ಐಟಿ ದೈತ್ಯ ಎಸ್‌ಎಪಿನಿಂದ 3000 ನೌಕರರ ವಜಾ
ಜಗತ್ತಿನಾದ್ಯಂತ ಪ್ರಮುಖ ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳ ವಜಾ ಮಾಡುತ್ತಿರುವ ಸಾಲಿಗೆ ಮತ್ತೊಂದು ಐಟಿ ಕಂಪನಿ ಸೇರಿದೆ. ಐಟಿ ದೈತ್ಯ ಸ್ಯಾಪ್ (ಎಸ್‌ಎಪಿ) ಕೂಡ ತನ್ನ 3000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ.
ನವದೆಹಲಿ, ಜನವರಿ 27: ಜಗತ್ತಿನಾದ್ಯಂತ ಪ್ರಮುಖ ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳ ವಜಾ ಮಾಡುವುದನ್ನು ಮುಂದುವರೆಸಿದ್ದು ಈಗ ಐಟಿ ದೈತ್ಯ ಸ್ಯಾಪ್ (ಎಸ್‌ಎಪಿ) ಕೂಡ ತನ್ನ 3000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ.
ರಾಯಿಟರ್ಸ್‌ನ ವರದಿಯ ಪ್ರಕಾರ, ವಾಲ್ಡೋರ್ಫ್ ಮೂಲದ ಕಂಪನಿ ಎಸ್‌ಎಪಿಯು ತನ್ನ ಪ್ರಮುಖ ವ್ಯವಹಾರವನ್ನು ಬಲಪಡಿಸಲು ಮತ್ತು ದಕ್ಷತೆಯನ್ನು ಸುಧಾರಿಸಲು ಉದ್ದೇಶಪೂರ್ವಕವಾಗಿ ತನ್ನ ನೌಕರರ ಬಲದ ಪುನರ್ ರಚನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಎಸ್‌ಎಪಿಯ ಗಳಿಕೆಯ ವರದಿಯ ಪ್ರಕಾರ, ಸುಮಾರು 2.5 ಪ್ರತಿಶತದಷ್ಟು ಉದ್ಯೋಗಿಗಳು ಎಸ್‌ಎಪಿ ವಜಾಗೊಳಿಸುವಿಕೆಗೆ ಒಳಗಾಗುತ್ತಾರೆ. ಎಸ್‌ಎಪಿ ಪ್ರಪಂಚದಾದ್ಯಂತ 1,20,000 ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ 3,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ನಿರೀಕ್ಷೆಯಿದೆ.

ಮುಖ್ಯವಾಗಿ 2023ರ ಮೊದಲ ತ್ರೈಮಾಸಿಕದಲ್ಲಿ ಉದ್ಯೋಗ ಕಡಿತವು ಕಂಪನಿಗೆ 250ರಿಂದ 300 ಮಿಲಿಯನ್ ಯುರೋಗಳಷ್ಟು ವೆಚ್ಚವಾಗಲಿದೆ ಎಂದು ಸಾಫ್ಟ್‌ವೇರ್ ಕಂಪನಿಯು ಹೇಳಿದೆ. ಪುನರ್‌ರಚನೆಯು 2024 ರಿಂದ ವಾರ್ಷಿಕ 300ರಿಂದ 350 ಮಿಲಿಯನ್ ಯುರೋಗಳಷ್ಟು ಉಳಿತಾಯಕ್ಕೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಐಬಿಎಂ ತನ್ನ 3900 ನೌಕರರನ್ನು ವಜಾಗೊಳಿಸಿದ ಸುದ್ದಿಯ ಸ್ವಲ್ಪ ಸಮಯದ ನಂತರ ಎಸ್‌ಎಪಿ ವಜಾ ಸುದ್ದಿ ಬಂದಿದೆ. ಟೆಕ್ ಕಾರ್ಪೊರೇಶನ್ ಐಬಿಎಂ ಟೆಕ್ ನಿಧಾನಗತಿಯ ಮಧ್ಯೆ ಸುಮಾರು 3,900 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ. ಟೆಕ್ ಲೇಆಫ್‌ಗಳು ಆರಂಭದಲ್ಲಿ ನವೆಂಬರ್ 2022 ರಲ್ಲಿ ಪ್ರಾರಂಭವಾಗಿದೆ.
ಎಲೋನ್ ಮಸ್ಕ್ ಅವರ ಸ್ವಾಧೀನದ ನಂತರ ಟ್ವಿಟರ್‌ನಿಂದ ಪ್ರಾರಂಭಿಸಿ ಅನೇಕ ಟೆಕ್ ಮತ್ತು ಐಟಿ ದೈತ್ಯರು ಉದ್ಯೋಗಿಗಳ ಸಾಮೂಹಿಕ ವಜಾಗಳನ್ನು ಘೋಷಿಸಿದರು. ಮೆಟಾ ಅದರ ಹಿಂದೆ 11,000 ಉದ್ಯೋಗಿಗಳನ್ನು ವಜಾಗೊಳಿಸಿತು. ಮೈಕ್ರೋಸಾಫ್ಟ್ ಕೂಡ 10,000 ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಘೋಷಿಸಿತು. ಇತ್ತೀಚೆಗೆ, 12,000 ಉದ್ಯೋಗಿಗಳನ್ನು ಐಟಿ ದೈತ್ಯ ಗೂಗಲ್‌ನ ಮಾತೃಸಂಸ್ಥೆ ಅಲ್ಪಾಬೆಟ್ ನೌಕರರ ಮಾಡಿ 2023ರ ವರ್ಷವನ್ನು ಕೆಟ್ಟದಾಗಿ ಬರಮಾಡಿಕೊಂಡಿತು.
ಐಟಿ ಕಂಪನಿಗಳು ಗ್ರಾಹಕರಿಂದ ಖರ್ಚುಗಳಿಂದ ಪ್ರಭಾವಿತವಾಗಿವೆ. ಇತ್ತೀಚಿನ ವಜಾಗೊಳಿಸುವಿಕೆಗೆ ಸಂಭಾವ್ಯ ಹಿಂಜರಿತದ ಭಯ ಕಾರಣವಾಗಿದೆ. ಮೈಕ್ರೋಸಾಫ್ಟ್ ಮತ್ತು ಗೂಗಲ್ ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಗಳ ಘೋಷಣೆಯ ನಂತರ ಐಬಿಎಂ ವಜಾಗೊಳಿಸುವ ನಿರ್ಧಾರ ಘೋಷಣೆಯಾಗಿದೆ .












Click it and Unblock the Notifications