ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

37 ಸಾವಿರ ದಾಟಿ ಸಾರ್ವಕಾಲಿಕ ದಾಖಲೆ ಬರೆದ ಭಾರತದ ಷೇರು ಮಾರುಕಟ್ಟೆ

|
Google Oneindia Kannada News

ಮುಂಬೈ, ಜುಲೈ 26: ಭಾರತದ ಷೇರು ಮಾರುಕಟ್ಟೆ ಗುರುವಾರ ಹೊಸ ದಾಖಲೆ ಬರೆಯಿತು. ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆ ಕಂಡು, ಸೆನ್ಸೆಕ್ಸ್ 37 ಸಾವಿರಕ್ಕೆ ಏರಿತು. ಇನ್ನು ನಿಫ್ಟಿ 11,176 ಅಂಶವನ್ನು ತಲುಪಿತು. ಗುರುವಾರದಂದು ಆರಂಭದಲ್ಲೇ ದಾಖಲೆಯ 36,928.38 ಅಂಶಗಳಿಗೆ ಶುರುವಾದ ಸೆನ್ಸೆಕ್ಸ್ ಆ ನಂತರ ದಿನದ ವಹಿವಾಟಿನಲ್ಲಿ 37,024.55 ಮುಟ್ಟಿತು.

ಇನ್ನು ನಿಫ್ಟಿ 50 ಸೂಚ್ಯಂಕವು 11,132.95 ಅಂಶದೊಂದಿಗೆ ಆರಂಭವಾಗಿ ಈ ಹಿಂದಿನ ದಾಖಲೆಯಾಗಿದ್ದ 11,172 ಅಂಶಗಳನ್ನು ಮೀರಿ ನಿಂತಿತು. ಸೆನ್ಸೆಕ್ಸ್ ನಲ್ಲಿ ಎಸ್ ಬಿಐ, ಭಾರ್ತಿ ಏರ್ ಟೆಲ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್ ಮತ್ತು ಐಟಿಸಿ ಉತ್ತಮ ಏರಿಕೆ ದಾಖಲಿಸಿದವು.

ಷೇರುಪೇಟೆ: ಸೆಕೆಂಡುಗಳಲ್ಲಿ 5 ಲಕ್ಷ ಕೋಟಿ ಖಲಾಸ್!ಷೇರುಪೇಟೆ: ಸೆಕೆಂಡುಗಳಲ್ಲಿ 5 ಲಕ್ಷ ಕೋಟಿ ಖಲಾಸ್!

ನಿಫ್ಟಿಯಲ್ಲಿ ಎಸ್ ಬಿಐ ಸೇರಿದ ಹಾಗೆ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್, ಅಲ್ಟ್ರಾಟೆಕ್ ಸಿಮೆಂಟ್, ಐಷರ್ ಮೋಟಾರ್ಸ್ ಮತ್ತು ಐಸಿಐಸಿಐ ಬ್ಯಾಂಕ್ ಏರಿಕೆ ಕಂಡವು. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಷೇರುಗಳ ಬೆಲೆ ಹೆಚ್ಚಳವಾಗಿ, ಸೂಚ್ಯಂಕ ಏರಿಕೆಗೆ ಹೆಚ್ಚಿನ ಕೊಡುಗೆ ನೀಡಿದವು. ಇನ್ನು ಜುಲೈ ತಿಂಗಳ ಫ್ಯೂಚರ್ ಅಂಡ್ ಆಪ್ಷನ್ ಶುಕ್ರವಾರವೇ ಕೊನೆಯಾಗಲಿದ್ದು, ಆ ಅಂಶ ಕೂಡ ಏರಿಕೆಗೆ ಕೊಡುಗೆ ನೀಡಿತು.

Indian share markets record all time high

ದೇಶಿ ಹೂಡಿಕೆದಾರರ ಖರೀದಿ ಆಸಕ್ತಿ, ಜೂನ್ ತ್ರೈ ಮಾಸಿಕದಲ್ಲಿ ಬಂದ ವಿವಿಧ ಕಂಪೆನಿಗಳ ಉತ್ತಮ ಫಲಿತಾಂಶ, ಜಾಗತಿಕ ಅಂಶಗಳು ಕೂಡ ಪರಿಣಾಮ ಬೀರಿತು. ದಿನದ ಕೊನೆಗೆ ಸೆನ್ಸೆಕ್ಸ್ 36,984.64 ಹಾಗೂ ನಿಫ್ಟಿ 11167.30 ಅಂಶಗಳಲ್ಲಿ ಕೊನೆಗೊಂಡವು.

English summary
Indian share market Sensex record all time high of 37 thousand and NIfty 50 above 11 thousand on Thursday, July 26th. Here is the business story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X