾಗರೋತ್ತರ ಖಾತೆಗೆ ಹಣ ವರ್ಗಾವಣೆ?

Posted By:
Subscribe to Oneindia Kannada

ಬೆಂಗಳೂರು, ಜನವರಿ 25: ಆರ್ಥಿಕವಾಗಿ ದಿವಾಳಿಯಾಗಿರುವ ಮಲ್ಯ ಅವರು ಯುಬಿ ಸಮೂಹದ ಮುಖ್ಯಸ್ಥನ ಸ್ಥಾನ ತೊರೆದ ಬಳಿಕ ಸಿಕ್ಕ ಮೊತ್ತವನ್ನು ಗುಟ್ಟಾಗಿ ಸಾಗರೋತ್ತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿ ಈಗ ಖಚಿತವಾಗಿದೆ.

ಕಿಂಗ್ ಫಿಶರ್ ಸಂಸ್ಥೆ ದಿವಾಳಿ ಎದ್ದಿದ್ದರೂ ಐಡಿಬಿಐನಿಂದ ಮಲ್ಯ ಅವರು 900 ಕೋಟಿ ರು ಸಾಲ ಪಡೆದಿದ್ದರು. ಆದರೆ, ಸಾಲ ಹಿಂತಿರುಗಿಸಿರಲಿಲ್ಲ. ದಿವಾಳಿಯಾಗಿದ್ದರೂ ಇಷ್ಟು ಮೊತ್ತದ ಸಾಲ ನೀಡಿದ್ದು ಏಕೆ ಎಂಬ ಪ್ರಶ್ನೆಯನ್ನು ಸಿಬಿಐ ಎತ್ತಿದೆ.

Mallya loan case: Money diverted illegally to offshore accounts?

ಐಡಿಬಿಐ ಸಾಲ ವಸೂಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆಸಿದ್ದು, ಮಲ್ಯ ಅವರ ಕಿಂಗ್ ಫಿಶರ್ ಸಂಸ್ಥೆಯ ನಾಲ್ವರು ಅಧಿಕಾರಿಗಳು ಹಾಗೂ ಐಡಿಬಿಐಯ ನಾಲ್ವರು ಅಧಿಕಾರಿಗಳನ್ನು ಸಿಬಿಐ ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2009ರಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ಗೆ ನೀಡಲಾದ 900 ಕೋಟಿ ರು ಸಾಲದಲ್ಲಿ 150 ಕೋಟಿ ರು ಮೊದಲ ಕಂತಿನಲ್ಲಿ ಹಾಗೂ 750 ಕೋಟಿ ರು ಎರಡನೇ ಕಂತಿನಲ್ಲಿ ನೀಡಲಾಗಿದೆ. ಈ ಪೈಕಿ 81 ಕೋಟಿ ರು ಗಳನ್ನು ವಿಮಾನ ಪ್ರಾಧಿಕಾರಕ್ಕೆ ಕಿಂಗ್ ಫಿಷರ್ ಸಂಸ್ಥೆ ಕಟ್ಟಿದೆ. 10 ಕೋಟಿ ಎಉ ತೈಲ ಕಂಪನಿ ಹಾಗೂ 17 ಕೋಟಿ ರು ಕೇಟರಿಂಗ್ ಬಳಸಲಾಗಿದೆ.

ಸಿಬಿಐಗೆ ಸಿಕ್ಕಿರುವ ಮಾಹಿತಿ ಪ್ರಕಾರ, 422 ಕೋಟಿ ರು ಗಳನ್ನು ಸಾಗರೋತ್ತರ ಬ್ಯಾಂಕ್ ಖಾತೆಗಳಿಗೆ ರವಾನಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On Tuesday, the Central Bureau of Investigation filed a charge sheet accusing liquor baron Vijay Mallya of conspiracy and cheating in the Rs 900 crore IDBI Bank loan case. The case does not restrict itself to the diversion of the loan amount, but also the sanction of the credit too.
Please Wait while comments are loading...