ತ್ವರಿತ ಅಲರ್ಟ್ ಗಳಿಗಾಗಿ
For Daily Alerts
2020-21ರ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆಯು ಶೇಕಡಾ 7.7 ರಷ್ಟು ಸಂಕುಚಿತಗೊಳ್ಳಲಿದೆ
ನವದೆಹಲಿ, ಜನವರಿ 07: ಒಟ್ಟು ದೇಶೀಯ ಉತ್ಪನ್ನದ ಮೊದಲ ಮುಂಗಡ ಅಂದಾಜಿನ ಪ್ರಕಾರ, ಪ್ರಸಕ್ತ 2020-21ರ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆಯು ಶೇಕಡಾ 7.7 ರಷ್ಟು ಕುಗ್ಗುತ್ತದೆ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿವೆ.
2021ರ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರದ ಅಂದಾಜು ಶೇಕಡಾ 3.4 ರಷ್ಟಿದೆ. ಅಲ್ಲದೆ, ಗಣಿಗಾರಿಕೆ ಅಂದಾಜು ಶೇಕಡಾ -12.4 ರ ವಿರುದ್ಧ 3.1ರಷ್ಟಿದೆ. ನಾಮಮಾತ್ರ ಜಿಡಿಪಿ ಅಂದಾಜು ಶೇಕಡಾ -4.2 ರಷ್ಟಿದೆ.
"ಇತ್ತೀಚಿನ ತಿಂಗಳುಗಳಲ್ಲಿ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಸುಧಾರಣೆಯು ಆರ್ಥಿಕ ಚೇತರಿಕೆಗೆ ಮತ್ತಷ್ಟು ವೇಗವನ್ನು ನೀಡಿದೆ" ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಎರಡು ಲಸಿಕೆಗಳು ತುರ್ತು ಬಳಕೆಯ ಅನುಮೋದನೆ ಪಡೆಯುತ್ತಿದ್ದಂತೆ, ಸರ್ಕಾರವು ಸಾಮೂಹಿಕ ಮೆಗಾ ವ್ಯಾಕ್ಸಿನೇಷನ್ ಚಾಲನೆಗೆ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಸರ್ಕಾರ ಹೇಳಿದೆ.