ಭಾರತದಲ್ಲಿ ನಿರುದ್ಯೋಗ ದರ ಶೇ.6.57ಕ್ಕೆ ಇಳಿಕೆ

ನವದೆಹಲಿ, ಫೆಬ್ರವರಿ 03: ಭಾರತದ ನಿರುದ್ಯೋಗ ದರವು ಜನವರಿಯಲ್ಲಿ 6.57 ಪ್ರತಿಶತಕ್ಕೆ ಕುಸಿದಿದೆ. ಇದು ಮಾರ್ಚ್ 2021ರ ಬಳಿಕ ಮೊದಲ ಬಾರಿಗೆ ಈ ಮಟ್ಟಕ್ಕೆ ನಿರುದ್ಯೋಗ ದರವು ಕುಸಿತ ಕಂಡಿದೆ. ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ರೂಪಾಂತರ ಓಮಿಕ್ರಾನ್‌ ಕಡಿಮೆ ಆಗುತ್ತಿರುವ ಹಿನ್ನೆಲೆ ನಿರ್ಬಂಧಗಳನ್ನು ಹಲವಾರು ರಾಜ್ಯಗಳು ಸಡಿಲಿಕೆ ಮಾಡಿದೆ. ಈ ಬೆನ್ನಲ್ಲೇ ದೇಶದಲ್ಲಿ ನಿರುದ್ಯೋಗ ದರವು ಜನವರಿಯಲ್ಲಿ ಇಳಿಕೆ ಆಗಿದೆ. ಕ್ರಮೇಣವಾಗಿ ಮತ್ತಷ್ಟು ಚೇತರಿಕೆ ಕಾಣಲಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಹೇಳಿದೆ.

"ಭಾರತದ ನಗರ ಭಾಗದಲ್ಲಿ ನಿರುದ್ಯೋಗವು ಜನವರಿಯಲ್ಲಿ ಶೇಕಡಾ 8.16 ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇಕಡಾ 5.84 ರಷ್ಟಿದೆ. ಡಿಸೆಂಬರ್‌ನಲ್ಲಿ ನಿರುದ್ಯೋಗ ದರವು ಶೇಕಡಾ 7.91 ರಷ್ಟಿತ್ತು, ನಗರವು ಶೇಕಡಾ 9.30 ಮತ್ತು ಗ್ರಾಮೀಣ ಶೇಕಡಾ 7.28 ರಷ್ಟಿತ್ತು," ಎಂದು ಸಿಎಂಐಇ ಡೇಟಾ ಹೇಳಿದೆ.

ತೆಲಂಗಾಣದಲ್ಲಿ ಜನವರಿಯಲ್ಲಿ ಅತ್ಯಂತ ಕಡಿಮೆ ನಿರುದ್ಯೋಗ ದರ ಇದೆ. ಇಲ್ಲಿ ನಿರುದ್ಯೋಗ ದರವು ಶೇ 0.7 ಎಂದು ವರದಿ ಆಗಿದೆ. ಇನ್ನು ಗುಜರಾತ್‌ನಲ್ಲಿ ಶೇ. 1.2, ಮೇಘಾಲಯ ಶೇ. 1.5 ಮತ್ತು ಒಡಿಶಾ ಶೇ. 1.8 ನಿರುದ್ಯೋಗ ದರವಿದೆ. ಆದರೆ ಹರಿಯಾಣದಲ್ಲಿ ಅತೀ ಹೆಚ್ಚು ನಿರುದ್ಯೋಗ ದರವಿದೆ. ಹರಿಯಾಣದಲ್ಲಿ 23.4 ಪ್ರತಿಶತ, ರಾಜಸ್ಥಾನದಲ್ಲಿ 18.9 ಪ್ರತಿಶತದಷ್ಟು ನಿರುದ್ಯೋಗ ದರವಿದೆ.

India’s Unemployment Rate Drops to 6.57% In Jan, Lowest Since March 2021

ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಎಷ್ಟು?

ಡಿಸೆಂಬರ್ 2021 ರ ಹೊತ್ತಿಗೆ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ 53 ಮಿಲಿಯನ್ ಆಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಅಂದಾಜು ಮಾಡಿದೆ. ಈ ಬಗ್ಗೆ ಮಾತನಾಡಿದ, ಸಿಎಂಐಇ ಎಂಡಿ, ಸಿಇಒ ಮಹೇಶ್ ವ್ಯಾಸ್, "ಡಿಸೆಂಬರ್‍ ಡೇಟಾವನ್ನು ಪರಿಶೀಲನೆ ಮಾಡಿದಾಗ, ಡಿಸೆಂಬರ್ 2021 ರಲ್ಲಿ 35 ಮಿಲಿಯನ್ ಜನರು ಸಕ್ರಿಯವಾಗಿ ಕೆಲಸ ಹುಡುಕುತ್ತಿದ್ದಾರೆ. ಅದರಲ್ಲಿ 23 ಪ್ರತಿಶತ ಅಥವಾ 8 ಪ್ರತಿಶತ ಮಿಲಿಯನ್ ಮಹಿಳೆಯರು ಆಗಿದ್ದಾರೆ," ಎಂದು ಹೇಳಿದ್ದಾರೆ.

"ಹೆಚ್ಚುವರಿ 17 ಮಿಲಿಯನ್ ಉದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸುವುದು ಅಷ್ಟೇ ಮುಖ್ಯವಾದ ಸವಾಲಾಗಿದೆ. ಕೆಲಸ ಲಭ್ಯವಿದ್ದರೆ ಕೆಲಸ ಮಾಡಲು ಸಿದ್ಧರಿದ್ದಾರೆ.. ಆದರೆ ಉದ್ಯೋಗಕ್ಕಾಗಿ ಕೆಲವು ಸಕ್ರಿಯವಾಗಿ ಹುಡುಕಾಟ ನಡೆಸುತ್ತಿಲ್ಲ," ಎಂದು ಕೂಡಾ ಮಹೇಶ್ ವ್ಯಾಸ್ ಅಭಿಪ್ರಾಯ ಪಟ್ಟಿದ್ದಾರೆ.

ಡಿಸೆಂಬರ್‌ ನಿರುದ್ಯೋಗ ದರ

ಸೆಂಟ್ರಲ್‌ ಫಾರ್‌ ಮೊನಿಟರಿಂಗ್‌ ಇಂಡಿಯಾ ಇಕಾನಮಿ (ಸಿಎಂಐಇ) ಡಿಸೆಂಬರ್‌ನ ಡೇಟಾವು ದೇಶದಲ್ಲಿ ನಿರುದ್ಯೋಗ ಪ್ರಮಾಣದ ಹೆಚ್ಚಳವನ್ನು ತೋರಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ ನೋಡಿದಾಗ ಡಿಸೆಂಬರ್‌ನಲ್ಲಿ ನಿರುದ್ಯೋಗ ದರವು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಂದರೆ ಡಿಸೆಂಬರ್‌ನಲ್ಲಿ ದೇಶದಲ್ಲಿ ನಿರುದ್ಯೋಗ ದರವು 7.9ಕ್ಕೆ ಏರಿಕೆ ಕಂಡಿದೆ. ಇನ್ನು ನಗರದ ಉದ್ಯೋಗ ದರವು ನವೆಂಬರ್‌ 2021ರಲ್ಲಿ ಶೇಕಡ 8.21 ಇತ್ತು. ಆದರೆ ಡಿಸೆಂಬರ್‌ 2021ರಲ್ಲಿ ನಗರ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 9.3ಕ್ಕೆ ಏರಿಕೆ ಕಂಡಿದೆ. ಇನ್ನು ಗ್ರಾಮೀಣ ಭಾಗದಲ್ಲಿನ ನಿರುದ್ಯೋಗ ದರವು ಕೂಡಾ ಏರಿಕೆ ಕಂಡಿದೆ. ನವೆಂಬರ್‌ 2021ರಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 8.21 ಇತ್ತು. ಆದರೆ ಡಿಸೆಂಬರ್‌ 2021ರಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 7.28ಕ್ಕೆ ಏರಿಕೆ ಕಂಡಿದೆ. ಇನ್ನು ದೇಶದಲ್ಲಿ ನಿರುದ್ಯೋಗ ಪ್ರಮಾಣವು ನವೆಂಬರ್‌ 2021ರಲ್ಲಿ ಶೇಕಡ 7 ಆಗಿತ್ತು. ಆದರೆ ಡಿಸೆಂಬರ್‌ ವೇಳೆಗೆ ಶೇ.7.9ಕ್ಕೆ ಏರಿಕೆ ಆಗಿದೆ ಎಂದು ಸಿಎಂಐಇ ವೆಬ್‌ಸೈಟ್‌ ಉಲ್ಲೇಖ ಮಾಡಿದೆ.

ಭಾರತದಲ್ಲಿ 2021 ಮೇ ತಿಂಗಳಿನಲ್ಲಿ ನಿರುದ್ಯೋಗ ದರವು ತೀವ್ರ ಪ್ರಮಾಣದಲ್ಲಿ ಹೆಚ್ಚಳ ಕಂಡಿತ್ತು. ಮೇ ತಿಂಗಳಿನಲ್ಲಿ ದೇಶದಲ್ಲಿ ನಿರುದ್ಯೋಗ ದರವು ಶೇಕಡ 11.84 ಕ್ಕೆ ಏರಿಕೆ ಕಂಡಿತ್ತು. ಈ ಸಂದರ್ಭದಲ್ಲಿ ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯು ಅಪ್ಪಳಿಸಿತ್ತು. ಕೋವಿಡ್‌ನ ಮೊದಲ ಅಲೆಯ ಸಂದರ್ಭದಂತೆ ಈ ವೇಳೆಯು ಹಲವಾರು ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದರು. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+