ಇನ್​ವೆಸ್ಟ್ ಕರ್ನಾಟಕ 2016ಕ್ಕಾಗಿ ಮೊಬೈಲ್ ಆಪ್

Posted By:
Subscribe to Oneindia Kannada

ಬೆಂಗಳೂರು, ಜ. 31: ಜಾಗತಿಕ ಹೂಡಿಕೆದಾರರ ಸಮಾವೇಶಕ್ಕಾಗಿ ರಾಜ್ಯ ಸರ್ಕಾರ ಸಕಲ ರೀತಿಯಿಂದ ಸಿದ್ಧವಾಗುತ್ತಿದ್ಪ್ದು, ಇನ್​ವೆಸ್ಟ್ ಕರ್ನಾಟಕ 2016 ರ ಸಮಗ್ರ ಮಾಹಿತಿ ನೀಡಲು ಮೊಬೈಲ್ ಆಪ್ಲಿಕೇಷನ್ ಅಭಿವೃದ್ಧಿಪಡಿಸಿದೆ, ಲೋಕಾರ್ಪಣೆ ಮಾಡಲಾಗಿದೆ.

ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರು ಶನಿವಾರ ಈ ಮೊಬೈಲ್ ಅಪ್ಲಿಕೇಷನ್(Invest Karnataka-2016) ಲೋಕಾರ್ಪಣೆ ಮಾಡಿದರು. [ಮೇಕ್ ಇನ್ ಕರ್ನಾಟಕ ಎಂದ ಸಿದ್ದರಾಮಯ್ಯ]

ಫೆ.3ರಿಂದ 5ರ ತನಕ ನಡೆಯಲಿರುವ ಹೂಡಿಕೆದಾರರ ಸಮಾವೇಶದಲ್ಲಿ ಗಣ್ಯರ ನೋಂದಣಿ ಪ್ರಕ್ರಿಯೆಯನ್ನು ಸುಲಭವಾಗಿಸಲು ಈ ಆಪ್ ನೆರವಾಗಲಿದೆ. ಇದಲ್ಲದೆ ಹೂಡಿಕೆದಾರರಿಗೆ ಉಪಯುಕ್ತ ಮಾಹಿತಿ, ಬಂಡವಾಳ ಹೂಡಿಕೆಯಿಂದ ಆಗುವ ಪ್ರಯೋಜನ, ಹೂಡಿಕೆ ಮಾಡಬಹುದಾದ ಕ್ಷೇತ್ರಗಳ ಮಾಹಿತಿ, ಸಮಾವೇಶಕ್ಕೆ ಸಂಬಂಧಿಸಿದ ತಾಜಾ ಸುದ್ದಿಗಳು ಸೇರಿದಂತೆ ಹಲವು ವಿವರಗಳು ಇದರಲ್ಲಿ ಲಭ್ಯವಿರಲಿದೆ. [ಬಂಡವಾಳ ಹೂಡಿಕೆ ಸಮಾವೇಶ ಯಾಕಾಗಿ?]

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಇನ್ ವೆಸ್ಟ್ ಕರ್ನಾಟಕ-2016 ಸಮಾವೇಶಕ್ಕಾಗಿ ಬರುವ ಉದ್ಯಮಿಗಳು, ಹೂಡಿಕೆದಾರರು ಮತ್ತು ಗಣ್ಯರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲು ಫೆ.1 ರಿಂದ 5ರವರೆಗೆ ಬಳ್ಳಾರಿ ರಸ್ತೆ ಮತ್ತು ಸುತ್ತಮುತ್ತಲ ರಸ್ತೆಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಗೂಡ್ಸ್ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಆಂಡ್ರಾಯ್ಡ್ ಅಪ್ಲಿಕೇಷನ್ ಉಚಿತವಾಗಿ ಲಭ್ಯವಿದೆ

ಆಂಡ್ರಾಯ್ಡ್ ಅಪ್ಲಿಕೇಷನ್ ಉಚಿತವಾಗಿ ಲಭ್ಯವಿದೆ

ಗೂಗಲ್ ಪ್ಲೇಸ್ಟೋರ್ ನಲ್ಲಿ ಈ ಆಂಡ್ರಾಯ್ಡ್ ಅಪ್ಲಿಕೇಷನ್ ಉಚಿತವಾಗಿ ಲಭ್ಯವಿದೆ. ಆಂಡ್ರಾಯ್ಡ್ 3.0 ಆಪರೇಟಿಂಗ್ ಸಿಸ್ಟಮ್ ಗಿಂತ ಹೆಚ್ಚಿನ ಓಎಸ್ ಇದ್ದರೆ ಸಾಕು. 12 ಎಂಬಿ ತೂಗುವ ಅಪ್ಲಿಕೇಷನ್ ಭಾರಿ ಗಾತ್ರದ್ದು ಎನಿಸುತ್ತದೆ. ಅಪ್ಲಿಕೇಷನ್ ಬಗ್ಗೆ ನಿಮ್ಮ ಪ್ರತಿಕ್ರಿಯೆಗಳನ್ನು ಈ ಇಮೇಲ್ ವಿಳಾಸಕ್ಕೆ ಬರೆಯಬಹುದು.

ಅಪ್ಲಿಕೇಷನ್ ಮೂಲಕ ನೋಂದಣಿ

ಅಪ್ಲಿಕೇಷನ್ ಮೂಲಕ ನೋಂದಣಿ

ಸಮಾವೇಶದಲ್ಲಿ ಪಾಲ್ಗೊಳ್ಳಲು ಬಯಸುವವರು ಅಪ್ಲಿಕೇಷನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಳ್ಳಲು ಇಮೇಲ್ ಐಡಿ, ಫೋನ್ ನಂಬರ್, ಗುರುತಿನ ಚೀಟಿ ದಾಖಲೆಗಳಿದ್ದರೆ ಸಾಕು.

ಉಪನ್ಯಾಸ ಅತಿಥಿಗಳ ಪಟ್ಟಿ

ಉಪನ್ಯಾಸ ಅತಿಥಿಗಳ ಪಟ್ಟಿ

ಉಪನ್ಯಾಸ ನೀಡಲಿರುವ ಅತಿಥಿಗಳ ಪಟ್ಟಿಯಲ್ಲಿ ಬಯೋಕಾನ್ ನ ಕಿರಣ್ ಮಂಜುಂದಾರ್ ಶಾ, ಮೆಟಾಹೆಲಿಕ್ಸ್ ನ ಕೆಕೆ ನಾರಾಯಣನ್, ಎಚ್ ಸಿಜಿ ಹೆಲ್ತ್ ಕೇರ್ ನ ಸಿಇಒ ಬಿಎಸ್ ಅಜಯ್ ಕುಮಾರ್, ಬಯೋ ಫ್ಯೂಯಲ್ ವರ್ಕಿಂಗ್ ಗ್ರೂಪ್ ನ ಪ್ರೊ. ವೈ ಬಿ ರಾಮಕೃಷ್ಣ, ಟಯೋಟಾ ಕಿರ್ಲೋಸ್ಕರ್ ನ ಶೇಖರ್ ವಿಶ್ವನಾಥನ್ ಅವರ ಹೆಸರಿದೆ.

ಪ್ರದರ್ಶಕರ ಪಟ್ಟಿಯಲ್ಲಿ

ಪ್ರದರ್ಶಕರ ಪಟ್ಟಿಯಲ್ಲಿ

ಪ್ರದರ್ಶಕರ ಪಟ್ಟಿಯಲ್ಲಿ ಇ ಮುದ್ರಾ ಲಿಮಿಟೆಡ್, ಜಿಂದಾಲ್ ಸ್ಟೀಲ್ಸ್, ಜಿಎಸ್ಕೆ, ಜೆಕೆ ಟೈಯರ್ಸ್ ಸೇರಿದಂತೆ ಕರ್ನಾಟಕದ ಇಂಧನ ಸಂಪನ್ಮೂಲ ಸಂಸ್ಥೆಗಳಿವೆ. ಹೂಡಿಕೆದಾರರನ್ನು ಆಕರ್ಷಿಸಲು ದೇಶದ ಇತರೆ ಪ್ರಮುಖ ನಗರಗಳಲ್ಲಿ ರೋಡ್ ಶೋ ನಡೆಸಲಾಗಿದೆ. ಹೀಗಾಗಿ ದೇಶ, ವಿದೇಶದ ವಿವಿಧ ಕ್ಷೇತ್ರಗಳ ಪ್ರಮುಖ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರದರ್ಶನ, ವ್ಯಾಪಾರ, ವಹಿವಾಟು ನಡೆಸಲು ಉತ್ಸುಕವಾಗಿವೆ.

ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಗಳು

ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಗಳು

2010 ಜಿಮ್ ನಲ್ಲಿ : 389 ಒಡಂಬಡಿಕೆಗಳಿಗೆ ಸಹಿ, 3.92 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿತ್ತು.
2012 ಜಿಮ್ : 751 ಒಪ್ಪಂದಗಳಿಗೆ ಸಹಿ, 6.77 ಲಕ್ಷ ಕೋಟಿ ರು ಬಂಡವಾಳ ಹರಿದು ಬಂದಿತ್ತು.

ಸುಮಾರು 30,000 ಎಕರೆ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಇನ್ನೂ 20,000 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಗುರುತಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Siddaramaiah led Karnataka Government aiming to provide a digitally enhanced user platform for all participants, So, the State government has launched an Invest Karnataka 2016 mobile application said Minister for Large and Medium Industries and Tourism R.V. Deshpande
Please Wait while comments are loading...