Karnataka Bank: ಸಂಕಷ್ಟದಲ್ಲಿದೆಯೇ ಕರ್ಣಾಟಕ ಬ್ಯಾಂಕ್: ಇಲ್ಲಿದೆ ಮಹತ್ವದ ಮಾಹಿತಿ, ಬ್ಯಾಂಕ್ & ಆರ್ಥಿಕ ತಜ್ಞರು ಹೇಳಿದ್ದೇನು?
ಕರ್ನಾಟಕದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಬ್ಯಾಂಕ್ ಮುಚ್ಚಲಿದೆ. ಆರ್ಥಿಕವಾಗಿ ಈ ಬ್ಯಾಂಕ್ ಸಂಕಷ್ಟದಲ್ಲಿದೆ ಎನ್ನುವ ವಿಷಯ ಚರ್ಚೆಯಾಗುತ್ತಿದ್ದು ಗ್ರಾಹಕರು ಗೊಂದಲಕ್ಕೆ ಒಳಗಾಗಿದ್ದಾರೆ. ಕರ್ಣಾಟಕ ಬ್ಯಾಂಕ್ ಸಂಕಷ್ಟದಲ್ಲಿದೆ ಎಂದು ಕೆಲವು ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಯಾವುದೇ ಬ್ಯಾಂಕ್ ಸಂಕಷ್ಟದಲ್ಲಿದೆ ಎಂದ ಕೂಡಲೇ ಗ್ರಾಹಕರು ಆತಂಕಕ್ಕೆ ಒಳಗಾಗುತ್ತಾರೆ. ಅವರ ಶ್ರಮದ ದುಡ್ಡು ವ್ಯರ್ಥವಾಗುತ್ತದೆ ಎನ್ನುವ ಆತಂಕ ಅವರದ್ದು. ಆದರೆ, ಈ ರೀತಿ ಇರುವಾಗಲೇ ಬ್ಯಾಂಕ್ ಮ್ಯಾನೇಜ್ಮೆಂಟ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಕರ್ಣಾಟಕ ಬ್ಯಾಂಕ್ ನಮ್ಮ ಬ್ಯಾಂಕ್ ಸುಭದ್ರವಾಗಿದೆ ಎಂದು ಭರವಸೆ ನೀಡಿದೆ. ಈ ನಡುವೆ ಹಲವು ವಿಚಾರಗಳು ಚರ್ಚೆ ಆಗುತ್ತಿದೆ. ಈ ಬೆಳವಣಿಗೆಯ ಸಂಪೂರ್ಣ ವಿವರ ಇಲ್ಲಿದೆ.
ಬ್ಯಾಂಕ್ ವ್ಯವಹಾರಗಳ ಬಗ್ಗೆ ಹಾಗೂ ಕರ್ಣಾಟಕ ಬ್ಯಾಂಕ್ ಬಗ್ಗೆ ಲೇಖಕರು ಮತ್ತು ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾಹಿತಿಯು ಇದೀಗ ವೈರಲ್ ಆಗುತ್ತಿದೆ. ಯಾವುದೇ ವ್ಯವಸ್ಥೆ ಒಂದು ದಿನದಲ್ಲಿ ಕುಸಿತ ಕಾಣುವುದಿಲ್ಲ. ಹೇಗೆ ರೋಗ ಒಂದು ದಿನದಲ್ಲಿ ಬರುವುದಿಲ್ಲವೋ ಥೇಟ್ ಹಾಗೆ ! ರೋಗವನ್ನು ನಿಯಂತ್ರಿಸದೆ ಬಿಟ್ಟ ಕಾರಣ ಅದು ಉಲ್ಬಣಗೊಳ್ಳುತ್ತದೆ. ಇದರ ಜೊತೆಗೆ ಯಾವಾಗ ಮುಖ್ಯ ನಿರ್ಧಾರಗಳು ಏಕ ವ್ಯಕ್ತಿ ಅಥವಾ ಒಂದಿಬ್ಬರಲ್ಲಿ ಕೇಂದ್ರೀಕೃತವಾಗುತ್ತದೆ ಆಗ ಇಂತಹ ಘಟನೆಗಳು ಘಟಿಸುತ್ತವೆ. ಹಣ ಇದ್ದೆಡೆ ಹೆಗ್ಗಣಗಳಂತೆ ಕೊರೆಯುವುದು ಶುರುವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸಣ್ಣ, ಅತೀ ಸಣ್ಣ ಉದ್ದಿಮೆಗಳಿಂದ , ದೊಡ್ಡ , ಅತೀ ದೊಡ್ಡ ಉದ್ದಿಮೆಗಳವರೆಗೂ ಎಲ್ಲೆಡೆ ಇದೆ ರಾಗ, ಇದೆ ಹಾಡು. ಇದನ್ನು ಖಂಡಿತ ತಡೆ ಹಿಡಿಯಬಹುದು. ಅದಕ್ಕೇನು ಮಾಡಬೇಕು ಎನ್ನುವುದು ಬೇರೆ ವಿಚಾರ ವ್ಯಾಪ್ತಿಯಲ್ಲಿ ಬರುತ್ತದೆ. ಕೆಲವು ಯೂಟ್ಯೂಬ್‌ಗಳು ಹಾಗೂ ಸುದ್ದಿ ಮಾಧ್ಯಮಗಳೂ ಸಹ ತಪ್ಪು ಪ್ರಚಾರ ಮಾಡುತ್ತಿವೆ. ಯೂಟ್ಯೂಬರ್‌ವೊಬ್ಬರು ಕರ್ನಾಟಕ ಬ್ಯಾಂಕ್‌ನಲ್ಲಿ ಹಣವಿಡುವುದು ಸುರಕ್ಷಿತವಲ್ಲ, ಗ್ರಾಹಕರೇ ಬೇಗ ಹೋಗಿ ನಿಮ್ಮ ಹಣವನ್ನು ತೆಗೆದುಕೊಳ್ಳಿ ಎಂದು ಪ್ರಚೋದಿಸುತ್ತಿದ್ದರು. ಇಂತಹ ಪ್ರಚೋದನೆಯಿಂದ ಜನ ಬ್ಯಾಂಕಿಗೆ ಮುಗಿ ಬಿದ್ದರೆ ಅದನ್ನು ಬ್ಯಾಂಕ್ ರನ್ ಎನ್ನಲಾಗುತ್ತದೆ. ಆಗ ಭಗವಂತನೂ ಬ್ಯಾಂಕಿನ ಕುಸಿತವನ್ನು ತಪ್ಪಿಸಲಾಗುವುದಿಲ್ಲಾ. ಕರ್ನಾಟಕ ಬ್ಯಾಂಕು ಸರಿಯಿಲ್ಲ ಎಂದು ಅರಚುವ ಮುನ್ನ ಅದರ ಅಂಕಿಅಂಶಗಳನ್ನು ಓದುವ ಸಂಯಮ , ಪರಿಜ್ಞಾನ ಇವರಿಗಿದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ ಬ್ಯಾಂಕಿನಲ್ಲಿ ಯಾವ ಬ್ಯಾಂಕಿನಲ್ಲಿ ಕೂಡ ಆಗಬಹುದಾದ ಫ್ರಾಡ್ ಆಗಿದೆ ಅದರಲ್ಲಿ ಯಾವುದೇ ಸುಳ್ಳಿಲ್ಲ. ಅದನ್ನು ಹೇಳಲಿ ಅದು ತಪ್ಪಿಲ್ಲ. ಗ್ರಾಹಕರನ್ನು ಬ್ಯಾಂಕಿನಿಂದ ಹಣ ತೆಗೆಯಿರಿ ಎಂದು ಪ್ರಚೋದಿಸುವುದು ಅಪರಾಧ. ಮಾಹಿತಿಗಾಗಿ 2024-25ರಲ್ಲಿ ಕರ್ನಾಟಕ ಬ್ಯಾಂಕು 1272 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ. 2023-2024 ರಲ್ಲಿ ಇದು 1306 ಕೋಟಿಯಿತ್ತು. ಕಥೆ ಮುಗಿದೇ ಹೋಯ್ತು ಎಂದುಕೊಂಡಿದ್ದ ಯಸ್ ಬ್ಯಾಂಕ್ 2024-25ರಲ್ಲಿ 744 ಕೋಟಿ ರೂಪಾಯಿ ಲಾಭ ಮಾಡಿದೆ. ಎಸ್‌ಬಿಐ ಇದರಲ್ಲಿ ಮೇಜರ್ ಶೇರ್ ಹೋಲ್ಡರ್.
ಇಷ್ಟೆಲ್ಲಾ ಹೇಳಲು ಕಾರಣವಿಷ್ಟೇ , ಕರ್ನಾಟಕ ಬ್ಯಾಂಕು ಕುಸಿಯುವುದಿಲ್ಲ. ಜನರು ಭಯದಿಂದ ಇಟ್ಟಿರುವ ಠೇವಣಿ ತೆಗೆಯುವುದು, ಅಕೌಂಟ್ ಮುಚ್ಚುವುದು ಮಾಡುವುದು ಬೇಡ. ಅರೆಬರೆ ಬೆಂದ ಮಾಹಿತಿಗೆ ಕಿವಿಯಾಗಬೇಡಿ. ಆರ್‌ಬಿಐ ಇದರ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಿದರೆ ಮಾತ್ರ ಅದು ನಿಜ. ಮಿಕ್ಕೆಲ್ಲಾ ಊಹಾಪೋಹ. ಯಸ್ ಬ್ಯಾಂಕ್ ಗಟ್ಟಿಯಾಗಿ ನಿಂತಿದೆ. ಕೆಟ್ಟ ಸಾಲಗಳನ್ನು ನಿಧಾನವಾಗಿ ಅಳಿಸಿಹಾಕುತ್ತ ಭದ್ರವಾಗುತ್ತಿದೆ. ಕರ್ನಾಟಕ ಬ್ಯಾಂಕಿನಲ್ಲಿ ಭ್ರಷ್ಟಾಚಾರ ಆಗಿರುವುದು ನಿಜ. ಆದರೆ ಆತಂಕ ಪಡುವ ಅಗತ್ಯವಿಲ್ಲ. ನೆಗಡಿ ಬಂದರೆ ನಾವ್ಯಾರು ಮೂಗು ಕುಯ್ದು ಕೊಳ್ಳುವುದಿಲ್ಲ ಎನ್ನುವುದು ನೆನಪಿರಲಿ ಎಂದು ಸುದೀರ್ಘವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ಣಾಟಕ ಬ್ಯಾಂಕ್ ಹೇಳಿದ್ದೇನು: ಕರ್ಣಾಟಕ ಬ್ಯಾಂಕ್‌ನ ಬಗ್ಗೆ ಗೊಂದಲಗಳ ಬ್ಯಾಂಕ್ ಮ್ಯಾನೇಜ್ಮೆಂಟ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಈ ಬ್ಯಾಂಕ್ ಸತತ ಲಾಭದಲ್ಲಿದೆ. ಅಲ್ಲದೇ ಸುಭದ್ರವಾಗಿದೆ. ನಮ್ಮ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಸದೃಢವಾಗಿದ್ದು, ಯಾವುದೇ ರೀತಿಯ ವದಂತಿಗಳಿಗೂ ಗ್ರಾಹಕರು ಕಿವಿಗೊಡಬಾರದು ಎಂದು ಮನವಿ ಮಾಡಲಾಗಿದೆ. ಠೇವಣೆದಾರರ ಹಣದ ಸುರಕ್ಷತೆ ಹಾಗೂ ಭದ್ರತೆಯೇ ನಮ್ಮ ಬ್ಯಾಂಕ್‌ನ ಆದ್ಯತೆ ಆಗಿದೆ. ನಾವು ಇದನ್ನು 101 ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದೇವೆ ಎಂದು ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಪಲ್ಲವಿ ಟಿ.ಎಸ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಗ್ರಾಹಕರಲ್ಲಿ ಆತಂಕ: ಇನ್ನು ಕರ್ಣಾಟಕ ಬ್ಯಾಂಕ್ ವಿಚಾರದಲ್ಲಿ ಎದುರಾಗಿದ್ದ ಗೊಂದಲವು ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹರಲ್ಲಿ ಸಾಕಷ್ಟು ಗೊಂದಲ ಹಾಗೂ ಆತಂಕವನ್ನು ಮೂಡಿಸಿತ್ತು. ಬ್ಯಾಂಕ್ ನಷ್ಟ ಸೃಷ್ಟಿಯಾದರೆ ಮುಂದಿನ ದಿನಗಳಲ್ಲಿ ನಮ್ಮ ಠೇವಣೆ ಹಾಗೂ ಉಳಿತಾಯದ ಹಣ ಏನಾಗಲಿದೆ ಎನ್ನುವ ಭಯ ಗ್ರಾಹಕರಲ್ಲಿ ಇತ್ತು. ಕೊನೆಗೂ ಈ ಗೊಂದಲ ಹಾಗೂ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
-
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ











Click it and Unblock the Notifications