ಕನ್ನಡ ಕಡೆಗಣಿಸಿದ ಫ್ಲಿಪ್ ಕಾರ್ಟ್ ಗೆ ಕನ್ನಡಿಗನಿಂದ ತಕ್ಕ ಪಾಠ
ಬೆಂಗಳೂರು, ಜೂ.24: ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ಕನ್ನಡ ಭಾಷೆ ಕಡೆಗಣಿಸಿ, ಹಿಂದಿಯಲ್ಲಿ ಜಾಹೀರಾತು ನೀಡುವುದನ್ನು ಕನ್ನಡಿಗ ನಿಶಾಂತ್ ಶೆಟ್ಟಿ ವಿರೋಧಿಸಿದ್ದಾರೆ. ಫ್ಲಿಪ್ ಕಾರ್ಟ್ ಮೂಲಕ ಆರ್ಡರ್ ಮಾಡಿದ್ದ ವಸ್ತುವನ್ನು ಕ್ಯಾನ್ಸಲ್ ಮಾಡಿ ತಕ್ಕ ಪಾಠ ಕಲಿಸಿದ್ದಾರೆ.
ಸಿಂಗಪುರ ಕಮ್ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಸಂಸ್ಥೆ ಕನ್ನಡ ಭಾಷೆ ಬಳಕೆ ಮಾಡದೆ ಕಡೆಗಣಿಸುತ್ತಿರುವುದರ ಬಗ್ಗೆ ಕನ್ನಡ ಗ್ರಾಹಕರು ಎಚ್ಚರಿಕೆ ನೀಡಿದ್ದರು. ಅದರೆ, ಈ ಬಗ್ಗೆ ಎಚ್ಚೆತ್ತುಕೊಳ್ಳದ ಫ್ಲಿಪ್ ಕಾರ್ಟ್ ಗೆ ನಿಶಾಂತ್ ಪ್ರತ್ಯುತ್ತರ ನೀಡಿದ್ದಾರೆ. ಆರ್ಡರ್ ರದ್ದಾದ ಕೂಡಲೇ ಫ್ಲಿಪ್ ಕಾರ್ಟ್ ನಿಂದ ನಿಶಾಂತ್ ಅವರಿಗೆ ಕರೆ ಬಂದಿದೆ. ಈ ಸಂಭಾಷಣೆ ವಿವರ ಈಗ ಲಭ್ಯವಿದೆ. [ಮಿಂಟ್ರಾ ಕೈವಶವಾದ ಬೆಂಗಳೂರಿನ ಪುಟ್ಟ ಕಂಪನಿ]
ಫ್ಲಿಪ್ ಕಾರ್ಡ್ ಬರೀ ಹಿಂದಿ ಮಾತನಾಡುವವರಿಗೆ ಮಾತ್ರ ಪ್ರಾಡೆಕ್ಟ್ ನೀಡುತ್ತಾರಂತೆ, ಕನ್ನಡ ಬಳಸುತ್ತಿಲ್ಲ ಈ ಬಗ್ಗೆ ಪ್ರಶ್ನಿಸಿದರೂ ಪ್ರಯೋಜನವಾಗಿಲ್ಲ. ಕನ್ನಡಿಗರು ಯಾರು ಆರ್ಡರ್ ಮಾಡುವುದಿಲ್ಲವೇ? ನಾನೇ ಲಕ್ಷ ರು ತನಕ ಇಲ್ಲಿ ತನಕ ಆನ್ ಲೈನ್ ಖರೀದಿ ಮಾಡಿದ್ದೇನೆ. ಫ್ಲಿಪ್ ಕಾರ್ಟ್ ಅಪ್ಲಿಕೇಷನ್ ಅನ್ ಇನ್ ಸ್ಟಾಲ್ ಮಾಡಿದ್ದೇನೆ. ಅಪ್ ತಮಿಳುನಾಡಿನಲ್ಲಿ ಎಲ್ಲಾ ಜಾಹೀರಾತು ತಮಿಳು ಭಾಷೆಯಲ್ಲೇ ಇರುತ್ತದೆ. ಇಲ್ಲಿ ಮಾತ್ರ ಏಕೆ ಹೀಗೆ? ಈ ಬಗ್ಗೆ ರಿಪೋರ್ಟ್ ಮಾಡಿ ಎಂದು ಫ್ಲಿಪ್ ಕಾರ್ಟ್ ಸಿಬ್ಬಂದಿಗೆ ನಿಶಾಂತ್ ಹೇಳಿದ್ದಾರೆ. [ಒನ್ ಇಂಡಿಯಾ ಕೂಪನ್ ಡಿಸ್ಕೌಂಟ್ ಮಜಾ]

ಕನ್ನಡದಲ್ಲಿ ಗ್ರಾಹಕ ಚಳುವಳಿ ಯಾಕೆ ಮುಖ್ಯ ಮತ್ತು ಮುಂದಿನ ದಿನಗಳಲ್ಲಿ ಅದು ಹೇಗೆ ಕನ್ನಡಕ್ಕೆ ಬಲ ತುಂಬುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಅನ್ನುವ ಬಗ್ಗೆ ಮುನ್ನೋಟ ಬ್ಲಾಗಿನ ಸಂಪಾದಕರಾದ ವಸಂತ ಶೆಟ್ಟಿ ಈ ಹಿಂದೆ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಜಾಗತೀಕರಣಕ್ಕೆ ಭಾರತ ತೆರೆದುಕೊಳ್ಳುತ್ತಿದ್ದಂತೆಯೇ ಮೂರು ಮುಖ್ಯ ಬದಲಾವಣೆಗಳು ನಮ್ಮ ಸಮಾಜದಲ್ಲಿ ಆಗಿವೆ. ಮೊದಲನೆಯದ್ದು, ಅರ್ಥ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರ ಕುಸಿಯುತ್ತ, ಖಾಸಗಿ ಸಂಸ್ಥೆ ಮತ್ತು ಬಂಡವಾಳದ ಪಾತ್ರ ಬೆಳೆಯುತ್ತ ಬಂದಿದೆ. [ಆನ್ ಲೈನ್ ಶಾಪಿಂಗು ಎಂಬ ಮೋಹ, ದಾಹ]
ಎರಡನೆಯದ್ದು, ತಂತ್ರಜ್ಞಾನದಲ್ಲಾಗುತ್ತಿರುವ ಕ್ಷಿಪ್ರ ಬದಲಾವಣೆಗಳು ಭಾಷೆಯ ಬಳಕೆಯ ವ್ಯಾಪ್ತಿ, ಬಗೆಯನ್ನು ಕಂಡು ಕೇಳರಿಯದ ರೀತಿಯಲ್ಲಿ ಬದಲಾಯಿಸಿದೆ.
ಮೂರನೆಯದ್ದು, ಉತ್ತಮ ಆರ್ಥಿಕ ನಿರ್ವಹಣೆ ತೋರುತ್ತಿದ್ದ, ಪ್ರಗತಿಶೀಲ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಂತಹ ರಾಜ್ಯಗಳ ನಗರ ಪ್ರದೇಶಗಳಿಗೆ ದೇಶದ ಇತರೆ ಭಾಗಗಳಿಂದ ಬಹಳ ದೊಡ್ಡ ಪ್ರಮಾಣದಲ್ಲಿ ವಲಸೆಯಾಗುವ ಮೂಲಕ ಅಲ್ಲಿನ ಸ್ಥಳೀಯ ಜನಲಕ್ಷಣ ಅಂದರೆ ಡೆಮಾಗ್ರಫಿಯ ಚಹರೆಯೇ ಬದಲಾಗುತ್ತಿದೆ. ಈ ಮೂರು ಬದಲಾವಣೆಗಳನ್ನು ಕೊಂಚ ವಿವರವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ. (ಒನ್ ಇಂಡಿಯಾ ಸುದ್ದಿ)












Click it and Unblock the Notifications