ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಜಿಯೋ ಪೋಸ್ಟ್ ಪೇಯ್ಡ್ ಆಫರ್ ಗಳಿಂದ ವೊಡಾಫೋನ್ ಐಡಿಯಾಗೆ ಪೆಟ್ಟು!''

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ರಿಲಯನ್ಸ್ ಜಿಯೋದಿಂದ ಈಚೆಗೆ ಘೋಷಿಸಲಾದ ಪೋಸ್ಟ್ ಪೇಯ್ಡ್ ಪ್ಲಾನ್ ಗಳು ವೊಡಾಫೋನ್ ಐಡಿಯಾಗೆ ಭರ್ತಿ ಪೆಟ್ಟು ನೀಡಲಿವೆ. ಆ ಕಂಪೆನಿಯ ಮಾರ್ಕೆಟ್ ಷೇರನ್ನು ಕಸಿದುಕೊಳ್ಳಲಿದೆ. ತುಂಬಾ ಸರಿಯಾದ ಸಮಯದಲ್ಲಿ ರಿಲಯನ್ಸ್ ಜಿಯೋದಿಂದ ಆಕರ್ಷಕವಾದ ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸಲಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ತಿಕ್ಕಾಟದಲ್ಲಿ ವೊಡಾಫೋನ್ ಐಡಿಯಾ ದೊಡ್ಡ ಮಟ್ಟದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳಲಿದೆ. ವೊಡಾಫೋನ್ ಗಿಂತಲೂ ಭಾರ್ತಿ ಏರ್ ಟೆಲ್ ನೆಟ್ ವರ್ಕ್ ಕವರೇಜ್ ಹಾಗೂ ಡಿಜಿಟಲ್ ವ್ಯಾಪ್ತಿ ದೊಡ್ಡದಿದೆ. ಆ ಕಾರಣಕ್ಕೆ ಈ ತಿಕ್ಕಾಟದಲ್ಲಿ ಭಾರ್ತಿ ಏರ್ ಟೆಲ್ ಗೆ ಅತಿ ಕಡಿಮೆ ಸಮಸ್ಯೆ ಆಗಲಿದೆ ಎಂದು ಜೆಪಿ ಮೋರ್ಗನ್ ಇತ್ತೀಚಿನ ತನ್ನ ವರದಿಯಲ್ಲಿ ಹೇಳಿದೆ.

JIO ಹೊಸ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆ: ಪ್ರಿಪೇಯ್ಡ್‌ನಿಂದ ಬದಲಾಗುವುದು ಹೇಗೆ?JIO ಹೊಸ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆ: ಪ್ರಿಪೇಯ್ಡ್‌ನಿಂದ ಬದಲಾಗುವುದು ಹೇಗೆ?

ಮೊಬೈಲ್ ಕರೆ- ಇಂಟರ್ನೆಟ್ ಹಾಗೂ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ದರ ಸಮರದ ನಂತರ ಏಷ್ಯಾದ ಶ್ರೀಮಂತ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋದಿಂದ ಮಂಗಳವಾರ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 500 GB ತನಕ ಡೇಟಾ, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ ಹಾಟ್ ಸ್ಟಾರ್ VIP ಚಂದಾದಾರಿಕೆ ಗ್ರಾಹಕರಿಗೆ ಲಭ್ಯವಾಗುತ್ತವೆ.

Jios Postpaid Plans Timed Well To Leverage Possible Churn Of VIL Subscribers: Analysts

ಇದೀಗ ಜಿಯೋ ಪೋಸ್ಟ್ ಪೇಯ್ಡ್ ವಿಭಾಗದಲ್ಲಿ ತಂದಿರುವ ಈ ಪ್ಲಾನ್ ಗಳು ಮಹತ್ತರ ಬದಲಾವಣೆಯನ್ನೇ ತರುತ್ತವೆ. ಏಕೆಂದರೆ, ಆವರೇಜ್ ರೆವೆನ್ಯೂ ಪರ್ ಯೂಸರ್ (ಎಆರ್ ಪಿಯು) ಪೋಸ್ಟ್ ಪೇಯ್ಡ್ ನಲ್ಲಿ ಪ್ರೀಪೇಯ್ಡ್ ಗಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ.

"ಈಗಿನ ಡೇಟಾ ವೆಚ್ಚವನ್ನು (ಪ್ರತಿ ಜಿಬಿಗೆ) ಒಟಿಟಿಗೂ ಸೇರಿ ಲೆಕ್ಕ ಹಾಕಿ ಹೇಳುವುದಾದರೆ, ಜಿಯೋದಿಂದ ಈಗ ಪ್ರೀಪೇಯ್ಶ್ ಪ್ಲಾನ್ ನಲ್ಲಿ ನೀಡುತ್ತಿರುವ ಅದೇ ಡೇಟಾ ಮಿತಿಯೊಂದಿಗೆ ಹೋಲಿಸಿದಲ್ಲಿ ಪೋಸ್ಟ್ ಪೇಯ್ಡ್ 50ರಿಂದ 33 ಪರ್ಸೆಂಟ್ ಅಗ್ಗವಾಗುತ್ತದೆ. ಇನ್ನು ಜಿಯೋದಿಂದ ಪೋಸ್ಟ್ ಪೇಯ್ಡ್ ಸ್ಮಾರ್ಟ್ ಫೋನ್ ಗ್ರಾಹಕರ ಸಂಖ್ಯೆಯನ್ನು 28 ಕೋಟಿಗೆ ಜಾಸ್ತಿ ಮಾಡಲು ಗುರಿ ಇರಿಸಿಕೊಳ್ಳಲಾಗಿದೆ ಹಾಗೂ ಎಆರ್ ಪಿಯು ಕೂಡ ಹೆಚ್ಚಿಸಿಕೊಳ್ಳಲು ಗುರಿ ಇರಿಸಿಕೊಂಡಿದ್ದಾರೆ,'' ಎಂದು ಜೆಪಿ ಮೋರ್ಗನ್ ಹೇಳಿದೆ.

ಈಗ ಹೆಡ್ ಲೈನ್ ಗಳಾಗುವಂತೆ ದರ ಇಳಿಸಿದೆವು ಅಂದರೆ ಆಗಲ್ಲ. ವೊಡಾಫೋನ್ ಐಡಿಯಾ ಹಾಗೂ ಭಾರ್ತಿ ಸಹ ಪೋಸ್ಟ್ ಪೇಯ್ಡ್ ಚಂದಾದಾರರಿಗೆ ಒಟಿಟಿ ಸಬ್ ಸ್ಕ್ರಿಪ್ಷನ್ ಒದಗಿಸಬೇಕಾಗುತ್ತದೆ ಎಂಬುದನ್ನು ಹೇಳಲಾಗಿದೆ. ಜಿಯೋದ ಪೋಸ್ಟ್ ಪೇಯ್ಡ್ ಕೊಡುಗೆ ಸರಿಯಾದ ಸಮಯದಲ್ಲಿ ಬಂದಿದ್ದು, ವೊಡಾ- ಐಡಿಯಾದ ಪಾಲನ್ನು ಅದು ತೆಗೆದುಕೊಳ್ಳಲಿದೆ. ಆದರೆ ಭಾರ್ತಿ ದೋಣಿಯನ್ನು ಪೂರ್ತಿ ಅಲುಗಾಡಿಸುವುದು ಕಷ್ಟ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

English summary
Jio new postpaid Plus plans will be more impact to the Vodafone idea subscribers: Analysts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X