LPG Price Cut: ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ-ನಗರವಾರು ಅಂಕಿಅಂಶಗಳ ವಿವರ ತಿಳಿಯಿರಿ
LPG Price Cut: ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಜೂನ್ 1ರಿಂದ ಅಂದರೆ, ಇಂದಿನಿಂದಲೇ ಜಾರಿಗೆ ಬರುವಂತೆ ಕಡಿತಗೊಳಿದೆ. ಹಾಗಾದರೆ ದೇಶದ ಯಾವ್ಯಾವ ನಗರಗಳಲ್ಲಿ ಎಷ್ಟು ಇಳಿಕೆಯಾಗಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ತಿಳಿಯಿರಿ.
ದೇಶದ ರಾಜಧಾನಿ ನವದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಬೆಲೆ 69.50 ರೂಪಾಯಿ ಇಳಿಕೆಯಾಗಿದ್ದು, 19 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ದರ 1,676 ರೂಪಾಯಿ ಇದೆ. ನಿಗದಿಪಡಿಸಿದೆ. ಇನ್ನು ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ದರಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತವೆ. ಹಾಗಾದರೆ ಇನ್ನುಳಿದ ಪ್ರಮುಖ ನಗರಗಳಲ್ಲಿ ದರ ಎಷ್ಟಿದೆ ಎಂದು ಇಲ್ಲಿ ಮಾಹಿತಿ ನೀಡಲಾಗಿದೆ ಗಮನಿಸಿ.

ಈ ಹಿಂದೆ, ಮೇ 1, 2024ರಂದು 19 ರೂಪಾಯಿ ಇಳಿಕೆಯಾಗಿದ್ದು, ನವದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1745.50 ರೂಪಾಯಿ, ಏಪ್ರಿಲ್‌ನಲ್ಲಿ 30.50 ರೂಪಾಯಿ ಇಳಿಕೆಯಾಗಿ 19 ಕೆ.ಜಿ ವಾಣಿಜ್ಯ ಸಿಲಿಂಡರ್‌ಗೆ 1764.50 ರೂಪಾಯಿ ಆಗಿತ್ತು.
ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ದರ ವಿವರ (19 ಕೆ.ಜಿ)
1. ನವದೆಹಲಿ- 1,676 ರೂಪಾಯಿ
2. ಕೋಲ್ಕತ್ತಾ - 1,787 ರೂಪಾಯಿ
3. ಮುಂಬೈ - 1,629 ರೂಪಾಯಿ
4. ಚೆನ್ನೈ - 1,840 ರೂಪಾಯಿ
5. ಬೆಂಗಳೂರು - 1,755 ರೂಪಾಯಿ
6. ಹೈದರಾಬಾದ್ - 1,903 ರೂಪಾಯಿ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ, ಅರ್ಹ ಕುಟುಂಬಗಳಿಗೆ ಸಬ್ಸಿಡಿಗಳನ್ನು ಒದಗಿಸಲಾಗುತ್ತಿದೆ. ಈ ಮೂಲಕ ಮನೆಯಲ್ಲಿ ಅಡುಗೆ ಮಾಡಲು ಎಲ್‌ಪಿಜಿ ಸಿಲಿಂಡರ್‌ಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ.
ಗೃಹ ಬಳಕೆ ಸಿಲಿಂಡರ್ ಬೆಯಲ್ಲಿ ಬದಲಾವಣೆ ಇಲ್ಲ: ತೈಲ ಕಂಪನಿಗಳು ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸ್ತುತ ನವದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 803 ರೂಪಾಯಿ, ಆದರೆ, ಉಜ್ವಲ ಫಲಾನುಭವಿಗಳಿಗೆ 603 ರೂಪಾಯಿಗೆ ಮಾತ್ರ ಸಿಗಲಿದೆ. ಮುಂಬೈನಲ್ಲಿ ಈ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 802.50, ಬೆಂಗಳೂರಿನಲ್ಲಿ 805.50 ರೂಪಾಯಿ, ಚೆನ್ನೈನಲ್ಲಿ 818.50 ರೂಪಾಯಿ, ಹೈದರಾಬಾದ್‌ನಲ್ಲಿ 855 ರೂಪಾಯಿ, ವಿಶಾಖಪಟ್ಟಣಂನಲ್ಲಿ 812 ರೂಪಾಯಿ ಇದೆ.












Click it and Unblock the Notifications