ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ಪ್ರತಿಭಾವಂತ ಸಂಶೋಧಕರಿಗೆ ಇನ್ಫೋಸಿಸ್ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ನವೆಂಬರ್ 13: ಇನ್‍ಫೋಸಿಸ್ ಸೈನ್ಸ್ ಫೌಂಡೇಷನ್ (ಐಎಸ್‍ಎಫ್) ತನ್ನ 10 ನೇ ವಾರ್ಷಿಕೋತ್ಸವವನ್ನು ಆಚರಣೆ ಮತ್ತು ಇನ್‍ಫೋಸಿಸ್ ಪ್ರೈಜ್ 2018 ಅನ್ನು ಪ್ರಕಟಿಸಿದೆ.

ಆರು ವಿಭಾಗಗಳಾದ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸಸ್, ಹ್ಯೂಮ್ಯಾನಿಟೀಸ್, ಲೈಫ್ ಸೈನ್ಸ್, ಮ್ಯಾಥಮ್ಯಾಟಿಕಲ್ ಸೈನ್ಸಸ್, ಫಿಸಿಕಲ್ ಸೈನ್ಸಸ್ ಹಾಗೂ ಸೋಶಿಯಲ್ ಸೈನ್ಸಸ್‍ನಲ್ಲಿ ವಿಜೇತರಾದವರ ಪಟ್ಟಿಯನ್ನು ಪ್ರಕಟಿಸಿದೆ. ಈ ಆರೂ ವಿಭಾಗಗಳಲ್ಲಿ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಪ್ರತಿವರ್ಷ ಈ ಬಹುಮಾನಗಳನ್ನು ನೀಡಲಾಗುತ್ತಿದೆ.

ಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿ

ಈ ಬಹುಮಾನ ಚಿನ್ನದ ಪದಕ, ಪ್ರಶಂಸಾ ಪತ್ರ ಮತ್ತು ನಗದನ್ನು ಒಳಗೊಂಡಿರುತ್ತದೆ. ಈ ಬಾರಿ ಬಹುಮಾನದ ಮೊತ್ತವನ್ನು 1,00,000 ಅಮೆರಿಕನ್ ಡಾಲರ್ ಗೆ ಹೆಚ್ಚಳ ಮಾಡಲಾಗಿದೆ. ಈ ನಗದು ಬಹುಮಾನ ತೆರಿಗೆ ಮುಕ್ತವಾಗಿದ್ದು, ಇಡೀ ಹಣವನ್ನು ವಿಜೇತರಿಗೆ ನೀಡಲಾಗುತ್ತದೆ.

ವಸಂತಪುರದ 'ಕಲ್ಯಾಣಿ' ಚೆಂದ ಮಾಡಿ, ಸರ್ಕಾರಕ್ಕೆ ಕೊಟ್ಟ ಇನ್ಫೋಸಿಸ್ವಸಂತಪುರದ 'ಕಲ್ಯಾಣಿ' ಚೆಂದ ಮಾಡಿ, ಸರ್ಕಾರಕ್ಕೆ ಕೊಟ್ಟ ಇನ್ಫೋಸಿಸ್

ತಮ್ಮ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರತಿಷ್ಠಿತ ಇನ್‍ಫೋಸಿಸ್ ಬಹುಮಾನವನ್ನು ನೀಡಲಾಗುತ್ತಿದ್ದು, ಈ ವರ್ಷದ ವಿಜೇತರು ತಮ್ಮ ಕ್ಷೇತ್ರಗಳಲ್ಲಿ ಮುಂದಿನ ದಶಕದವರೆಗೆ ವಿಜ್ಞಾನ ಮತ್ತು ಸಂಶೋಧನೆಯನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸವನ್ನು ಐಎಸ್‍ಎಫ್ ಹೊಂದಿದೆ.

ಸಂಶೋಧನೆ ಮತ್ತು ಸಾಧನೆಯನ್ನು ಗುರುತಿಸಿ ನೀಡಲಾಗುತ್ತಿರುವ ಈ ಇನ್‍ಫೋಸಿಸ್ ಬಹುಮಾನ ದೇಶದಲ್ಲಿ ಯುವ ಸಂಶೋಧಕರಿಗೆ ಪ್ರೇರಣೆಯಾದಂತಾಗುತ್ತದೆ.

ಇನ್‍ಫೋಸಿಸ್ ಸೈನ್ಸ್ ಫೌಂಡೇಷನ್‍ನ ಅಧ್ಯಕ್ಷ ಕೆ.ದಿನೇಶ್

ಇನ್‍ಫೋಸಿಸ್ ಸೈನ್ಸ್ ಫೌಂಡೇಷನ್‍ನ ಅಧ್ಯಕ್ಷ ಕೆ.ದಿನೇಶ್

ಈ ಸಂದರ್ಭದಲ್ಲಿ ಮಾತನಾಡಿದ ಇನ್‍ಫೋಸಿಸ್ ಸೈನ್ಸ್ ಫೌಂಡೇಷನ್‍ನ ಅಧ್ಯಕ್ಷ ಕೆ.ದಿನೇಶ್ ಅವರು, 'ಸಂಶೋಧಕರಿಗೆ ಸೂಕ್ತ ಸಂದರ್ಭದಲ್ಲಿ ಉತ್ತೇಜನ ನೀಡಿದರೆ ಅವರ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಈ ಮೂಲಕ ಯುವ ಸಂಶೋಧಕರು ಭವಿಷ್ಯದಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತದೆ.

ವೈಜ್ಞಾನಿಕ ಸಮುದಾಯ ಮತ್ತು ಉದ್ಯಮದ ನಡುವೆ ಇರುವ ಅಂತರವನ್ನು ಸುಧಾರಣೆ ಮಾಡುವ ಮೂಲಕ ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಬಹುದಾಗಿದೆ. ಇಂದಿನ ವಿಜ್ಞಾನ ನಾಳೆಯ ತಂತ್ರಜ್ಞಾನವಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮೆಲ್ಲಾ ವಿಜೇತರು ಜಾಗತಿಕ ಮಟ್ಟದಲ್ಲಿ ಸಮಾಜ ಮತ್ತು ಆರ್ಥಿಕ ಪ್ರಗತಿಗೆ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ'' ಎಂದರು.

ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್

ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್

ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇನ್‍ಫೋಸಿಸ್ ಬಹುಮಾನವನ್ನು ನವಕಾಂತ ಭಟ್ ಗಳಿಸಿದ್ದಾರೆ. ಇವರು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಪ್ರೊಫೆಸರ್ ಆಗಿದ್ದು, ಸೆಂಟರ್ ಫಾರ್ ನ್ಯಾನೋ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಅಧ್ಯಕ್ಷರಾಗಿದ್ದಾರೆ. ಬಯೋಕೆಮಿಸ್ಟ್ರಿಯಲ್ಲಿ ಬಯೋಸೆನ್ಸಾರ್ ಅಭಿವೃದ್ಧಿ ಕುರಿತಾಗಿ ನಡೆಸಿರುವ ಸಂಶೋಧನೆ ಮತ್ತು ಗ್ಯಾಸೋಯಸ್ ಸೆನ್ಸಾರ್‍ಗಳ ಅಭಿವೃದ್ಧಿ ಮೂಲಕ ಈಗಿನ ಮೆಟಲ್-ಆಕ್ಸೈಡ್ ಸೆನ್ಸಾರ್ ಮೇಲೆ ಸಂಶೋಧನೆಯನ್ನು ಕೈಗೊಂಡಿದ್ದಾರೆ. ಗುರುತಿಸಿ ಈ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

ನ್ಯಾನೋಸ್ಕೇಲ್ ಸಿಸ್ಟಮ್ಸ್ ಬಗ್ಗೆ ತರಬೇತಿ ನೀಡುತ್ತಿರುವ ಮತ್ತು ಸ್ಪೇಸ್ ಹಾಗೂ ನ್ಯಾಷನಲ್ ಸೆಕ್ಯೂರಿಟಿ ಅಪ್ಲೆಕೇಷನ್‍ಗಳಿಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನವಕಾಂತ ಭಟ್ ಅವರು ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಬಹುಮಾನವನ್ನು ನೀಡಲಾಗುತ್ತಿದೆ.

ಭಟ್ ಅವರು ವಿಶೇಷವಾಗಿ ಭಾರತಕ್ಕೆ ಅಗತ್ಯವಿರುವ ಅಂತರಿಕ್ಷ, ಆಟೋಮಿಕ್ ಎನರ್ಜಿ ಮತ್ತು ಭದ್ರತೆ ಕಾರ್ಯಕ್ರಮಗಳು ಅಥವಾ ಯೋಜನೆಗಳಿಗೆ ಪೂರಕವಾಗಿ ಅಲ್ಟ್ರಾ ಪ್ರಿಸೈಸ್ ಡಿಟೆಕ್ಷನ್ ಅಕ್ಯುರೆಸಿಯನ್ನು ಒಳಗೊಂಡ ಗ್ಯಾಸ್ ಸೆನ್ಸಾರ್ ಡಿವೈಸ್‍ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಹ್ಯೂಮ್ಯಾನಿಟೀಸ್

ಹ್ಯೂಮ್ಯಾನಿಟೀಸ್

ಈ ವಿಭಾಗದಲ್ಲಿ ಹೊಸದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಆಸ್ತೆಟಿಕ್ಸ್ ವಿಭಾಗದ ಪ್ರೊಫೆಸರ್ ಮತ್ತು ಡೀನ್ ಆಗಿರುವ ಕವಿತಾ ಸಿಂಗ್ ಅವರಿಗೆ ನೀಡಲಾಗುತ್ತಿದೆ.

ಮೊಘಲರ ಸಾಮ್ರಾಜ್ಯ, ರಜಪೂತರು ಮತ್ತು ಡೆಕ್ಕನ್ ಕಲೆಗಳನ್ನು ಆಳವಾಗಿ ಅಧ್ಯಯನ ಮಾಡಿರುವುದರ ಜತೆಗೆ ಐತಿಹಾಸಿಕ ಕಾರ್ಯಕ್ರಮಗಳ ಸಂಶೋಧನಾ ಬರಹಗಳು ಮ್ಯೂಸಿಯಂಗಳ ಪಾತ್ರ ಮತ್ತು ಸಾಮಾಜಿಕತೆಯ ವಿಶ್ವದ ಕುರಿತು ಆಳವಾದ ಅಧ್ಯಯನ ನಡೆಸುತ್ತಾ ಬಂದಿದ್ದಾರೆ.

ವಸ್ತು ಸಂಗ್ರಹಾಲಯಗಳ ಮಹತ್ವ ಮತ್ತು ಸಮಾಜದ ಮೇಲೆ ಅವುಗಳ ಪ್ರಭಾವ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಇದಲ್ಲದೇ, ಜಾತ್ಯತೀತತೆ, ಆಧುನಿಕತೆ ಮತ್ತು ರಾಜಕೀಯ ಸಂಘರ್ಷಗಳ ಬಗ್ಗೆಯೂ ತಮ್ಮ ಸಂಶೋಧನೆಯಲ್ಲಿ ಬೆಳಕು ಚೆಲ್ಲಿದ್ದಾರೆ

ಜೀವ ವಿಜ್ಞಾನ (ಲೈಫ್ ಸೈನ್ಸ್)

ಜೀವ ವಿಜ್ಞಾನ (ಲೈಫ್ ಸೈನ್ಸ್)

ಜೀವ ವಿಜ್ಞಾನ ವಿಭಾಗದಲ್ಲಿ 2018 ನೇ ಸಾಲಿನ ಇನ್‍ಫೋಸಿಸ್ ಬಹುಮಾನಕ್ಕೆ ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್‍ನ ಅಸೋಸಿಯೇಟ್ ಪ್ರೊಫೆಸರ್ ರೂಪ್ ಮಲ್ಲಿಕ್ ಅವರು ಆಯ್ಕೆಯಾಗಿದ್ದಾರೆ. ಮಾಲಿಕ್ಯೂಲರ್ ಮೋಟರ್ ಪ್ರೊಟೀನ್ಸ್ ಕ್ಷೇತ್ರದಲ್ಲಿ ಅತ್ಯುತ್ತಮ ರೀತಿಯ ಸಂಶೋಧನೆಯನ್ನು ನಡೆಸುತ್ತಿರುವುದನ್ನು ಗಮನಿಸಿ ಅವರನ್ನು ಈ ಪ್ರತಿಷ್ಠಿತ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಅಂದರೆ ಈ ಮಾಲಿಕ್ಯೂಲರ್ ಮೋಟರ್ ಪ್ರೊಟೀನ್‍ಗಳು ಜೀವಂತ ಕಣಗಳು ಸಕ್ರಿಯವಾಗಿರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮ್ಯಾಥಮ್ಯಾಟಿಕಲ್ ಸೈನ್ಸ್
ಈ ವಿಭಾಗದಲ್ಲಿ ಫ್ರಾನ್ಸ್ ನ ಯೂನಿವರ್ಸಿಟಿ ಆಫ್ ಸ್ಟ್ರಾಸ್‍ಬರ್ಗ್‍ನ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿಯ ಪ್ರೊಫೆಸರ್ ಮತ್ತು ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷರಾಗಿರುವ ನಳಿನಿ ಅನಂತರಾಮನ್ ಅವರಿಗೆ 2018 ನೇ ಸಾಲಿನ ಇನ್‍ಫೋಸಿಸ್ ಬಹುಮಾನ ಲಭಿಸಿದೆ. "ಕ್ವಾಂಟಮ್ ಕೆಯಾಸ್'' ವಿಚಾರದಲ್ಲಿ ಅವರು ನಡೆಸಿರುವ ಸಂಶೋಧನೆಯನ್ನು ಗಮನಿಸಿ ಈ ಬಹುಮಾನ ನೀಡಲಾಗುತ್ತಿದೆ.

ಚಿತ್ರದಲ್ಲಿ ಜ್ಯೂರಿಗಳು

ಚಿತ್ರದಲ್ಲಿ ಜ್ಯೂರಿಗಳು

ಫಿಸಿಕಲ್ ಸೈನ್ಸ್
ಫಿಸಿಕಲ್ ಸೈನ್ಸಸ್ ವಿಭಾಗದಲ್ಲಿ 2018 ನೇ ಸಾಲಿನ ಇನ್‍ಫೋಸಿಸ್ ಬಹುಮಾನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಸೆಂಟರ್ ಫಾರ್ ಅಟ್‍ಮಾಸ್ಫಿರಿಕ್ ಅಂಡ್ ಓಷಾನಿಕ್ ಸೈನ್ಸಸ್‍ನ ಪ್ರೊಫೆಸರ್ ಎಸ್.ಕೆ. ಸತೀಶ್ ಅವರಿಗೆ ಲಭಿಸಿದೆ. ಹವಾಮಾನ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಗಣನೀಯ ಸಂಶೋಧನೆಯನ್ನು ಕೈಗೊಂಡಿರುವುದನ್ನು ಗುರುತಿಸಿ ಎಸ್.ಕೆ.ಸತೀಶ್ ಅವರಿಗೆ ಈ ಬಹುಮಾನ ನೀಡಲಾಗುತ್ತಿದೆ.

ಸಾಮಾಜಿಕ ವಿಜ್ಞಾನಗಳು
ಈ ಬಾರಿಯ ಇನ್‍ಫೋಸಿಸ್ ಬಹುಮಾನಕ್ಕೆ ಸಾಮಾಜಿಕ ವಿಜ್ಞಾನಗಳ ವಿಭಾಗದಲ್ಲಿ ಸೆಂಥಿಲ್ ಮುಲ್ಲೈನಾಥನ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಕಂಪ್ಯೂಟೇಷನ್ ಅಂಡ್ ಬಿಹೇವಿಯರಲ್ ಸೈನ್ಸ್‍ನ ಪ್ರೊಫೆಸರ್ ಮತ್ತು ಜಾರ್ಜ್ ಸಿ. ಟಿಯಾಒ ಫ್ಯಾಕ್ಯೂಲ್ಟಿ ಫೆಲೋ ಆಗಿದ್ದಾರೆ. ಬಿಹೇವಿಯರಲ್ ಎಕಾನಾಮಿಕ್ಸ್ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಂಶೋಧನೆಯನ್ನು ಕೈಗೊಂಡಿರುವುದನ್ನು ಗಮನಿಸಿ ಈ ಬಹುಮಾನವನ್ನು ನೀಡಲಾಗುತ್ತಿದೆ.

English summary
Infosys Science Foundation (ISF) celebrates its 10-year milestone and announces the winners of the Infosys Prize 2018 in six categories - Engineering and Computer Sciences, Humanities, Life Sciences, Mathematical Sciences, Physical Sciences and Social Sciences. The Prize, given annually,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X