ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಲರ್ ಎದುರು ಎಂಟು ತಿಂಗಳಲ್ಲೇ ತೀವ್ರ ಕುಸಿತ ಕಂಡ ರೂಪಾಯಿ

|
Google Oneindia Kannada News

ಮುಂಬೈ, ಆಗಸ್ಟ್ 23: ಕಳೆದ ಡಿಸೆಂಬರ್‌ ಬಳಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕನಿಷ್ಠ ಕುಸಿತ ಕಂಡಿದೆ.

ಗುರುವಾರ ಮಾರುಕಟ್ಟೆ ಅಂತ್ಯದ ವೇಳೆಗೆ 71.81ರಷ್ಟಿದ್ದ ರೂಪಾಯಿ ಮೌಲ್ಯ, ಶುಕ್ರವಾರ ಮಾರುಕಟ್ಟೆ ಆರಂಭವಾದ ವೇಳೆ 71.91ಕ್ಕೆ ಕುಸಿಯಿತು. ಕಳೆದ ಆರು ವರ್ಷಗಳಲ್ಲಿಯೇ ಆಗಸ್ಟ್ ತಿಂಗಳಿನಲ್ಲಿ ರೂಪಾಯಿ ಮೌಲ್ಯ ಅತಿ ಹೆಚ್ಚು ಕುಸಿದಿದೆ. ವಿದೇಶಿ ಬಂಡವಾಳ ಹೊರಹರಿವಿನ ಹೆಚ್ಚಳದಿಂದ ಮತ್ತು ಈಕ್ವಿಟಿ ಮಾರುಕಟ್ಟೆಯ ಕುಸಿತದಿಂದ ರೂಪಾಯಿ ಮೌಲ್ಯ ಕುಸಿತ ಕಂಡಿದೆ.

ಪಾರ್ಲೆಯನ್ನೇ ನುಂಗಿದ ಜಿಎಸ್‌ಟಿ: ಬಿಸ್ಕತ್‌ಗೆ ಬೇಡಿಕೆ ತೀವ್ರ ಕುಸಿತ ಪಾರ್ಲೆಯನ್ನೇ ನುಂಗಿದ ಜಿಎಸ್‌ಟಿ: ಬಿಸ್ಕತ್‌ಗೆ ಬೇಡಿಕೆ ತೀವ್ರ ಕುಸಿತ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಬಲವಾಗಿರುವ ಡಾಲರ್ ಮತ್ತು ಮುಂದಿವರಿದಿರುವ ವಿದೇಶಿ ಬಂಡವಾಳ ಹೊರಹರಿವು ದೇಶಿ ಕರೆನ್ಸಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಫೋರೆಕ್ಸ್ ವ್ಯಾಪಾರಿಗಳು ಹೇಳಿದ್ದಾರೆ.

Indian Rupee Falls To 72 Against Dollar

ಗುರುವಾರ ಮುಖ್ಯ ಮಾರುಕಟ್ಟೆಯಲ್ಲಿ ವಿದೇಶಿ ಪೋರ್ಟ್ ಫೋಲಿಯೋ ಹೂಡಿಕೆ ಹಿಂತೆಗೆತವು ಸುಮಾರು 900 ಕೋಟಿಯಷ್ಟಿತ್ತು. ಆರ್ಥಿಕತೆಯ ನಿಧಾನಗತಿಯನ್ನು ಸರಿಪಡಿಸುವ ಭಾರತ ಸರ್ಕಾರದ ಕ್ರಮದ ಬಗ್ಗೆ ಯಾವ ಭರವಸೆಯನ್ನು ಹೊಂದದ ವಿದೇಶಿ ಹೂಡಿಕೆದಾರರು ಭಾರತದಲ್ಲಿನ ಈಕ್ವಿಟಿ ಫಂಡ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.

English summary
Indian Rupee has congtinued to fall against Dollar. Rupee value down to nearly 72 on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X