Q2: ಇನ್ಫಿಗೆ ನಿರೀಕ್ಷೆಗೂ ಮೀರಿದ ಲಾಭ, ಭರ್ಜರಿ ಆದಾಯ
ಬೆಂಗಳೂರು, ಅ.12: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಆದಾಯ, ಲಾಭ ಪಡೆದುಕೊಂಡಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 12.1 ರಂತೆ 3398 ಕೋಟಿ ರು ನಿವ್ವಳ ಲಾಭ ಪಡೆದುಕೊಂಡಿದೆ. ಮಾರುಕಟ್ಟೆ ನಿರೀಕ್ಷೆ 2,300 ಕೋಟಿ ರು ಮಾತ್ರ ಇತ್ತು.
ಎರಡನೇ ತ್ರೈಮಾಸಿಕ(ಜುಲೈನಿಂದ ಸೆಪ್ಟೆಂಬರ್ ತನಕ) ದಲ್ಲಿ ರುಪಾಯಿ ಆದಾಯ (ತ್ರೈಮಾಸಿಕದಿಂದ ತ್ರೈಮಾಸಿಕ) 15,635 ಕೋಟಿ ರು ನಷ್ಟಿದೆ. ಡಾಲರ್ ಆದಾಯ ಪ್ರಗತಿ ಶೇ 6 ರಷ್ಟು ಏರಿಕೆ ಕಂಡು 2,392 ಮಿಲಿಯನ್ ಡಾಲರ್ ಗೇರಿದೆ. ಇದು ಕಳೆದ 16 ತ್ರೈಮಾಸಿಕ ಅವಧಿಗಳಲ್ಲೇ ಉತ್ತಮವಾಗಿದೆ.[ಇನ್ಫೋಸಿಸ್ Q1: ಆದಾಯ 12%, ಲಾಭ 5% ಏರಿಕೆ]
2016ರ ಆರ್ಥಿಕ ವರ್ಷಕ್ಕೆ ಡಾಲರ್ ಆದಾಯ ಮಾರ್ಗದರ್ಶಿ ಶೇ 6.4 ರಿಂದ 8.4ರಷ್ಟಿಕ್ಕೆ ಇಳಿಕೆ ಮಾಡಿಕೊಂಡಿದೆ. ಶೇ 7.2 ರಿಂದ 9.2 (ಡಾಲರ್ ಪ್ರಗತಿ) ನಷ್ಟಿತ್ತು. ಸಂಸ್ಥೆಯ ಹಿರಿಯ ಉದ್ಯೋಗಿ ರಾಜೀವ್ ಬನ್ಸಾಲ್ ಅವರು ಸಿಎಫ್ ಒ ಹುದ್ದೆಯಿಂದ ಕೆಳಗಿಳಿಯುತ್ತಿರುವುದು ಮಾತ್ರ ಇನ್ಫೋಸಿಸ್ ಗೆ ಮುಂದೆ ಭಾರಿ ಹೊಡೆತ ಬೀಳಬಹುದು.

ಎರಡನೇ ತ್ರೈಮಾಸಿಕ ಅವಧಿಯಲ್ಲಿ 82 ಹೊಸ ಗ್ರಾಹಕರನ್ನು ಇನ್ಫಿ ಸೇರಿಸಿಕೊಂಡಿದೆ. ಒಟ್ಟಾರೆ 1,011 ಗ್ರಾಹಕರನ್ನು ಈಗ ಹೊಂದಿದೆ. 5 ಅತಿದೊಡ್ಡ ಒಪ್ಪಂದಗಳು(ಯುಎಸ್ ಡಾಲರ್ 983 ಮಿಲಿಯನ್) ಟಿಸಿವಿ ಜೊತೆ ಮಾಡಿಕೊಂಡಿದೆ. ಟಾಮ್ಸ್ ಶೂಸ್, ಎಬಿಬಿ, ಸಕ್ಸ್ ಫಿಫ್ತ್ ಅವಿನ್ಯೂ ಹಾಗೂ ಎಟಿಪಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. [ಇನ್ಫೋಸಿಸ್ ಗೆ ಆಘಾತ, ಸಿಎಫ್ಒ ರಾಜೀವ್ ರಾಜೀನಾಮೆ]
ಭಾರತದ ಸರಕು ಸಾಗಣೆ ಹಾಗೂ ಸೇವಾ ತೆರಿಗೆ ನೆಟ್ವರ್ಕ್ ಜಾಲ ಬೆಸೆಯಲು 1,380 ಕೋಟಿ ರು ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ. ಆಟ್ರಿಷನ್ ಪ್ರಮಾಣ ಶೇ 19.9ಕ್ಕೆ ಜಿಗಿದು ನಂತರ 19.2ಕ್ಕೆ ಇಳಿದಿದೆ. ಒಟ್ಟಾರೆ, ಎರಡನೇ ತ್ರೈಮಾಸಿಕದ ಕೊನೆಗೆ ಇನ್ಫೋಸಿಸ್ 1,87,976 ಉದ್ಯೋಗಿಗಳನ್ನು ಹೊಂದಿದೆ. ಸಂಸ್ಥೆಯು ತನ್ನ ಉದ್ಯೋಗಿಗಳಿಗೆ 10 ರು ಪ್ರತಿ ಷೇರಿನಂತೆ ಮಧ್ಯಂತರ ಡಿವೆಡೆಂಡ್ ಘೋಷಿಸಿದೆ.
ಬೆಂಗಳೂರು ಮೂಲದ ಸಂಸ್ಥೆ ಮೊದಲ ತ್ರೈಮಾಸಿಕದ ನಿವ್ವಳ ಆದಾಯದಲ್ಲಿ ಶೇ12.4ರಷ್ಟು ಏರಿಕೆ, 14,354 ಕೋಟಿ ರು ಗಳಿಸಿತ್ತು. ಜೂ 30, 2015ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ 3,030 ಕೋಟಿ ರು ನಂತೆ ಶೇ 5ರಷ್ಟು ಆದಾಯ ಪಡೆದುಕೊಂಡಿತ್ತು.












Click it and Unblock the Notifications