ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ವಿನಾಯಿತಿ ಮಿತಿ 3 ಲಕ್ಷಕ್ಕೆ ಏರಿಸಿ: ಎಸ್.ಬಿ.ಐ

By Sachhidananda Acharya
|
Google Oneindia Kannada News

ನವದೆಹಲಿ, ಜನವರಿ 23: ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಬೇಕು ಎಂದು ಎಸ್.ಬಿ.ಐ ವರದಿ ಹೇಳಿದೆ. 7ನೇ ವೇತನ ಆಯೋಗದ ಜಾರಿ ನಂತರ ಆದಾಯದಲ್ಲಿ ಏರಿಕೆಯಾಗಿದ್ದು, ಆದಾಯ ತೆರಿಗೆ ಮಿತಿ ಏರಿಕೆ ಮಾಡುವಂತೆ ವರದಿಯಲ್ಲಿ ಹೇಳಿದೆ.

ಸರಕಾರದ ಈ ನಿರ್ಧಾರದಿಂದ 75 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಅದು ಹೇಳಿದೆ. ಇದೇ ವೇಳೆ ಎಸ್.ಬಿ.ಐನ 'ಇಕೋವ್ರಾಪ್' ವರದಿಯು ಹಾಲಿ ಗೃಹಸಾಲದಾರರಿಗೆ ನೀಡುತ್ತಿರುವ ಬಡ್ಡಿ ರಿಯಾಯಿತಿಯನ್ನು 2.5 ಲಕ್ಷ ರೂಪಾಯಿಗೆ ಏರಿಕೆ ಮಾಡುವಂತೆ ತಿಳಿಸಿದೆ.

ಎಸ್.ಬಿ.ಐನಿಂದ 9,000 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಎಸ್.ಬಿ.ಐನಿಂದ 9,000 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸದ್ಯ ಗೃಹ ಸಾಲದ ಮೇಲೆ 2 ಲಕ್ಷ ರೂಪಾಯಿವರೆಗೆ ಬಡ್ಡಿ ರಿಯಾಯಿತಿ ಇದೆ. ಬಡ್ಡಿ ರಿಯಾಯಿತಿ ಏರಿಕೆಯಿಂದ ಸರಕಾರಕ್ಕೆ ಕೇವಲ 7,500 ಕೋಟಿ ರೂಪಾಯಿ ಹೊರೆ ಬೀಳಲಿದ್ದು, ಇದರಿಂದ 75 ಲಕ್ಷ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ವರದಿ ಹೇಳಿದೆ.

 Increase income tax exemption limit to Rs 3 lakh, says SBI report

ಫೆಬ್ರವರಿ ಒಂದರಂದು ಅರುಣ್ ಜೇಟ್ಲಿ ಬಿಜೆಪಿ ಸರಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ.

ಆದಾಯ ತೆರಿಗೆ ವಿನಾಯಿತಿ ಖಚಿತ: ಬಜೆಟ್ ಪೂರ್ವ ಸಮೀಕ್ಷೆ ಆದಾಯ ತೆರಿಗೆ ವಿನಾಯಿತಿ ಖಚಿತ: ಬಜೆಟ್ ಪೂರ್ವ ಸಮೀಕ್ಷೆ

ಈ ಬಜೆಟ್ ನಲ್ಲಿ ನಿರ್ಧಿಷ್ಟ ಅವಧಿಯ ಠೇವಣಿಗಳ ಮೇಲಿನ ಬಡ್ಡಿಯ ಮೇಲಿನ ಟಿಡಿಎಸ್ ವಿನಾಯಿತಿ ಮಿತಿಯನ್ನು ಹಾಲಿ ವಾರ್ಷಿಕ 10,000 ದಿಂದ ಹೆಚ್ಚಳ ಮಾಡುವಂತೆಯೂ ಎಸ್ ಬಿಐ ಹೇಳಿದೆ. ಜತೆಗೆ ದೀರ್ಘ ಕಾಲದ ಠೇವಣಿಗಳ ಗರಿಷ್ಠ ಮಿತಿಯನ್ನು 5ರಿಂದ ಮೂರು ವರ್ಷಕ್ಕೆ ಇಳಿಸುವಂತೆಯೂ ವರದಿ ಹೇಳಿದೆ.

ಇವರೇ ಕೇಂದ್ರ ಬಜೆಟ್ ತಯಾರಿಸಿದ ಅಧಿಕಾರಿಗಳುಇವರೇ ಕೇಂದ್ರ ಬಜೆಟ್ ತಯಾರಿಸಿದ ಅಧಿಕಾರಿಗಳು

ಬಜೆಟ್ ನಲ್ಲಿ ಕೃಷಿ, ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆ, ಮೂಲ ಸೌಕರ್ಯ ಮತ್ತು ಮನೆ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಬ್ಯಾಂಕ್ ಹೇಳಿದೆ. ಇನ್ನು ಮಧ್ಯಾಹ್ನದ ಬಿಸಿಯೂಟದ ಜತೆ ಹಾಲು ನೀಡುವುದರಿಂದ 1.6 ಕೋಟಿ ಜನರಿಗೆ ಉದ್ಯೋಗ ದೊರಯಲಿದೆ ಎಂದು ಬ್ಯಾಂಕ್ ಪ್ರತಿಪಾದಿಸಿದೆ.

ಸರಕಾರ ನಿಗದಿಪಡಿಸಿದ ಮಧ್ಯಮ ಮತ್ತು ದೀರ್ಘ ಕಾಲದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಈ ವರದಿ ಸಿದ್ದಪಡಿಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೊಂಡಿದೆ.

English summary
The income tax exemption limit needs to be raised by Rs 50,000 to Rs 3 lakh, a State Bank of India (SBI) report said on Monday. Bank sadi that this move will benefit around 75 lakh people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X