ಫ್ರಾನ್ಸ್ ನಲ್ಲಿ ಉಗ್ರರ ದಾಳಿ, ಐಟಿ ಕಂಪನಿಗಳು ತತ್ತರ

ಪ್ಯಾರೀಸ್, ನ.15: ಇರಾಕಿ ಉಗ್ರರ ದಾಳಿಯಿಂದ ಫ್ರಾನ್ಸ್ ತತ್ತರಿಸಿದೆ. ಎರಡನೇ ವಿಶ್ವ ಯುದ್ಧದ ಬಳಿಕ ಫ್ರಾನ್ಸ್ ಅತಿ ಭೀಕರ ಸಾವು ನೋವು ಕಂಡಿದೆ. ಫ್ರಾನ್ಸ್ ನಲ್ಲಿರುವ ಭಾರತೀಯ ಮೂಲದ ಐಟಿ ಕಂಪನಿಗಳು ತನ್ನ ಉದ್ಯೋಗಗಳಿಗೆ ಸುರಕ್ಷಣಾ ಮಾರ್ಗಸೂಚಿ ಹೊರಡಿಸಿವೆ.

ಉದ್ಯೋಗಿಗಳು ಸಹಜವಾಗಿ ಗಾಬರಿಯಾಗಿದ್ದು, ಸೂಕ್ತ ಸಲಹೆ, ಮಾರ್ಗದರ್ಶನದ ನಿರೀಕ್ಷೆಯಲ್ಲಿದ್ದರು. ಹೀಗಾಗಿ ಭಾರತದ ಪ್ರಮುಖ ಕಂಪನಿಗಳು ಉದ್ಯೋಗಿಗಳಿಗೆ ಧೈರ್ಯ ಸೂಚಿಸಿವೆ. [ಪ್ಯಾರಿಸ್‌ ಉಗ್ರರ ದಾಳಿಯ ಹೊಣೆಹೊತ್ತ ಐಎಸ್‌ಐಎಸ್]

ಮುಂಬೈ ಮಾದರಿಯಲ್ಲೇ ಪ್ಯಾರಿಸ್ ನ ಆರು ಕಡೆಗಳಲ್ಲಿ ಐಸೀಸ್ ಉಗ್ರರು ನಡೆಸಿದ ಭೀಕರ ಸರಣಿ ಆತ್ಮಾಹುತಿ ದಾಳಿಗಳಿಗೆ ಕನಿಷ್ಠ 153 ಮಂದಿ ಬಲಿಯಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಐಟಿ ಉದ್ಯೋಗಿಗಳಿಗೆ ಸೂಚನೆ: ಸ್ಥಳೀಯ ಭದ್ರತಾ ಪಡೆ ನೀಡುವ ಸೂಚನೆ ಮೇರೆಗೆ ಕಾರ್ಯ ನಿರ್ವಹಿಸುವಂತೆ ತನ್ನ ಉದ್ಯೋಗಿಗಳಿಗೆ ಟಿಸಿಎಸ್, ವಿಪ್ರೋ ಹಾಗೂ ಇನ್ಫೋಸಿಸ್ ಸೂಚಿಸಿದೆ.

Indian IT companies issue advisory for employees in Paris

ನಮ್ಮ ಎಲ್ಲಾ ಉದ್ಯೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ಟಿಸಿಎಸ್ ಪ್ರಕಟಣೆ ಹೊರಡಿಸಿದೆ. ಫ್ರಾನ್ಸ್ ನಲ್ಲಿ ಮೊದಲಿಗೆ ಕಾಲಿಟ್ಟ ಭಾರತೀಯ ಐಟಿ ಕಂಪನಿ ಟಿಸಿಎಸ್ ನಲ್ಲಿ 1,300ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. 1992 ರಿಂದ ಪ್ಯಾರಿಸ್ ನಲ್ಲಿ ಟಿಸಿಎಸ್ ಕೇಂದ್ರ ಕಚೇರಿ ಹೊಂದಿದೆ. ಏರ್ ಬಸ್ ಸೇರಿದಂತೆ 20ಕ್ಕೂ ಅಧಿಕ ಸ್ಥಳೀಯ ಕಂಪನಿಗಳ ಜೊತೆ ವವ್ಯಹಾರ ಇಟ್ಟುಕೊಂಡಿದೆ.

ಉದ್ಯೋಗಿಗಳ ಸುರಕ್ಷತೆ ನಮ್ಮ ಆದ್ಯತೆ, ವಿಕೋಪದ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಉದ್ಯೋಗಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದು ಅತ್ಯಂತ ಖಂಡನೀಯ ಘಟನೆ. ಈ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಇನ್ಫೋಸಿಸ್ ಹಾಗೂ ವಿಪ್ರೋ ಹೇಳಿವೆ.

ಪ್ಯಾರಿಸ್‌ನ ಕ್ರೀಡಾಂಗಣದಲ್ಲಿ ಜರ್ಮನಿ ಹಾಗೂ ಫ್ರಾನ್ಸ್ ನಡುವೆ ಶುಕ್ರವಾರ ಸೌಹಾರ್ದ ಫುಟ್ಬಾಲ್ ಪಂದ್ಯಾವಳಿ ನಡೆದಿತ್ತು, ಈ ಸಮಾರಂಭದಲ್ಲಿ ಫ್ರಾನ್ಸ್‌ನ ಅಧ್ಯಕ್ಷ ಹೊಲಾಂಡೆ ಮುಖ್ಯ ಅತಿಥಿಯಾಗಿ ಬರುವುದನ್ನು ಗುರಿಯನ್ನಾಗಿ ದಾಳಿ ಮಾಡಲಾಗಿದೆ. ಇನ್ನೊಂದೆಡೆ ಸಾವಿರಾರು ಜನ ಸೇರಿದ್ದ ಬಾಟಕ್ಲಾನದ ಸಂಗೀತಗೋಷ್ಠಿ, ಬಾರ್ ಹಾಗೂ ರೆಸ್ಟೋರೆಂಟ್‌ ಗಳಂಥ ಜನನಿಬಿಡ ಸ್ಥಳಗಳನ್ನು ಉಗ್ರರು ದಾಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ.

ಜನವರಿ 17ರಂದು ಪ್ಯಾರಿಸ್‌ನಲ್ಲಿ ಚಾರ್ಲಿ ಹೆಬ್ಡೊ ನಿಯತಕಾಲಿಕ ಕಚೇರಿ ಹಾಗೂ ಯಹೂದಿ ಸೂಪರ್ ಮಾರ್ಕೆಟ್ ಮೇಲೆ ದುಷ್ಕರ್ಮಿಗಳು ನಡೆಸಿದ್ದ ದಾಳಿಗೆ ಕನಿಷ್ಠ 17 ಮಂದಿ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+