ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಸಂಸ್ಥೆಯ ಲಕ್ಷಾಂತರ ಸಿಬ್ಬಂದಿಗೆ ಬಡ್ತಿ

|
Google Oneindia Kannada News

ಬೆಂಗಳೂರು, ಆ. 20: ಕೊವಿಡ್19 ಸಂಕಷ್ಟದ ನಡುವೆ ಆರ್ಥಿಕ ಸಂಕಷ್ಟದಿಂದ ತಡೆ ಹಿಡಿದಿದ್ದ ಬಡ್ತಿ ಪ್ರಕ್ರಿಯೆಗೆ ಪುನರ್ ಚಾಲನೆ ನೀಡಲು ಇನ್ಫೋಸಿಸ್ ಮುಂದಾಗಿದೆ. ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸಂಸ್ಥೆ ಸರಿ ಸುಮಾರು 1.2 ಲಕ್ಷ ಉದ್ಯೋಗಿಗಳಿಗೆ ಸೆಪ್ಟೆಂಬರ್ ತಿಂಗಳ ವೇಳೆಗೆ ಬಡ್ತಿ ಘೋಷಿಸಲು ಸಜ್ಜಾಗಿದೆ.

10 ವರ್ಷಗಳಿಗಿಂತ ಕಡಿಮೆ ಕೆಲಸದ ಅನುಭವ ಹೊಂದಿರುವವರು, ಜ್ಯೂನಿಯರ್ ಹಾಗೂ ಮಧ್ಯಮ ಸ್ತರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಬಡ್ತಿಯನ್ನು ನೀಡಲಾಗುತ್ತದೆ ಎಂದು ಇನ್ಫೋಸಿಸ್ ನ ಮಾನವ ಸಂಪನ್ಮೂಲ ಗುಂಪಿನ ಮುಖ್ಯಸ್ಥ ಕೃಷ್ಣ ಶಂಕರ್ ಹೇಳಿದ್ದಾರೆ.

85 ಲಕ್ಷ ಷೇರು ಮಾರಾಟ ಮಾಡಿದ ಇನ್ಫೋಸಿಸ್ ಸಹ ಸಂಸ್ಥಾಪಕ ಶಿಬುಲಾಲ್85 ಲಕ್ಷ ಷೇರು ಮಾರಾಟ ಮಾಡಿದ ಇನ್ಫೋಸಿಸ್ ಸಹ ಸಂಸ್ಥಾಪಕ ಶಿಬುಲಾಲ್

ಕಾಗ್ನಿಜಂಟ್, ಕ್ಯಾಪ್ ಜೆಮನಿ ಸಂಸ್ಥೆಗಳ ನಂತರ ಲಕ್ಷಾಂತರ ಮಂದಿ ಉದ್ಯೋಗಿಗಳಿಗೆ ಬಡ್ತಿ ಘೋಷಿಸಿದ ಮೊದಲ ಕಂಪನಿ ಇನ್ಫೋಸಿಸ್ ಎನಿಸಿಕೊಂಡಿದೆ.

Infosys employees likely to get promotion by September

ಆದರೆ, ಮಾರುಕಟ್ಟೆ ತಜ್ಞರ ಪ್ರಕಾರ, ಮುಂದಿನ ಆರ್ಥಿಕ ವರ್ಷದ ಹಿತದೃಷ್ಟಿಯಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಈ ರೀತಿ ಬಡ್ತಿ ನೀಡಲಾಗುತ್ತದೆ. ಇದು ನೇರವಾಗಿ ಸಂಬಳ ಏರಿಕೆ ಎಂದು ತಿಳಿಯಬೇಕಾಗಿಲ್ಲ. ಹೆಚ್ಚಿನ ಜವಾಬ್ದಾರಿ ನೀಡಿ, ಮುಂದಿನ ಸ್ತರಕ್ಕೆ ಉದ್ಯೋಗಿಗಳನ್ನು ಕೊಂಡೊಯ್ಯುವ ಪ್ರಕ್ರಿಯೆಯಾಗಿದೆ ಎಂದಿದ್ದಾರೆ.

English summary
Infosys, India's second-biggest outsourcer, is all set to offer promotions to junior and mid-level employees, which were stalled due to Covid 19 Pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X