ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರೇ ಎಚ್ಚರ! ಜಿಯೋಕಾಯಿನ್ ಆಪ್ ಎಂಬುದಿಲ್ಲ

By Mahesh
|
Google Oneindia Kannada News

ಮುಂಬೈ, ಫೆಬ್ರವರಿ 01: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋ ಕರೆನ್ಸಿ ಬಳಕೆ ಬಗ್ಗೆ ಕಡಿವಾಣ ಹಾಗೂ ನಿಯಂತ್ರಣಕ್ಕೆ ಸರ್ಕಾರ ಮುಂದಾಗಲಿದೆ. ಇದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಜೇಟ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಇದರ ಬೆನ್ನಲ್ಲೆ ರಿಲಯನ್ಸ್ ಸಂಸ್ಥೆ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಸಂಸ್ಥೆ ಯಾವುದೇ ಕ್ರಿಪ್ಟೋ ಕರೆನ್ಸಿ ಅಪ್ಲಿಕೇಷನ್ ಹೊಂದಿಲ್ಲ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಆಪ್ಲಿಕೇಷನ್ ಗಳು ನಕಲಿ, ಇದಕ್ಕೂ ಸಂಸ್ಥೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

Jio has not launched any JioCoin App

'ಜಿಯೋಕಾಯಿನ್ ಆಪ್‌ಗಳು ಇಂಟರ್ನೆಟ್‌ನಲ್ಲಿ ಲಭ್ಯವಿದ್ದು, ಜನರಿಂದ ಈ ಕ್ರಿಪ್ಟೋ ಕರೆನ್ಸಿಗೆ ಹೂಡಿಕೆ ಮಾಡಬಹುದೆಂದು ಕೋರಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಹಾಗೂ ಬೇರೆ ವೆಬ್‌ಸೈಟ್‌ಗಳಲ್ಲಿ ವರದಿಗಳು ಬಂದಿರುವುದನ್ನು ರಿಲಯನ್ಸ್ ಜಿಯೋ ಗಮನಿಸಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ಮಾಧ್ಯಮಗಳಿಗೆ ರಿಲಯನ್ಸ್ ಜಿಯೋ ಸ್ಪಷ್ಟನೆ ನೀಡಲು ಬಯಸಿದ್ದು, ಕಂಪನಿ ಅಥವಾ ತನ್ನ ಸಹವರ್ತಿ ಕಂಪನಿಗಳಿಂದ ಈ ರೀತಿಯ ಯಾವುದೇ ಆಪ್‌ಗಳು ಬಿಡುಗಡೆಗೊಂಡಿಲ್ಲ. ಜಿಯೋಕಾಯಿನ್ ಹೆಸರನ್ನು ಉಪಯೋಗಿಸಿಕೊಂಡ ಅಂತಹ ಯಾವುದೇ ಆಪ್‌ಗಳು ನಕಲಿಯಾಗಿವೆ ಹಾಗೂ ಅವುಗಳೊಡನೆ ವ್ಯವಹರಿಸದಂತೆ ನಾವು ಸಲಹೆ ನೀಡುತ್ತೇವೆ.

ಜಿಯೋ ಹೆಸರಲ್ಲಿ ಸಾರ್ವಜನಿಕರ ಹಾದಿ ತಪ್ಪಿಸುವ ಇಂತಹ ವಂಚನೆ ಪ್ರಯತ್ನಗಳನ್ನು ನಡೆಸುವ ನಿರ್ಲಜ್ಜ ವ್ಯಕ್ತಿಗಳನ್ನು ರಿಲಯನ್ಸ್ ಜಿಯೋ ಗಂಭೀರವಾಗಿ ಪರಿಗಣಿಸಿದೆ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿದೆ. ಸರಿ ಸುಮಾರು 22ಕ್ಕೂ ಅಧಿಕ ಕ್ರಿಪ್ಟೋ ಕರೆನ್ಸಿ ಅಪ್ಲಿಕೇಷನ್ ಗಳು ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ.

English summary
Nearly 22 applications on the Play Store bearing the name JioCoin, which has led to customers downloading and transacting on the app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X