ಸಿಗರೇಟ್ ಮಾರಾಟಕ್ಕೆ ಹೊಡೆತ ಬಿದ್ದರೂ ಐಟಿಸಿ ಲಾಭ ಶೇ 6ರಷ್ಟು ಏರಿಕೆ
ಬೆಂಗಳೂರು, ಅಕ್ಟೋಬರ್ 27: ಅಸಂಘಟಿತ ಐಟಿಸಿ ಲಿಮಿಟೆಡ್ ಸಮೂಹ ಸಂಸ್ಥೆ ಶುಕ್ರವಾರದಂದು ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ.
ಸಿಗರೇಟ್ ಉತ್ಪನ್ನಗಳು ಜಿಎಸ್ ಟಿ ಹೊಡೆತಕ್ಕೆ ಸಿಲುಕಿ ನಲುಗಿದರೂ ಐಟಿಸಿ ಸಂಸ್ಥೆ ಶೇ 5.59ರಷ್ಟು ಏರಿಕೆ ಕಂಡು 2,639.84 ಕೋಟಿ ರು ನಿವ್ವಳ ಲಾಭ ಗಳಿಕೆ ಮಾಡಿದೆ. ಕಳೆದ ವರ್ಷ ಜುಲೈ- ಸೆಪ್ಟೆಂಬರ್ ತ್ರೈಮಾಸಿಕ ವರದಿಯಂತೆ 2,500.03 ಕೋಟಿ ರು ನಿವ್ವಳ ಲಾಭ ಗಳಿಸಿತ್ತು.
ಈ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯ 10,258.13 ಕೋಟಿ ರು ಗಳಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 14,091.96 ಕೋಟಿ ರು ಗಳಿಸಿತ್ತು.

ಸಿಗರೇಟ್ ವಿಭಾಗ: ಕಳೆದ ವರ್ಷ ಇದೇ ಅವಧಿಗೆ 8,528.47 ಕೋಟಿ ರು ಆದಾಯ ಗಳಿಸಿತ್ತು. ಈಗ ಈ ತ್ರೈಮಾಸಿಕದಲ್ಲಿ 4,554.21 ಕೋಟಿ ರು ಮಾತ್ರ ಗಳಿಸಿದ್ದು, ಶೇ 46.56ರಷ್ಟು ಆದಾಯದಲ್ಲಿ ಇಳಿಕೆ ಕಂಡಿದೆ.
ಹೋಟೆಲ್ ವಿಭಾಗ: ಕಳೆದ ಅವಧಿಯಲ್ಲಿ 297.34 ಕೋಟಿ ರು ಗಳಿಸಿತ್ತು. 300.18 ಕೋಟಿ ರು ಗಳಿಸಿತ್ತು.
ಕೃಷಿ ಆಧಾರಿತ ವ್ಯವಹಾರದಲ್ಲಿ ಆದಾಯ 1,967.98 ಕೋಟಿ ರು ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1,880.06 ಕೋಟಿ ರು ಮಾತ್ರ ಗಳಿಸಿತ್ತು. ಐಟಿಸಿ ಷೇರುಗಳು ಬಿಎಸ್ ಇಯಲ್ಲಿ ಶೇ 0.32ರಷ್ಟು ಏರಿಕೆ ಕಂಡಿತ್ತು.












Click it and Unblock the Notifications