• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದ ಅತಿ ಎತ್ತರದ ಪ್ರತಿಮೆ ನಿರ್ಮಿಸಲಿರುವ ಎಲ್ & ಟಿ

By Mahesh
|

ಗಾಂಧಿನಗರ, ಅ.28: ವಿಶ್ವದಲ್ಲಿಯೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ನಿರ್ಮಾಣ ಮಾಡುವ ಗುತ್ತಿಗೆಯನ್ನು ಲಾರ್ಸನ್ ಅಂಡ್ ಟರ್ಬೋ (ಎಲ್ ಅಂಡ್ ಟಿ) ಕಂಪೆನಿ ಪಡೆದುಕೊಂಡಿದೆ. ಗುಜರಾತ್ ಸರ್ಕಾರ ‘ಏಕತೆಯ ಪ್ರತಿಮೆ'ಯನ್ನು ನಿರ್ಮಾಣ ಗುತ್ತಿಗೆ ಕಾಮಗಾರಿಯನ್ನು ಸೋಮವಾರ ಅಧಿಕೃತವಾಗಿ ಎಲ್ ಅಂಡ್ ಟಿ ಕಂಪನಿಗೆ ನೀಡಿದೆ.

ಸುಮಾರು 182ಮೀಟರ್ ಎತ್ತರದ ಏಕತಾ ಪ್ರತಿಮೆ ನಿರ್ಮಾಣಕ್ಕೆ ತಗಲುವ ಅಂದಾಜು ವೆಚ್ಚ ಬರೋಬ್ಬರಿ 2979 ಕೋಟಿ ರು.

ಕಾಮಗಾರಿ ನಾಲ್ಕು ವರ್ಷದೊಳಗೆ ಮುಗಿಯಲಿದ್ದು, 2018ರ ವೇಳೆಗೆ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ಆನಂದಿ ಬೇನ್ ಪಟೇಲ್ ತಿಳಿಸಿದ್ದಾರೆ.

ಷೇರುಪೇಟೆಯಲ್ಲಿ ಎಲ್ ಅಂಡ್ ಟಿ ಷೇರುಗಳು ಮಂಗಳವಾರ ಮಧ್ಯಾಹ್ನದ ವೇಳೆ ಬಿಎಸ್ಇನಲ್ಲಿ 1573.65 ರು.ನಂತೆ ಶೇ 0.61ರಷ್ಟು ಏರಿಕೆ ಕಂಡಿತ್ತು. ಎನ್ಎಸ್ ಇನಲ್ಲಿ 1577.50 ರು.ನಂತೆ ಶೇ 0.64ರಷ್ಟು ಏರಿಕೆ ಕಂಡಿತ್ತು.

ಇದರಲ್ಲಿ 1347 ಕೋಟಿ ರೂ. ಮುಖ್ಯ ಪ್ರತಿಮೆಗೆ ಖರ್ಚಾಗಲಿದೆ. 235 ಕೋಟಿ ರೂ. ವಸ್ತು ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ ಗೆ ತಗುಲಲಿದೆ. 83 ಕೋಟಿ ರೂ. ಹಣವು ಪ್ರತಿಮೆ ಮತ್ತು ಸೇತುವೆಗೆ ಸಂಪರ್ಕ ಕಲ್ಪಿಸಲು ಖರ್ಚಾಗಲಿದೆ. ಎಲ್ ಅಂಡ್ ಟಿ ಸಂಸ್ಥೆ 15 ವರ್ಷಗಳ ಕಾಲ ನಿರ್ವಹಣೆ ಹೊಣೆ ಹೊರಲಿದ್ದು, ಇದಕ್ಕಾಗಿ 657 ಕೋಟಿ ರೂ. ಹಣವನ್ನು ಪಡೆಯಲಿದೆ ಎಂದು ಸಿಎಂ ಆನಂದಿ ಬೇನ್ ಅವರು ವಿವರಿಸಿದರು. [200 ಕೋಟಿ ಟ್ವೀಟ್ ಲೋಕದಲ್ಲಿ ಶಾಕ್]

75 ಸಾವಿರ ಕ್ಯೂಬೆಕ್ ಮೀಟರ್ ಕಾಂಕ್ರಿಟ್, 5700 ಮೆಟ್ರಿಕ್ ಟನ್ ಕಬ್ಬಿಣ, 18,500 ಉಕ್ಕು, 22,500 ಕಂಚು ಸೇರಿದಂತೆ ಮತ್ತಿತರ ವಸ್ತುಗಳನ್ನು ಬಳಸಿಕೊಳ್ಳಲಾಗುತ್ತದೆ. ಗುಜರಾತಿನ ನರ್ಮದಾ ಜಿಲ್ಲೆಯ ಕೇವದಿಯಾ ಪ್ರದೇಶದಲ್ಲಿರುವ ಸರ್ದಾರ್ ಸರೋವರ್ ಡ್ಯಾಮ್ ಪಕ್ಕ ಪ್ರತಿಮೆ ನಿರ್ಮಿಸಲಾಗುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದಲೇ ವಿವಿಧ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.[ರಾಷ್ಟ್ರೀಯ ಏಕತಾ ದಿನಾಚರಣೆ ಮಹತ್ವವೇನು?]

ಸ್ವತಂತ್ರ ಭಾರತದ ಪ್ರಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ನೆನಪಿಗಾಗಿ ‘ಏಕತೆಯ ಪ್ರತಿಮೆ'ಯನ್ನು ನಿರ್ಮಿಸಲು ರೈತರಿಂದ ಕಬ್ಬಿಣದ ಚಿಕ್ಕ ಚಿಕ್ಕ ತುಂಡುಗಳನ್ನು ಸಂಗ್ರಹಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟು ಯೋಜನಾ ವೆಚ್ಚ 2,063 ಕೋಟಿ ರು ಗೂ ಅಧಿಕ ಎಂದು ಗುಜರಾತ್ ಸರ್ಕಾರದ ಅಧಿಕೃತ ವೆಬ್ ತಾಣಗಳು ಈ ಹಿಂದೆ ಘೋಷಿಸಿದ್ದವು. ಕೇಂದ್ರ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ನೀಡಲಾಗಿರುವ ಮೊತ್ತಕ್ಕಿಂತ ಸರ್ದಾರ್ ಪ್ರತಿಮೆಗೆ ನೀಡಿರುವ ಅನುದಾನ ಮೊತ್ತ ಎಲ್ಲರ ಹುಬ್ಬೇರಿಸಿತ್ತು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆಯಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Gujarat government on Monday issued work order for construction of the Statue of Unity – World’s tallest statue in the riverbed of Narmada near Kevadia in Gujarat to the engineering major Larsen & Toubro (L& T). The work order is worth Rs 2,979 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more