• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಮಾಜಿಕ ಜಾಲತಾಣದಲ್ಲಿ 'ಮೇಕ್ ಇನ್ ಇಂಡಿಯಾ' ನಂ. 1

|

ಬೆಂಗಳೂರು, ಜ.6: ಪ್ರಧಾನಿ ನರೇಂದ್ರ ಮೋದಿಯವರ 'ಮೆಕ್ ಇನ್ ಇಂಡಿಯಾ ಕ್ಯಾಂಪೆನ್' ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಫೇಸ್ ಬುಕ್ ನಲ್ಲಿ ಪ್ರತಿ ಮೂರು ಸೆಕೆಂಡ್ ಒಬ್ಬ ಸದಸ್ಯ ಮೆಕ್ ಇನ್ ಇಂಡಿಯಾ ಪೆಜ್ ಗೆ ಸೇರ್ಪಡೆಗೊಳ್ಳುತ್ತಿದ್ದಾನೆ. ಸರ್ಕಾರಿ ಕಾರ್ಯಕ್ರಮವೊಂದು ಈ ರೀತಿಯ ಸ್ವಯಂ ಪ್ರಚಾರ ಪಡೆದುಕೊಳ್ಳುತ್ತಿರುವುದು ಇದೇ ಮೊದಲು.

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗೆ ಕಾಲಿಟ್ಟ ಕೇವಲ 3 ತಿಂಗಳಲ್ಲಿ ಮೆಕ್ ಇನ್ ಇಂಡಿಯಾ ಮ್ಯಾಜಿಕ್ ಮಾಡಿದೆ. ನಮ್ಮ ಗುರಿಯನ್ನು ಈಗಾಗಲೇ ಸಾಧಿಸಿದ್ದೇವೆ. 2.1 ಬಿಲಿಯನ್ ಜನರ ಬೆಂಬಲ ದೊರೆತಿದೆ. ಅದು ಸದ್ಯವೇ 3 ಬಿಲಿಯನ್ ದಾಟುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.[ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ]

ಇಂಡಸ್ಟ್ರಿಯಲ್ ಪಾಲಿಸಿ ಮತ್ತು ಪ್ರಮೋಶನ್ (ಡಿಐಪಿಪಿ) ಈ ಅಭಿಯಾನವನ್ನು ಮುನ್ನಡೆಸುತ್ತಿದೆ. ಡಿಜಿಟಲ್ ಮೀಡಿಯಾದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿರುವ ಮೆಕ್ ಇನ್ ಇಂಡಿಯಾ ಸರ್ಕಾರಿ ಕಾರ್ಯಕ್ರಮಗಳನ್ನು ಜನರಿಗೆ ಯಶಸ್ವಿಯಾಗಿ ತಲುಪಿಸುತ್ತಿದೆ.

ಟ್ವಿಟ್ಟರ್ ನ @makeinindia_ ಹ್ಯಾಂಡಲ್ ಗೆ ಈಗಾಗಲೇ 2.63 ಲಕ್ಷ ಫಾಲೋವರ್ಸ್ ಗಳಿದ್ದಾರೆ. ಕಾರ್ಯಕ್ರಮಕ್ಕೆ ಸಂಬಧಿಸಿದ ವಿಡಿಯೋವನ್ನು ಯು ಟ್ಯೂಬ್ ನಲ್ಲಿ 5.7 ಲಕ್ಷ ಜನ ವೀಕ್ಷಿಸಿದ್ದಾರೆ.

ಇದಲ್ಲದೇ www.makeinindia.com ವೆಬ್ ತಾಣ 5.5 ಮಿಲಿಯನ್ ವೀಕ್ಷಣೆಯನ್ನು, 1.7 ಲಕ್ಷ ಯುಸರ್ ಗಳನ್ನು ಹೊಂದಿದೆ. ಭಾರತದಲ್ಲಿ ಕೈಗಾರಿಕೆ ಸಂಬಂಧ ಜನರನ್ನು ಆಕರ್ಷಣೆ ಮಾಡುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಲ್ಲಿನ ಕೈಗಾರಿಕೆ ಸ್ಥಾಪನೆ ಅವಕಾಶಗಳನ್ನು ಒತ್ತಿ ಹೇಳುವ ಕೆಲಸವನ್ನು ಮೇಕ್ ಇನ್ ಇಂಡಿಯಾ ಕ್ಯಾಂಪೆನ್ ಮಾಡುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi's 'Make in India' campaign adds a new member every three seconds on its Facebook page and has become the most sought after government initiative ever on any digital media platform. Make in India has seen an overwhelming response on its digital platforms like Facebook and Twitter since its launch just 3 months ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more