IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ?

ನವದೆಹಲಿ, ಜನವರಿ 09: ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಇತ್ತೀಚೆಗೆ ಭಾರಿ ಬದಲಾವಣೆ ಮಾಡಿದೆ.

ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಸುಲಭಗೊಳಿಸಲು ಐ.ಆರ್.ಸಿ.ಟಿ.ಸಿ. ಹೊಸ ಸೌಲಭ್ಯವನ್ನು ನೀಡುತ್ತಿದೆ. ಇನ್ಮುಂದೆ ಐ.ಆರ್.ಸಿ.ಟಿ.ಸಿ. ವೆಬ್ ಸೈಟ್ ನಲ್ಲಿ ಒಂದು ಐಡಿ ಬಳಸಿ ಪ್ರಯಾಣಿಕರು 12 ಟಿಕೆಟ್ ಬುಕ್ ಮಾಡಬಹುದಾಗಿದೆ. ಈ ಹಿಂದೆ ಒಂದು ತಿಂಗಳಿಗೆ ಒಂದು ಐಡಿ ಬಳಸಿ ಕೇವಲ 6 ಟಿಕೆಟ್ ಬುಕ್ ಮಾಡಬಹುದಾಗಿತ್ತು.

IRCTC: how to book 12 tickets from one user ID in a month

ಟಿಕೆಟ್ ಬುಕ್ ಮಾಡುವುದು ಹೇಗೆ?
ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದಕ್ಕೂ ಮೊದಲು ನಿಮ್ಮ ಖಾತೆಯನ್ನು ಅಧಾರ್ ನಂಬರ್ ಜತೆ ಲಿಂಕ್ ಮಾಡಬೇಕಾಗುತ್ತದೆ.

* ಐಆರ್ ಸಿಟಿಸಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
* ನಿಮ್ಮ ಲಾಗ್ ಇನ್ ಐಡಿ, ಪಾಸ್ ವರ್ಡ್ ಹಾಕಿ, ಲಾಗ್ ಇನ್ ಆಗಿ.
* My profile ಅಡಿಯಲ್ಲಿ ಬರುವ ಆಧಾರ್ ಕೆವೈಸಿ ಆಯ್ಕೆಯನ್ನು ಒತ್ತಿ.
* ನಿಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ ಒಟಿಪಿ ಬರಲಿದೆ. ಇದನ್ನು ನಮೂದಿಸಿ ಆಧಾರ್ ಹಾಗೂ ಐಆರ್ ಸಿಟಿಸಿ ಖಾತೆ ಲಿಂಕ್ ಆಗಿರುವುದನ್ನು ದೃಢಪಡಿಸಿ.

* ಟಿಕೆಟ್ ಬುಕ್ಕಿಂಗ್ ಮಾಡಬೇಕಾದರೆ, ಎಲ್ಲಾ 12 ಪ್ರಯಾಣಿಕರ ಆಧಾರ್ ನಂಬರ್ ಕೂಡಾ ಅವಶ್ಯ.

* ಐ.ಆರ್.ಸಿ.ಟಿ.ಸಿ. ಹೊಸ ನಿಯಮದ ಪ್ರಕಾರ ಪ್ರಯಾಣಿಕ, ಪ್ರಯಾಣಕ್ಕೆ 120 ದಿನಗಳ ಮೊದಲೇ ಟಿಕೆಟ್ ಬುಕ್ ಮಾಡಬಹುದಾಗಿದೆ.

ಐ.ಆರ್.ಸಿ.ಟಿ.ಸಿ. ವೆಬ್ ಸೈಟ್ ನಲ್ಲಿ ಎಲ್ಲ ದಿನ ಬೆಳಿಗ್ಗೆ 10 ರಿಂದ ರಾತ್ರಿ 11 ಗಂಟೆಯವರೆಗೆ ಟಿಕೆಟ್ ಬುಕ್ ಮಾಡಬಹುದು. ದಿನವೊಂದಕ್ಕೆ ಬಳಕೆದಾರ ಕೇವಲ 2 ಟಿಕೆಟ್ ಬುಕ್ ಮಾಡಬಹುದಾಗಿದೆ. ಎಸಿ ಕೋಚ್ ಗಳಿಗೆ ತತ್ಕಾಲ್ ಬುಕ್ಕಿಂಗ್ ಬೆಳಿಗ್ಗೆ 10 ಗಂಟೆಗೆ ಹಾಗೂ ಸ್ಲೀಪರ್ ಕ್ಲಾಸ್ ಗಳಿಗೆ ಬೆಳಗ್ಗೆ 11 ಗಂಟೆ ನಂತ್ರ ಟಿಕೆಟ್ ಬುಕ್ ಮಾಡಬಹುದು.

ಟ್ರಾವೆಲ್ ಏಜೆಂಟ್ ಗಳು ಬೆಳಗೆ 8, 8.30, 10.30, 11 ಹಾಗೂ 11.30 ರ ಅವಧಿಯಲ್ಲಿ ಮಾತ್ರ ಟಿಕೆಟ್ ಬುಕ್ ಮಾಡಲು ಐಆರ್ ಸಿಟಿಸಿ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+