ಆಗಸ್ಟ್ 24ರ ಸಂಜೆಯಿಂದ ರಿಲಯನ್ಸ್ ಜಿಯೋ ಫೋನ್ ಬುಕ್ಕಿಂಗ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 24: ಜಿಯೋ ಫೋನ್ ಬುಕ್ಕಿಂಗ್ ಗುರುವಾರ(ಆಗಸ್ಟ್24) ಸಂಜೆ 5 ಗಂಟೆಯಿಂದ ಆರಂಭವಾಗಲಿದೆ. ರಿಲಯನ್ಸ್ ಹೊರತರುತ್ತಿರುವ ಉಚಿತ ಫೋನ್ ಕೊಳ್ಳಲು ಒಂದು ಬಾರಿ 1,500 ರು ಪಾವತಿಸಿದರೆ ಸಾಕು. ಭಾರತದಲ್ಲೇ ವಿನ್ಯಾಸಗೊಳಿಸಲಾಗಿರುವ ಈ ಫೋನ್ ಕೊಳ್ಳಲು ಗ್ರಾಹಕರು ನೀಡಿದ ಮೊತ್ತವನ್ನು ಕೂಡಾ ಸಂಸ್ಥೆ ಮರು ಪಾವತಿಸಲಿದೆ.

0 ರೂ.ಗೆ ಮೊಬೈಲ್, ಮುಖೇಶ್ ಅಂಬಾನಿ ಹೊಸ ಕಮಾಲ್!

ಜುಲೈ 21ರಂದು ರಿಲಯನ್ಸ್ ಇಂಡಸ್ಟ್ರಿ ಈ ಫೋನ್ ಬಿಡುಗಡೆ ಬಗ್ಗೆ ಘೋಷಣೆ ಮಾಡಿತ್ತು. ಉಚಿತ ಬುಕ್ಕಿಂಗ್ ಮಾಡಿದ ನಂತರ ಜಿಯೋ ಫೋನ್ 'ಪಹಲಾ ಆವೋ ಪಹಲೆ ಪಾವೋ' ಆಧಾರದ ಮೇಲೆ ಫೋನ್ ನೀಡಲಾಗುವುದು. ಈ ಫೋನ್ ನಲ್ಲಿ ವೈಸ್ ಕಾಲಿಂಗ್ ಉಚಿತವಾಗಿ ಸಿಗಲಿದೆ. ಜಿಯೋ ಫೋನ್ ನಲ್ಲಿ ಜಿಯೋ ಸಿಮ್ ಹೊಂದಿದ ಗ್ರಾಹಕರಿಗೆ ಅನಿಯಮಿತ ರೂಪದಲ್ಲಿ ಡೇಟಾ ಸಿಗಲಿದೆ.

ಅಂಬಾನಿಯ ಪುಕ್ಶೇಟಿ ಫೋನಿನಲ್ಲಿ ವಾಟ್ಸಾಪ್ ಇದೆಯಾ?

JioPhone Pre-Booking Opens on August 24-5pm amidst high demand

ಈ ಫೋನ್ ನಲ್ಲಿ ಜಿಯೋ 153 ರೂಪಾಯಿಗೆ ಪ್ರತಿ ತಿಂಗಳು ಉಚಿತ ವೈಸ್ ಕಾಲಿಂಗ್ ಹಾಗೂ ಅನಿಯಮಿತ ಡೇಟಾ ನೀಡಲಿದೆ. ಈ ಫೋನ್ ನಲ್ಲಿ ಜಿಯೋ ಮೆಸ್ಸೇಜಿಂಗ್, ಮನರಂಜನಾ ಅಪ್ಲಿಕೇಷನ್ ಗಳು ಉಚಿತವಾಗಿ ಡೌನ್ಲೋಡ್ ಆಗಲಿದೆ. ಇದರಲ್ಲಿ ಜಿಯೋ ಟಿವಿಯನ್ನು ನೋಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The much awaited JioPhone, which is set to unleash a Digital Life for 500 million feature phone users, will open for pre-booking on 24 August 2017, 5pm.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ