ಕಳಪೆ ಸಾಧನೆ: ಇನ್ಫಿ ಸಿಇಒ ಸಿಕ್ಕಾ ಸಂಬಳ ಇಳಿಕೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 15: ಇನ್ಫೋಸಿಸ್ ನ ಸಂಬಳ ಏರಿಕೆ ಸುದ್ದಿ ಕೆಲ ದಿನಗಳ ಹಿಂದೆ ಸದ್ದು ಮಾಡಿತ್ತು. ಈಗ ಮತ್ತೊಮ್ಮೆ ಸಂಬಳ ಸುದ್ದಿಯಾಗಿದೆ. ಸಿಇಒ ಹಾಗೂ ಎಂಡಿ ವಿಶಾಲ್ ಸಿಕ್ಕಾ ಅವರ ವಾರ್ಷಿಕ ಸಂಬಳದ ಪ್ಯಾಕೇಜ್ ಶೇ 40ರಷ್ಟು ಇಳಿಮುಖವಾಗಿದೆ.

2017ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕ ವರದಿಯಲ್ಲಿ ಲಾಭವೂ ಇಲ್ಲ, ಆದಾಯವೂ ಇಲ್ಲದ ಫಲಿತಾಂಶ ಹೊರಬಂದಿದ್ದರಿಂದ ಸಿಕ್ಕಾ ಅವರ ವಾರ್ಷಿಕ ಸಂಬಳ, ಸಂಭಾವನೆಯ ಮೊತ್ತ ಕರಗಿದೆ.[ಇನ್ಫೋಸಿಸ್ Q4 ಪ್ರಕಟ, ಲಾಭವೂ ಇಲ್ಲ, ಆದಾಯವೂ ಇಳಿಕೆ]

Infosys CEO Vishal Sikka's salary drops 40% after Q4 results

ಸಿಕ್ಕಾ ಅವರ ಸಂಬಳ ಪ್ಯಾಕೇಜ್ 3 ಮಿಲಿಯನ್ ಡಾಲರ್ ಇದೆ. ಕಳೆದ ಆರ್ಥಿಕ ವರ್ಷದಲ್ಲಿ ಟೇಕ್ ಹೋಮ್ ಸ್ಯಾಲರಿ 6.7 ಮಿಲಿಯನ್ ಡಾಲರ್ ಗೇರಿತ್ತು. ವೇರಿಯಬಲ್ ಪೇ ಸೇರಿಸಿದರೆ 11 ಮಿಲಿಯನ್ ಡಾಲರ್ ಆಗುತ್ತದೆ.[ಇನ್ಫಿ ಮೂರ್ತಿ ಬೆಂಬಲಕ್ಕೆ ನಿಂತ ಪೈ]

ಕಂಪನಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಸಿಇಒ ಅವರಿಗೆ ಬರಬೇಕಿರುವ 11 ಮಿಲಿಯನ್ ಡಾಲರ್ ವೇರಿಯಬಲ್ ಪೇ ಕೂಡಾ ಸಿಗುತ್ತದೆ. ಇಲ್ಲದಿದ್ದರೆ ಕಡಿತ ಹೆಚ್ಚಾಗುತ್ತದೆ.

ಕಳೆದ ವರ್ಷ ಸರಿ ಸುಮಾರು 48.73 ಕೋಟಿ ರು ವಾರ್ಷಿಕ ಪ್ಯಾಕೇಜ್ ಗಳಿಸಿದ್ದರು. ಇದೇ ವೇಳೆ ಟಿಸಿಎಸ್ ನ ಸಿಇಒ ಎನ್ ಚಂದ್ರಶೇಖರನ್ ಅವರಿಗೆ 25.6 ಕೋಟಿ ರು ಪ್ಯಾಕೇಜ್ ಇದ್ದರೆ, ವಿಪ್ರೋನ ಸಿಇಒ ಅಬಿದಾಲಿ ನೀಮುಚ್ವಾಲ ವಾರ್ಷಿಕ 12 ಕೋಟಿ ರು ಗಳಿಸಿದ್ದಾರೆ.

ಇತ್ತೀಚೆಗೆ ಸಿಒಒ ಪ್ರವೀಣ್ ರಾವ್ ಅವರ ಸಂಬಳ ಏರಿಕೆ ಮಾಡಿದ್ದರ ಬಗ್ಗೆ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ, ಮೋಹನ್ ದಾಸ್ ಪೈ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Infosys CEO Vishal Sikka's salary drops 40% after Q4 results.Vishal Sikka's annual compensation has dropped by 40 per cent after the final quarter of FY17.
Please Wait while comments are loading...