ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2017ರ ನಂತರ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 01: 2017 ರ ಬಳಿಕ ಇದೇ ಮೊದಲ ಬಾರಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಇದು ಸಬ್ಸಿಡಿ ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಲಾಗಿದೆ.

ಸಬ್ಸಿಡಿ ಸಿಲಿಂಡರ್ ಬೆಲೆ 2.50 ರೂಪಾಯಿ ಇಳಿಕೆಯಾಗಿದ್ದರೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 45.50 ರೂಪಾಯಿಯಿಂದ ಹಿಡಿದು 47 ರೂಪಾಯಿವರೆಗೆ ಇಳಿಕೆಯಾಗಿದೆ.

LPG Cylinder Prices Cut

ಹೊಸ ದರಗಳು ಮಾರ್ಚ್ 1ರಿಂದಲೇ ಜಾರಿಗೆ ಬರಲಿದೆ. ದೆಹಲಿಯಲ್ಲಿ 495.30 ರೂಪಾಯಿಯಿದ್ದ 14.2 ಕೆ.ಜಿ ಗೃಹ ಬಳಕೆ ಸಬ್ಸಿಡಿ ಸಿಲಿಂಡರ್ ಗೆ 493.09 ರೂಪಾಯಿಯಾಗಿದೆ. ಕೋಲ್ಕತಾದಲ್ಲಿ 496.7 ರು, ಮುಂಬೈನಲ್ಲಿ 490.8 ರು ಹಾಗೂ ಚೆನ್ನೈನಲಿ 481.21ರು ಆಗಲಿದೆ.

ಉಜ್ವಲ ಯೋಜನೆಯ ಸಾಧನೆಉಜ್ವಲ ಯೋಜನೆಯ ಸಾಧನೆ

ಒಟ್ಟಾರೆಯಾಗಿ 2018ರಲ್ಲಿ ಸಬ್ಸಿಡಿ ಇರುವ ಸಿಲಿಂಡರ್ ದರಗಳು ದೆಹಲಿಯಲ್ಲಿ 2.6ರು, ಕೋಲ್ಕತಾದಲ್ಲಿ 2.36ರು, ಮುಂಬೈಯಲ್ಲಿ 2.58ರು ಹಾಗೂ ಚೆನ್ನೈನಲ್ಲಿ 2.48ರುನಷ್ಟು ಇಳಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 689 ರೂಪಾಯಿಯಾಗಿದೆ. ಕೋಲ್ಕತ್ತಾ (711.5 ರು), ಚೆನ್ನೈ(699.5 ರು), ಮುಂಬೈ(661ರು)ನಲ್ಲಿ ಹೊಸ ಬೆಲೆಯ ಪಟ್ಟಿ ಲಭ್ಯವಾಗಿದ್ದು, ನಂತರ ಉಳಿದ ನಗರಗಳಿಗೆ ಅನ್ವಯವಾಗಲಿದೆ.

ಒಟ್ಟಾರೆಯಾಗಿ 2018ರಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ದೆಹಲಿ ಹಾಗೂ ಮುಂಬೈಯಲ್ಲಿ 58ರು, ಕೋಲ್ಕತಾದಲ್ಲಿ 54.5ರು ಹಾಗೂ ಚೆನ್ನೈನಲ್ಲಿ 56.5 ರು ನಷ್ಟು ಕಡಿಮೆಯಾಗಿದೆ.

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.

ಟ್ವಿಟ್ಟರ್ ಬಳಸಿ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿ!ಟ್ವಿಟ್ಟರ್ ಬಳಸಿ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿ!

English summary
LPG or cooking gas cylinders will cost less from this month. Subsidised LPG (liquefied petroleum gas) rates as well as non-subsidised rates have been revised in Delhi, Kolkata, Mumbai and Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X