ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ರೂಪಾಯಿ ರೀಚಾರ್ಜ್ ಪರಿಚಯಿಸಿದ ಜಿಯೋ!

By Mahesh
|
Google Oneindia Kannada News

ಬೆಂಗಳೂರು, ಜನವರಿ 18: ರಿಲಯನ್ಸ್ ಜಿಯೋ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಇತ್ತೀಚಿಗಷ್ಟೇ 153 ರೂಪಾಯಿ ರೀಚಾರ್ಜ್ ಯೋಜನೆಯನ್ನು ಪರಿಷ್ಕರಿಸಿ, ಕೊಡುಗೆ ನೀಡಲಾಗಿತ್ತು. ಈಗ ಅತಿ ಕಡಿಮೆ ಮೊತ್ತ ಎರಡು ಸಣ್ಣ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಒಂದು 24 ರೂಪಾಯಿ ರಿಚಾರ್ಜ್ ಯೋಜನೆ, ಇನ್ನೊಂದು 54 ರೂಪಾಯಿ ರಿಚಾರ್ಜ್ ಯೋಜನೆಯಾಗಿದೆ.

ಒಂದು ಷರತ್ತಿನೊಂದಿಗೆ ಜಿಯೋ ಹೊಸ 24 ರೂಪಾಯಿ ಯೋಜನೆ ಆರಂಭವಾಗುತ್ತದೆ. ಗ್ರಾಹಕ 24 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಹೈ ಸ್ಪೀಡ್ ನಲ್ಲಿ 500ಎಂಬಿ ಡೇಟಾ ಪ್ರತಿದಿನ ಲಭ್ಯವಾಗಲಿದೆ.

Jio Introduces Rs. 24, Rs. 54 Sachet Packs For Jio Phone Users

ರೀಚಾರ್ಜ್ ಡೇಟಾ(ಹೈ ಸ್ಪೀಡ್) ಮುಗಿದರೂ ಇಂಟರ್ನೆಟ್ ಜಾಲ್ತಿಯಲ್ಲಿರಲಿದೆ. ಆದರೆ, ವೇಗ ಮಾತ್ರ 64 kbps ಕ್ಕೆ ತಗ್ಗಲಿದೆ. ಇದಲ್ಲದೆ, ಅನಿಯಮಿತ ಕರೆ, ಉಚಿತವಾಗಿ 20 ಎಸ್ ಎಂ ಎಸ್ ಸಿಗಲಿದೆ. ಈ ಯೋಜನೆ ಎರಡು ದಿನಗಳ ವ್ಯಾಲಿಡಿಟಿ ಹೊಂದಿದೆ.

ಇನ್ನು 54 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ ಹೈಸ್ಪೀಡ್ 500ಎಂಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಹಾಗೂ 70 ಉಚಿತ ಎಸ್ ಎಂ ಎಸ್ ಸಿಗಲಿದೆ. ಈ ಯೋಜನೆ ಮಾನ್ಯತೆ 7 ದಿನ. ಈ ಎರಡು ಯೋಜನೆ 1500 ರೂಪಾಯಿಗಳ ಜಿಯೋ ಫೋನ್ ಸಿಮ್ ಹೊಂದಿರುವವರಿಗೆ ಮಾತ್ರ ಲಭ್ಯವಾಗಲಿದೆ.

English summary
Reliance Jio has introduced two new sachet packs priced at Rs. 24 and Rs. 54 with unlimited data and free call benefits for Jio Phone users. Jio Phone's new sachet pack priced at Rs. 24 offers 500 MB of high speed 4G data per day for a validity of 2 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X