ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್‌ಗಳಿಗೆ ಸುದೀರ್ಘ ರಜೆ: ಬ್ಯಾಂಕ್‌ಗೆ ಹೋಗುವ ಮೊದಲು ತಿಳಿಯಿರಿ

|
Google Oneindia Kannada News

ನವದೆಹಲಿ, ಆಗಸ್ಟ್ 16: ಕಳೆದ ವಾರ ಸುದೀರ್ಘ ವಾರಾಂತ್ಯದ ರಜೆಗಳ ನಂತರ ಮತ್ತೊಮ್ಮೆ ದೀರ್ಘ ಬ್ಯಾಂಕ್ ರಜೆಗಳು ಬಂದಿವೆ. ಬ್ಯಾಂಕುಗಳಿಗೆ ಒಂದು ಅಥವಾ ಎರಡು ದಿನವಲ್ಲ ಸತತ 4 ದಿನಗಳವರೆಗೆ ರಜೆ ಇದ್ದು ಈ ದಿನ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಈ ವಾರ ಕೃಷ್ಣ ಜನ್ಮಾಷ್ಟಮಿ, ಪಾರ್ಸಿ ಹೊಸ ವರ್ಷದ ಕಾರಣ ಬ್ಯಾಂಕ್‌ಗಳಿಗೆ ಮತ್ತೆ ರಜೆ ಸಿಗಲಿದೆ. ಈ ಸಮಯದಲ್ಲಿ ನೀವು ಬ್ಯಾಂಕ್ ಸಂಬಂಧಿತ ಕೆಲಸಗಳಿಗಾಗಿ ಬ್ಯಾಂಕಿಗೆ ಹೋಗಲು ಯೋಚಿಸುತ್ತಿದ್ದರೆ, ಮೊದಲು ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ.

ಆಗಸ್ಟ್‌ನಲ್ಲಿ ಸುದೀರ್ಘ ಬ್ಯಾಂಕ್ ರಜೆ ಇರುತ್ತದೆ. ಆಗಸ್ಟ್ 15 ರಿಂದ ಆಗಸ್ಟ್ 20 ರವರೆಗೆ ಬ್ಯಾಂಕುಗಳಿಗೆ ದೀರ್ಘ ರಜೆಗಳು ಇದ್ದು ಈ ದಿನಗಳಲ್ಲಿ ಬ್ಯಾಂಕ್ ಹೋಗುವ ಮುನ್ನ ಗಮನ ಹರಿಸಿ. ಆದಾಗ್ಯೂ ಈ ರಜಾದಿನಗಳು ಪ್ರತಿ ನಗರದಲ್ಲಿ, ಪ್ರತಿ ರಾಜ್ಯದಲ್ಲೂ ಏಕಕಾಲದಲ್ಲಿ ಇರುವುದಿಲ್ಲ. ವಿವಿಧ ನಗರಗಳಲ್ಲಿ ಈ ರಜಾ ದಿನಗಳನ್ನು ಹಬ್ಬಗಳು, ಅಲ್ಲಿನ ಸರ್ಕಾರಿ ದಿನಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಅದೇನೆಂದರೆ, ಇಂದು ಲಖ್ನಾಭ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಿದರೆ, ದೆಹಲಿಯಲ್ಲಿಯೂ ಮುಚ್ಚಿರುತ್ತವೆ ಎಂದು ಹೇಳಲಾಗದು.

Long holiday for banks: Know before going to the bank

ಸತತ 4 ದಿನಗಳ ಕಾಲ ಬ್ಯಾಂಕ್ ರಜೆ

ಪಾರ್ಸಿ ಹೊಸ ವರ್ಷದ ನಿಮಿತ್ತ ಆಗಸ್ಟ್ 16 ರಂದು ಬೇಲಾಪುರ್, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕ್ ರಜೆ ಇದೆ. ಆಗಸ್ಟ್ 18 ರಂದು ಜನ್ಮಾಷ್ಟಮಿ ನಿಮಿತ್ತ ಭುವನೇಶ್ವರ, ಡೆಹ್ರಾಡೂನ್, ಕಾನ್ಪುರ ಮತ್ತು ಲಕ್ನೋದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆಗಸ್ಟ್ 19 ರಂದು, ಜನ್ಮಾಷ್ಟಮಿ / ಕೃಷ್ಣ ಜಯಂತಿಯ ಕಾರಣ, ಅಹಮದಾಬಾದ್, ಭೋಪಾಲ್, ಚಂಡೀಗಢ, ಚೆನ್ನೈ, ಗ್ಯಾಂಗ್ಟಾಕ್, ಜೈಪುರ, ಜಮ್ಮು, ಪಾಟ್ನಾ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಶ್ರೀಕೃಷ್ಣ ಅಷ್ಟಮಿಯ ನಿಮಿತ್ತ ಆಗಸ್ಟ್ 20 ರಂದು ಹೈದರಾಬಾದ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

Long holiday for banks: Know before going to the bank

ಆಗಸ್ಟ್‌ನಲ್ಲಿ 18 ದಿನಗಳ ಬ್ಯಾಂಕ್ ರಜೆ

ಆಗಸ್ಟ್‌ನಲ್ಲಿ ದೀರ್ಘ ಬ್ಯಾಂಕ್ ರಜಾದಿನಗಳಿವೆ. ಇಡೀ ತಿಂಗಳು ನೋಡುವುದಾದರೆ ಒಟ್ಟು 18 ದಿನಗಳ ಕಾಲ ಬ್ಯಾಂಕ್ ರಜೆ ಆಗಲಿದೆ. ಗೌಹಾಟಿಯಲ್ಲಿನ ಬ್ಯಾಂಕ್‌ಗಳು ಆಗಸ್ಟ್ 20 ರ ನಂತರದ ಉಳಿದ ದಿನಗಳಲ್ಲಿ ಶನಿವಾರ, ಭಾನುವಾರ ಸಾಪ್ತಾಹಿಕ ರಜೆಯಾಗಿ, 29 ಆಗಸ್ಟ್ ಶ್ರೀಮಂತ ಶಂಕರದೇವರ ದಿನಾಂಕವಾಗಿ ಮುಚ್ಚಲ್ಪಡುತ್ತವೆ. ತಿಂಗಳ ಕೊನೆಯ ದಿನವಾದ ಆಗಸ್ಟ್ 31 ರಂದು ಸಂವತ್ಸರಿ, ಗಣೇಶ ಚತುರ್ಥಿ, ವಾರಸಿದ್ಧಿ ವಿನಾಯಕ ವ್ರತದ ಕಾರಣ, ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ, ಪಣಜಿ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

English summary
Banks have a long holiday so know this before going to the bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X