ಐಫೋನ್ 7 ಯುಎಸ್ ನಲ್ಲಿ ರಿಲೀಸ್ ಆಯ್ತು, ಭಾರತದಲ್ಲಿ ಯಾವಾಗ?

Posted By:
Subscribe to Oneindia Kannada

ಬೆಂಗಳೂರು, ಸೆ. 08: ಪ್ರತಿಷ್ಠೆ, ಉನ್ನತ ತಂತ್ರಜ್ಞಾನಕ್ಕೆ ಮತ್ತೊಂದು ಹೆಸರಾಗಿರುವ ಆಪಲ್ ಕಂಪನಿ ತನ್ನ ಹೊಚ್ಚ ಹೊಸ ಉತ್ಪನ್ನ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಸ್ಮಾರ್ಟ್ ಫೋನ್ ಗಳನ್ನು ಅಮೆರಿಕದಲ್ಲಿ ಕಳೆದ ರಾತ್ರಿ ಲೋಕಾರ್ಪಣೆ ಮಾಡಿದೆ.

ಯುಎಸ್ ನಲ್ಲಿ ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 9ರಿಂದ ಆರಂಭವಾಗಲಿದ್ದು,ಸೆಪ್ಟೆಂಬರ್ 16ರಿಂದ ಮಾರಾಟ ಆರಂಭವಾಗಲಿದೆ. ಇದೇ ಫೋನ್ ಗಳು ಭಾರತದ ಮಾರುಕಟ್ಟೆಗೆ ಅಕ್ಟೋಬರ್ 7ರಂದು ಪ್ರವೇಶಿಸಲಿದೆ.

ಆಪಲ್ ಕಂಪನಿ ಭಾರತದಲ್ಲಿ ಐಫೋನ್ ಗಳ ಬೆಲೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ 32 ಜಿಬಿಗೆ 60ಸಾವಿರ ರೂಪಾಯಿ ಇರಬಹುದು ಎಂದು ತಜ್ಞರು ಬೆಲೆ ನಿಗದಿ ಮಾಡಿದ್ದಾರೆ. ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಈಗಲೂ ಸ್ಯಾಮ್ ಸಂಗ್ ಅಗ್ರಸ್ಥಾನದಲ್ಲಿದೆ ಮಾರುಕಟ್ಟೆಯಲ್ಲಿ ಶೇ 25.3ರಷ್ಟು ಪಾಲು ಹೊಂದಿದೆ. ಎರಡನೇ ಸ್ಥಾನದಲ್ಲಿ ಮೈಕ್ರೋಮ್ಯಾಕ್ಸ್ ಇದ್ದರೆ, ನಂತರದ ಸ್ಥಾನದಲ್ಲಿ ಇಂಟೆ
ಕ್ಸ್ ಇದೆ. ಆಪಲ್ ಐಫೋನ್ ಸೇರಿ ಆಪಲ್ ಉತ್ಪನ್ನಗಳು ಸದ್ಯಕ್ಕೆ ಶೇ 1.9ರಷ್ಟು ಮಾತ್ರ ಪಾಲು ಹೊಂದಿವೆ.

iPhone 7 Price in India and Launch Date announced

ಭಾರತದಲ್ಲಿ ಸರಿ ಸುಮಾರು 612 ಯುಎಸ್ ಡಾಲರ್ ನಿಂದ ಐಫೋನ್ ಬೆಲೆ ಶುರುವಾಗುತ್ತದೆ. ಆದರೆ, ಸ್ಯಾಮ್ ಸಂಗ್ ಮೊಬೈಲ್ ಫೋನ್ ಗಳು 173 ಯುಎಸ್ ಡಾಲರ್ ನಂತೆ ಇದೆ. ಆದರೂ ಐಫೋನ್ ಕ್ರೇಜ್ ಭಾರತದಲ್ಲಿ ಕಡಿಮೆಯಾಗಿಲ್ಲ. ಒಂದು ಐಫೋನ್ ಬೆಲೆಗೆ ಹೊಚ್ಚ ಹೊಸ ಮೂರು ಲ್ಯಾಪ್ ಟಾಪ್ ಬರುತ್ತದೆ. ಸ್ಕೂಟರ್ ಗಳನ್ನು ಕೊಳ್ಳಬಹುದು. ಎಷ್ಟು ಮಂದಿಯ ಪೂರ್ಣ ವಿದ್ಯಾಭ್ಯಾಸವೇ ಪೂರೈಸಬಹುದು.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಐಫೋನ್ 7 ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ:
* ಸಿಲ್ವರ್, ಗೋಲ್ಡ್, ರೋಸ್ ಗೋಲ್ಡ್, ಕಪ್ಪು ಹಾಗೂ ಜೆಟ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯ
* 32 ಜಿಬಿ, 128 ಜಿಬಿ ಹಾಗ್Y 256 ಜಿಬಿ ಸಾಮರ್ಥ್ಯ
* ಅಮೆರಿಕದಲ್ಲಿ ಐಫೋನ್ 7 ಬೆಲೆ ಸುಮಾರು 43 ಸಾವಿರ ರೂಪಾಯಿ, ಐಫೋನ್ 7 ಪ್ಲಸ್ ಬೆಲೆ 51 ಸಾವಿರ ರೂಪಾಯಿ

ಏನು ವಿಶೇಷ:
* 12ಎಂಪಿ ಕೆಮರಾ, 2x ಆಪ್ಟಿಕಲ್ ಜೂಮ್ (56mm) ಹಾಗೂ 7 ಎಂಪಿ ಫೇಸ್ ಟೈಮ್ ಕೆಮರಾ (ಸೆಲ್ಫಿ ಹಾಗೂ ವಿಡಿಯೋ ಚಾಟ್ ಗೆ)
* ಆಪಲ್ ಎ10 ಕ್ವಾಡ್ ಕೋರ್ ಪ್ರೋಸೆಸರ್, 6 ಕೋರ್ ಜಿಪಿಯು
* 5.5 ಇಂಚು ರೆಟಿನಾ ಎಚ್ ಡಿ ಡಿಸ್ಪ್ಲೇ ಇದೆ.
* 3.5 ಎಂಎಂ ಹೆಡ್ ಫೋನ್ ಜಾಕ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Apple Inc. launched the iPhone 7 and the iPhone 7 Plus smartphones. The handsets were announced in the company's keynote event at the Bill Graham Civic Auditorium. Both the devices will be available starting September 16, 2016 in the US.
Please Wait while comments are loading...