ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಗೆ ಭಾರಿ ಮೊತ್ತ ದಂಡ

By Mahesh
|
Google Oneindia Kannada News

Johnson and Johnson pays $US 2.2b settlement for drug marketing
ನ್ಯೂಯಾರ್ಕ್, ನ.5: ಮಕ್ಕಳ ವೈದ್ಯಕೀಯ ಪರಿಕರಗಳ ತಯಾರಿಕಾ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ 2.2 ಬಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ. ಮಕ್ಕಳ ಮನೋ ವೈದ್ಯಕೀಯ ಔಷಧಿಗಳನ್ನು ಯಾವುದೇ ಅನುಮತಿ ಪಡೆಯದೇ ಮಾರಾಟ ಮಾಡಿದ್ದಕ್ಕಾಗಿ ಅಂತಾರಾಷ್ಟ್ರೀಯ ನ್ಯಾಯಾಂಗ ಇಲಾಖೆ ಈ ಭಾರಿ ಮೊತ್ತದ ದಂಡ ಹಾಕಿದೆ.

ಮಕ್ಕಳಿಗಾಗಿಯೇ ಉಪಯೋಗಿಸುವ ಕೆಲ ಅವಶ್ಯಕ ವೈದ್ಯಕೀಯ ಪರಿಕರಗಳ ಪ್ರಮುಖ ತಯಾರಕರಾಗಿರುವ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ, ಈ ಹಿಂದೆ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ಅನುಮತಿ ಪಡೆಯದೇ ಮಕ್ಕಳ ಮನೋ ವೈದ್ಯಕೀಯ ಔಷಧಿ(Risperdal)ಗಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಸಂಸ್ಥೆಯ ವಿರುದ್ಧ ಸಾಮಾನ್ಯ ಮತ್ತು ಕ್ರಿಮಿನಲ್ ಪ್ರಕರಣಗಳು ದಾಖಲಾಗಿತ್ತು

ಮಾರುಕಟ್ಟೆ ನಿಯಮಗಳನ್ನು ಮೀರಿ ಈ ಔಷಧಿಯನ್ನು ಪ್ರಚಾರ ಮಾಡಲು ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ, ವೈದ್ಯರು ಮತ್ತು ಔಷಧಾಲಯಗಳಿಗೆ ಕಿಕ್ ಬ್ಯಾಕ್ ನೀಡಿದ ಆರೋಪವನ್ನು ಕೂಡ ಸಂಸ್ಥೆ ಎದುರಿಸುತ್ತಿದೆ. ಅಂತಾರಾಷ್ಟ್ರೀಯ ನ್ಯಾಯಾಂಗ ಇಲಾಖೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ ಬರೊಬ್ಬರಿ 2.2 ಬಿಲಿಯನ್ ಡಾಲರ್ ದಂಡ ವಿಧಿಸಿದ್ದು, ಅಮೆರಿಕಕ್ಕೆ ಸಂಬಂಧಪಟ್ಟಂತೆ ಖಾಸಗಿ ಸಂಸ್ಥೆಯೊಂದು ಕಾನೂನು ಮುರಿದು ಭಾರಿ ದಂಡ ತೆತ್ತಿರುವ ಮೂರನೇ ಅತಿದೊಡ್ಡ ದಂಡ ಪ್ರಕರಣವಾಗಿದೆ.

ಪ್ರಸ್ತುತ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಕಾನೂನು ಇಲಾಖೆ ವಿಧಿಸಿರುವ ದಂಡವನ್ನು ತೆರಲು ಒಪ್ಪಿಗೆ ಸೂಚಿಸಿದ್ದು, ಈ ಪೈಕಿ ನಾಗರೀಕ ವಲಯದ ಪ್ರಕರಣಗಳ ಇತ್ಯರ್ಥಕ್ಕಾಗಿ ಫೆಡರಲ್ ಮತ್ತು ರಾಜ್ಯಸರ್ಕಾರಗಳಿಗೆ ಒಟ್ಟು 1.72 ಬಿಲಿಯನ್ ಡಾಲರ್ ಹಣವನ್ನು ಮತ್ತು 485 ಬಿಲಿಯನ್ ಡಾಲರ್‌ಗಳನ್ನು ತನ್ನ ಅಪರಾಧಕ್ಕಾಗಿ ದಂಡವಾಗಿ ಪಾವತಿಸಬೇಕಿದೆ.

ಮಿತಿ ಮೀರಿರುವ ಮಾರುಕಟ್ಟೆ ಸ್ಪರ್ಧೆಯಿಂದಾಗಿ ವೈದ್ಯಕೀಯ ಪರಿಕರಗಳ ತಯಾರಿಕಾ ಸಂಸ್ಥೆಗಳು ಎಫ್‌ಡಿಎ(Food and Drug Administration) ಮಾನ್ಯತೆ ಪಡೆಯದೆಯೇ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಜನರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿವೆ. ಅಮೆರಿಕದ ಅಂತಾರಾಷ್ಟ್ರೀಯ ನ್ಯಾಯಾಂಗ ಇಲಾಖೆ ಸಂಸ್ಥೆಗೆ ಭಾರಿ ಮೊತ್ತದ ದಂಡ ವಿಧಿಸುವ ಮೂಲಕ ಇತರೆ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ 'ಯುರೋಪ್, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಬಿಕರಿಯಾಗಿರುವ ತನ್ನ 3.2 ಕೋಟಿ ಪ್ಯಾಕ್ ಜನನ ನಿಯಂತ್ರಣ ಸೇವನೆ ಮಾತ್ರೆ Cilestಅನ್ನು ಸ್ವಯಂಪ್ರೇರಿತವಾಗಿ ಹಿಂದಕ್ಕೆ ಪಡೆದುಕೊಳ್ಳಲಾಗುತ್ತಿದೆ' ಎಂದು ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Johnson and Johnson has agreed to pay a $US 2.2 billion settlement for marketing the use of some drugs for purposes not approved by the US Food and Drug Administration. The settlement relates to the alleged marketing of anti-psychosis drug Risperdal for the treatment of behavioural problems in dementia patients and children when it was approved by regulators for the treatment of schizophrenia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X