ಇನ್ಫೊಸಿಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ರಿತಿಕಾ ಸೂರಿ ರಾಜೀನಾಮೆ
ನವದೆಹಲಿ, ಜುಲೈ 19 : ದೈತ್ಯ ಐಟಿ ಸಂಸ್ಥೆ ಇನ್ಫೊಸಿಸ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ರಿತಿಕಾ ಸೂರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಕಾರಣ ತಿಳಿದುಬಂದಿಲ್ಲ.
ಇಸ್ರೇಲ್‌ನ ತಂತ್ರಜ್ಞಾನ ಸಂಸ್ಥೆ ಪನಯಾದ ಖರೀದಿಸಲು ಇನ್ಫೊಸಿಸ್ ಅಗತ್ಯಕ್ಕಿಂತ ಹೆಚ್ಚು ಹಣ ಪಾವತಿಸಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಆರೋಪಗಳ ಕುರಿತು ಆಂತರಿಕ ತನಿಖೆ ನಡೆಸಲು ಇನ್ಫೊಸಿಸ್, ಗಿಬ್ಸನ್ ಡನ್ ಆಂಡ್ ಕಂಟ್ರೋಲ್ ರಿಸ್ಕ್ಸ್ (ಜಿಡಿಸಿಆರ್) ಸಂಸ್ಥೆಗೆ ವಹಿಸಲಾಗಿತ್ತು. ಈ ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಜಿಡಿಸಿಆರ್ ವರದಿ ನೀಡಿತ್ತು.

ಎಸ್‌ಎಪಿ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕಿಯಾಗಿದ್ದ ರಿತಿಕಾ ಸೂರಿ ಅವರನ್ನು ಇನ್ಫೊಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರು ಸಂಸ್ಥೆಗೆ ಕರೆತಂದಿದ್ದರು.
ಸ್ಟಾರ್ಟ್‌ಅಪ್‌ಗಳಲ್ಲಿ ಬಂಡವಾಳ ತೊಡಗಿಸುವ ಉದ್ದೇಶಕ್ಕೆ 3,250 ಕೋಟಿಗಳ ನಿಧಿ ಸ್ಥಾಪಿಸಲು ಇವರು ಸಂಸ್ಥೆಗೆ ನೆರವಾಗಿದ್ದರು.












Click it and Unblock the Notifications