• search

ಜಿಯೋ ಫೋನ್ 2 ಆಗಸ್ಟ್ 16ರಂದು ಫ್ಲಾಶ್ ಸೇಲ್ ನಲ್ಲಿ ಲಭ್ಯ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್ 14: ಭಾರತೀಯರೆಲ್ಲರಿಗೂ ಡಿಜಿಟಲ್ ಜೀವನಶೈಲಿ ಪರಿಚಯಿಸುವ ಪಯಣ ಮುಂದುವರೆಸಿರುವ ರಿಲಯನ್ಸ್ ಸಂಸ್ಥೆಯು ಜಿಯೋಫೋನ್ ನಂತರ ಜಿಯೋ ಫೋನ್ 2 ಹೊರತರುತ್ತೆ.

  2, 999 ರೂ ಬೆಲೆಯ ಜಿಯೋಫೋನ್ 2 ಮಾರುಕಟ್ಟೆ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ. ಆಗಸ್ಟ್ 16ರ ಮಧ್ಯಾಹ್ನ 12ರಿಂದ JIO.COMನಲ್ಲಿ ಫ್ಲಾಶ್ ಸೇಲ್ ಪ್ರಾರಂಭವಾಗಲಿದೆ.

  ರಿಲಯನ್ಸ್ ಲಾಭದಲ್ಲಿ ದಾಖಲೆ ಏರಿಕೆ, 20 ಕೋಟಿ ದಾಟಿದ ಗ್ರಾಹಕರು

  "ಜಿಯೋಫೋನ್ 2", ಆಗಸ್ಟ್ 16ರ ಮಧ್ಯಾಹ್ನ 12ರಿಂದ Jio.comನಲ್ಲಿ ನಡೆಯುವ ಫ್ಲಾಶ್ ಸೇಲ್ ಮೂಲಕ ಆನ್‌ಲೈನ್ ಖರೀದಿಗೆ ಲಭ್ಯವಾಗಲಿದೆ.

   Jio Phone 2 to Be Available on August 16 via Flash Sale

  ಜಿಯೋಫೋನ್‌ನ ಈ ಹೊಸ ಮಾದರಿಯಲ್ಲಿ ಅಡ್ಡಡ್ಡ (ಹಾರಿಜಾಂಟಲ್) ಪರದೆಯ ಡಿಸ್ಪ್ಲೇ ಜೊತೆಗೆ ಪೂರ್ಣಪ್ರಮಾಣದ ಕೀಬೋರ್ಡ್ ಕೂಡ ಇದೆ. ಅಡ್ಡಡ್ಡ ಡಿಸ್ಪ್ಲೇ‌ ಗ್ರಾಹಕರಿಗೆ ಉತ್ತಮ ವೀಕ್ಷಣಾ ಅನುಭವವನ್ನು ನೀಡಿದರೆ, ಪೂರ್ಣಪ್ರಮಾಣದ ಕೀಬೋರ್ಡ್‌ನಿಂದಾಗಿ ಸುಲಭ ವಿನ್ಯಾಸದ (ಕಂಪ್ಯೂಟರಿನಲ್ಲಿರುವಂತಹ) QWERTY ಕೀಲಿಮಣೆಯನ್ನು ಬಳಸುವುದು ಸಾಧ್ಯವಾಗಲಿದೆ.

  ಕೈಗೆಟುಕುವ ಬೆಲೆಯ ಮೂಲಕ ಭಾರತದಲ್ಲಿ ಡಿಜಿಟಲ್ ಕ್ರಾಂತಿಯನ್ನು ಇನ್ನಷ್ಟು ಚುರುಕುಗೊಳಿಸುವ ಉದ್ದೇಶವನ್ನು ಜಿಯೋಫೋನ್ ಹೊಂದಿದೆ. ಈ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನೂ ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದು, ಡಿಜಿಟಲ್ ಜೀವನಶೈಲಿಯನ್ನು ಆನಂದಿಸುವುದು ಸಾಧ್ಯವಾಗಲಿದೆ.

  ಜಿಯೋ ಪೇಮೆಂಟ್ ಬ್ಯಾಂಕ್: ರಿಲಯನ್ಸ್ ಜತೆ ಕೈಜೋಡಿಸಿದ ಎಸ್ಬಿಐ

  ಹೆಚ್ಚುವರಿ ಸವಲತ್ತುಗಳೊಡನೆ ಹೊಸದಾಗಿ ಪರಿಚಯಿಸಲಾಗುತ್ತಿರುವ ಜಿಯೋಫೋನ್ 2 ಮಾದರಿ, ದೇಶಾದ್ಯಂತ ವ್ಯಾಪಿಸಿರುವ ಜಿಯೋ ನೆಟ್‌ವರ್ಕ್‌ ಹಾಗೂ ಸದೃಢ ರೀಟೇಲ್ ಉಪಸ್ಥಿತಿಯಿಂದಾಗಿ, ಅತ್ಯಂತ ಕಡಿಮೆ ಸಮಯದಲ್ಲಿ 100 ಮಿಲಿಯನ್ ಗ್ರಾಹಕರನ್ನು ತನ್ನ ವೇದಿಕೆಗೆ ಕರೆತಂದ ವಿಕ್ರಮಕ್ಕಾಗಿ ಜಿಯೋಫೋನ್ ಸಜ್ಜಾಗುತ್ತಿದೆ. ಜಿಯೋಫೋನ್‌ನಲ್ಲಿ ಫೇಸ್‌ಬುಕ್ ಮತ್ತು ಯೂಟ್ಯೂಬ್ ಲಭ್ಯ. ವಾಟ್ಸಪ್ ಕೂಡ ಶೀಘ್ರವೇ ಬರಲಿದೆ!

   Jio Phone 2 to Be Available on August 16 via Flash Sale

  ಆಗಸ್ಟ್ 15ರಿಂದ ಪ್ರಾರಂಭಿಸಿ, ಜಿಯೋಫೋನ್‌ ಗ್ರಾಹಕರಿಗೆ ಫೇಸ್‌ಬುಕ್, ಯೂಟ್ಯೂಬ್‌ ಹಾಗೂ ಗೂಗಲ್ ಮ್ಯಾಪ್ಸ್‌ ಆಪ್‌ಗಳು ದೊರಕಲಿವೆ. ಇವೆಲ್ಲದರ ಜೊತೆಗೆ ಜಿಯೋಫೋನ್ ಸಾಧನಗಳಲ್ಲಿ ವಾಟ್ಸಪ್ ಕೂಡ ಸದ್ಯದಲ್ಲೇ ಲಭ್ಯವಾಗಲಿದೆ.

  ಜಿಯೋಫೋನ್ ಗ್ರಾಹಕರು ಈಗಾಗಲೇ ಉಚಿತ ವಾಯ್ಸ್ ಕರೆಗಳು ಹಾಗೂ ಜಿಯೋಟಿವಿ, ಜಿಯೋಸಿನಿಮಾ, ಜಿಯೋಮ್ಯೂಸಿಕ್ ಹಾಗೂ ಜಿಯೋಚಾಟ್‌ನಂತಹ ಉತ್ಕೃಷ್ಟ ಅಪ್ಲಿಕೇಶನ್‌ಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

  ಕರೆ ಮಾಡಲು, ಸಂದೇಶ ಕಳುಹಿಸಲು, ಅಂತರಜಾಲದಲ್ಲಿ ಮಾಹಿತಿ ಹುಡುಕಲು, ಹಾಡು ಕೇಳಲು, ವೀಡಿಯೋಗಳನ್ನು ನೋಡಲು ಹಾಗೂ ಜಿಯೋಫೋನ್‌ನಲ್ಲಿರುವ ಬೇರೆಲ್ಲ ಆಪ್‌ಗಳನ್ನು ಬಳಸಲು ಧ್ವನಿರೂಪದ ಆದೇಶ (ವಾಯ್ಸ್ ಕಮ್ಯಾಂಡ್) ನೀಡಬಹುದಾದ ವಿಶಿಷ್ಟ ವ್ಯವಸ್ಥೆಯನ್ನೂ ಜಿಯೋಫೋನ್‌ ಗ್ರಾಹಕರು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.

  ಹೆಚ್ಚು ಸಂಖ್ಯೆಯ ಭಾರತೀಯರು ಶಿಕ್ಷಣ, ಮನರಂಜನೆ, ಜ್ಞಾನ ಮತ್ತಿತರ ಪ್ರಮುಖ ಸೇವೆಗಳನ್ನು ಪಡೆದುಕೊಳ್ಳುವ ವಿಧಾನಕ್ಕೆ ಜಿಯೋಫೋನ್ ಹೊಸ ವ್ಯಾಖ್ಯಾನ ನೀಡುತ್ತಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Jio Phone 2 to Be Available on August 16 via Flash Sale. New phone successor of popular Jio Phone is priced at Rs 2,999. The Jio Phone 2 flash sale will be held only on Jio.com at 12pm.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more