Get Updates
Get notified of breaking news, exclusive insights, and must-see stories!

ಮುಂದುವರಿದ ವಜಾ ಪ್ರಕ್ರಿಯೆ: ಲಾಭದಲ್ಲಿದ್ದರೂ ಶೇ 30ರಷ್ಟು ನೌಕರರನ್ನು ತೆಗೆಯುತ್ತಿರುವ ಕಂಪನಿ- ಯಾವುದು ಗೊತ್ತೇ?

ಜಗತ್ತಿನಾದ್ಯಂತ ಹೆಸರಾಂತ ಕಂಪನಿಗಳು ನೌಕರರ ವಜಾಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಿವೆ. ಕೇವಲ ನಷ್ಟದಲ್ಲಿರುವ ಕಂಪನಿಗಳು ಅಷ್ಟೇ ಅಲ್ಲದೇ, ಲಾಭದಲ್ಲಿರುವ ಕಂಪನಿಗಳು ಉದ್ಯೋಗಿಗಳನ್ನು ನೌಕರಿಯಿಂದ ತೆಗೆದುಹಾಕುತ್ತಿದೆ.

ಬೆಂಗಳೂರು, ಫೆಬ್ರವರಿ 04: ಜಗತ್ತಿನಾದ್ಯಂತ ಹೆಸರಾಂತ ಕಂಪನಿಗಳು ನೌಕರರ ವಜಾಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಿವೆ. ಕೇವಲ ನಷ್ಟದಲ್ಲಿರುವ ಕಂಪನಿಗಳು ಅಷ್ಟೇ ಅಲ್ಲದೇ, ಲಾಭದಲ್ಲಿರುವ ಕಂಪನಿಗಳು ಉದ್ಯೋಗಿಗಳನ್ನು ನೌಕರಿಯಿಂದ ತೆಗೆದುಹಾಕುತ್ತಿದೆ. ಈ ಬೆಳವಣಿಗೆಗಳಿಂದ ಕೋಟ್ಯಾಂತರ ಉದ್ಯೋಗಿಗಳಲ್ಲಿ ಆತಂಕ ಶುರುವಾಗಿದೆ. 2023 ರಲ್ಲಿಯೂ ವಜಾಗಳಿಸುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಜ್ಞರು ಹೇಳಿದ್ದಾರೆ.

ವಿವಿಧ ಮಾಧ್ಯಮ ವರದಿಗಳ ಪ್ರಕಾರ, 2022 ರಲ್ಲಿ Airbnb ಕಂಪನಿಯು ಲಾಭವನ್ನು ಗಳಿಸಿದೆ. ಕಳೆದ ವರ್ಷದಲ್ಲಿ Airbnb ಮಾಡಿದ ಲಾಭವು $ 1.9 ಶತಕೋಟಿ ಎಂದು ವರದಿಯಾಗಿದೆ. ಆದರೂ, ಆನ್‌ಲೈನ್ ಹಾಸ್ಪಿಟಾಲಿಟಿ ಕಂಪನಿಯಾಗಿರುವ Airbnb ತನ್ನ ಸಿಬ್ಬಂದಿಯಲ್ಲಿ ಶೇ 30ರಷ್ಟನ್ನು ವಜಾಗೊಳಿಸಲು ಮುಂದಾಗಿದೆ.

Layoff Continues: Airbnb Cuts 30% Recruiting Staff Despite Profitable 2022

ಬ್ಲೂಮ್‌ಬರ್ಗ್ ಪ್ರಕಾರ, ಸಿಬ್ಬಂದಿಯನ್ನು ವಜಾಗೊಳಿಸುವ ನಿರ್ಧಾರವು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪನಿಯ ಮುಖ್ಯ ಕಚೇರಿಯಿಂದ ಹೊರಬಿದ್ದಿದೆ. ಒಟ್ಟು 6,800 ಉದ್ಯೋಗಿಗಳಲ್ಲಿ ಶೇ 30ರಷ್ಟು ಜನರನ್ನು ತೆಗೆದುಹಾಕಲು ಕಂಪನಿ ನಿರ್ಧರಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಹೊರಬಂದಿರುವ ಈ ಮಾಹಿತಿ ಅನೇಕರಿಗೆ ಆಘಾತವನ್ನುಂಟು ಮಾಡಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಂಸ್ಥೆಯು 2023 ರಲ್ಲಿ ತನ್ನ ವಜಾಗೊಳಿಸುವ ಪ್ರಕ್ರಿಯೆಯನ್ನು ಮುಂದುರಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

'ಕಳೆದ ಮೂರು ವರ್ಷಗಳಲ್ಲಿ ನಾವು ಹೆಚ್ಚು ಕೇಂದ್ರೀಕೃತ ಕಂಪನಿಯಾಗಿದ್ದೇವೆ. ಕಂಪನಿಯು ಈ ವರ್ಷ ತನ್ನ ನೌಕರರನ್ನು ಕಳೆದುಕೊಳ್ಳುತ್ತಿರುವುದಕ್ಕೆ ನಮಗೆ ಬೇಸರವಿದೆ' ಎಂದು Airbnb ವಕ್ತಾರರು ಹೇಳಿದ್ದಾರೆ.

Layoff Continues: Airbnb Cuts 30% Recruiting Staff Despite Profitable 2022

2020 ರಲ್ಲಿ, ಕಂಪನಿಯು 25 ಪ್ರತಿಶತದಷ್ಟು ಉದ್ಯೋಗಿಗಳನ್ನು ಅಂದರೆ, ಸುಮಾರು 1,900 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಆ ಸಮಯದಲ್ಲಿ ಕೋವಿಡ್‌ ಸಾಂಕ್ರಾಮಿಕವು ಕಂಪನಿಯನ್ನು ಹೆಚ್ಚು ಭಾದಿಸಿತ್ತು.

ಡಿಸೆಂಬರ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ Airbnb ತನ್ನ ಆದಾಯದಲ್ಲಿ 24 ಪ್ರತಿಶತ ಬೆಳವಣಿಗೆಯನ್ನು ಕಂಡಿದೆ. ಇದು ತ್ರೈಮಾಸಿಕದಲ್ಲಿ $319 ಮಿಲಿಯನ್ ನಿವ್ವಳ ಆದಾಯವನ್ನು ವರದಿ ಮಾಡಿದೆ. ಇದು ಒಂದು ವರ್ಷದ ಹಿಂದಿನ $55 ಮಿಲಿಯನ್‌ಗಿಂತ ಹೆಚ್ಚಾಗಿದೆ.

ಏತನ್ಮಧ್ಯೆ, Alphabet Inc ನ ಸ್ವಯಂ-ಚಾಲನಾ ತಂತ್ರಜ್ಞಾನ ಘಟಕವಾಗಿರುವ Waymo, ಶುಕ್ರವಾರದ ಎರಡನೇ ಸುತ್ತಿನ ಉದ್ಯೋಗ ಕಡಿತ ಪ್ರಕ್ರಿಯೆಯಲ್ಲಿ 137 ಉದ್ಯೋಗಿಗಳನ್ನು ವಜಾಗೊಳಿಸಿದೆ.

2023 ರಲ್ಲಿ ನೌಕರರನ್ನು ವಜಾಗೊಳಿಸಿರುವ ಕಂಪನಿಗಳು

Twitter: ಶೇ 10 ಉದ್ಯೋಗಿಗಳನ್ನು ವಜಾಗೊಳಿಸಿದೆ (ಫೆಬ್ರವರಿ, 2023)
Twillo: ಶೇ 17 ಉದ್ಯೋಗಿಗಳನ್ನು ವಜಾಗೊಳಿಸಿದೆ (ಫೆಬ್ರವರಿ, 2023)
Roomba: ಶೇ 7 ಉದ್ಯೋಗಿಗಳನ್ನು ವಜಾಗೊಳಿಸಿದೆ (ಫೆಬ್ರವರಿ, 2023)
Disney: ಶೇ 3 ಉದ್ಯೋಗಿಗಳನ್ನು ವಜಾಗೊಳಿಸಿದೆ (ಫೆಬ್ರವರಿ, 2023)
Zoom: ಶೇ 15 ಉದ್ಯೋಗಿಗಳನ್ನು ವಜಾಗೊಳಿಸಿದೆ (ಫೆಬ್ರವರಿ, 2023)
Dell: ಶೇ 5 ಉದ್ಯೋಗಿಗಳನ್ನು ವಜಾಗೊಳಿಸಿದೆ (ಫೆಬ್ರವರಿ, 2023)
HubSpot: ಶೇ 7 ಉದ್ಯೋಗಿಗಳನ್ನು ವಜಾಗೊಳಿಸಿದೆ (ಫೆಬ್ರವರಿ, 2023)
PayPal: ಶೇ 7 ಉದ್ಯೋಗಿಗಳನ್ನು ವಜಾಗೊಳಿಸಿದೆ (ಫೆಬ್ರವರಿ, 2023)
IBM: ಶೇ 1.5 ಉದ್ಯೋಗಿಗಳನ್ನು ವಜಾಗೊಳಿಸಿದೆ (ಫೆಬ್ರವರಿ, 2023)
Gemini: ಶೇ 10 ಉದ್ಯೋಗಿಗಳನ್ನು ವಜಾಗೊಳಿಸಿದೆ (ಜನವರಿ, 2023)
Yankee Candle: ಶೇ 13 ಉದ್ಯೋಗಿಗಳನ್ನು ವಜಾಗೊಳಿಸಿದೆ (ಜನವರಿ, 2023)
3M: ಶೆ 1 ಉದ್ಯೋಗಿಗಳನ್ನು ವಜಾಗೊಳಿಸಿದೆ (ಜನವರಿ, 2023)
Spotify: ಶೇ 6 ಉದ್ಯೋಗಿಗಳನ್ನು ವಜಾಗೊಳಿಸಿದೆ (ಜನವರಿ, 2023)
Google: ಶೇ 6 ಉದ್ಯೋಗಿಗಳನ್ನು ವಜಾಗೊಳಿಸಿದೆ (ಜನವರಿ, 2023)
Microsoft: ಶೇ 4-5 ಉದ್ಯೋಗಿಗಳನ್ನು ವಜಾಗೊಳಿಸಿದೆ (ಜನವರಿ, 2023)
Amazon: ಶೇ 1-2 ಉದ್ಯೋಗಿಗಳನ್ನು ವಜಾಗೊಳಿಸಿದೆ (ಜನವರಿ, 2023)
Carta: ಶೇ 10 ಉದ್ಯೋಗಿಗಳನ್ನು ವಜಾಗೊಳಿಸಿದೆ (ಜನವರಿ, 2023)
Coinbase: ಶೇ 20 ಉದ್ಯೋಗಿಗಳನ್ನು ವಜಾಗೊಳಿಸಿದೆ (ಜನವರಿ, 2023)
DirecTV: ಶೇ 5-6 ಉದ್ಯೋಗಿಗಳನ್ನು ವಜಾಗೊಳಿಸಿದೆ (ಜನವರಿ, 2023)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+