2021ರ ಜನವರಿ 1ರಿಂದ ತನ್ನ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಘೋಷಿಸಿದ ಮಹೀಂದ್ರಾ & ಮಹೀಂದ್ರಾ
ನವದೆಹಲಿ, ಡಿಸೆಂಬರ್ 15: ತನ್ನ ಪ್ರಯಾಣಿಕರ ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು 2021 ರ ಜನವರಿ 1 ರಿಂದ ಹೆಚ್ಚಿಸುವುದಾಗಿ ಮಹೀಂದ್ರಾ ಮತ್ತು ಮಹೀಂದ್ರಾ (ಎಂ & ಎಂ) ಮಂಗಳವಾರ ಹೇಳಿದೆ. ಸರಕುಗಳ ಬೆಲೆ ಏರಿಕೆ ಮತ್ತು ಇತರ ಹಲವಾರು ಇನ್ಪುಟ್ ವೆಚ್ಚಗಳಿಂದಾಗಿ ಬೆಲೆಗಳನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ.
ಬೆಲೆ ಏರಿಕೆ ನಿರ್ಧಾರ ದೃಢವಾಗಿದ್ದು, ಬೆಲೆ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ವಿವಿಧ ಮಾಡೆಲ್ ಕಾರುಗಳು, ವಾಹನಗಳ ಆಧಾರದ ಮೇಲೆ ಬೆಲೆ ಏರಿಕೆ ವ್ಯತ್ಯಾಸವನ್ನು ನಾವು ಕಾಣಬಹುದಾಗಿದೆ.
''19.4 ಬಿಲಿಯನ್ ಡಾಲರ್ ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ (ಎಂ & ಎಂ) ಜನವರಿ 1, 2021 ರಿಂದ ಜಾರಿಗೆ ಬರುವಂತೆ ಕಂಪನಿಯು ತನ್ನ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತದೆ ಎಂದು ಇಂದು ಘೋಷಿಸಿದೆ. ಇದಕ್ಕೆ ಕಾರಣ ಸರಕು ಬೆಲೆಗಳ ಹೆಚ್ಚಳ ಮತ್ತು ಇತರ ಇನ್‌ಪುಟ್ ವೆಚ್ಚಗಳು"ಎಂದು ಸ್ಟಾಕ್ ಫೈಲಿಂಗ್‌ನಲ್ಲಿ ತಿಳಿಸಿದೆ.

ಕಳೆದ ವರ್ಷ, ಮಹೀಂದ್ರಾ ತನ್ನ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳಿಗೆ 73,000 ರೂ.ಗಳವರೆಗೆ ಬೆಲೆ ಏರಿಕೆ ಘೋಷಿಸಿದ್ದು, ಇದು ಏಪ್ರಿಲ್ 1, 2019 ರಿಂದ ಜಾರಿಗೆ ಬಂದಿದೆ. ಕಂಪನಿಯು ಎಕ್ಸ್‌ಯುವಿ 500, ಸ್ಕಾರ್ಪಿಯೋ, ಟಿಯುವಿ 300 ಮತ್ತು ಕೆಯುವಿ 100 ಸೇರಿದಂತೆ ಹಲವಾರು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತದೆ.












Click it and Unblock the Notifications