ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 01: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2017-18ನೇ ಸಾಲಿನ ಪ್ರಧಾನ ಆಯವ್ಯಯ ಪತ್ರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ (ಫೆಬ್ರವರಿ 01) ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಜೇಟ್ಲಿ ಹೇಳಿದ ಆದಾಯ ತೆರಿಗೆ ಲೆಕ್ಕಾಚಾರದ ಸಂಫೂರ್ಣ ವಿವರ ಇಲ್ಲಿದೆ.[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಇತ್ತು. ಆದರೆ, ಮನೆ ಬಾಡಿಗೆ ಭತ್ಯೆ ಮಿತಿ ಏರಿಕೆ ಮಾತ್ರ ಹೆಚ್ಚಳ ಮಾಡಲಾಗಿದೆ. ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಜಾರಿಗೊಳಿಸಲಿದೆ. ಈ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಬದಲಾಯಿಸಿಲ್ಲ. ತೆರಿಗೆ ಪಾವತಿಯಲ್ಲಿ ಮಾತ್ರ ಬದಲಾವಣೆಯಾಗಿದೆ.[ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ]

* 2.5 ಲಕ್ಷ ರು ತನಕ ತೆರಿಗೆ ಪಾವತಿಸಬೇಕಾಗಿಲ್ಲ.

* 2.5 ಲಕ್ಷ ರು ನಿಂದ 5 ಲಕ್ಷ ರು ತನಕ ಆದಾಯ ಹೊಂದಿರುವವರ ತೆರಿಗೆ ಶೇ 10 ರಿಂದ ಶೇ 5ಕ್ಕೆ ಇಳಿಕೆ.[ಬಜೆಟ್ 2017: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕಾಚಾರ]
* 50 ಲಕ್ಷ ದಿಂದ 1 ಕೋಟಿ ರು ವಾರ್ಷಿಕ ಆದಾಯ ಇರುವವರಿಗೆ ಶೇ10 ರಷ್ಟು ಸರ್ ಚಾರ್ಜ್

* ಕಡಿಮೆ ಆದಾಯ ಗಳಿಸುವ ಉದ್ಯೋಗಿಗಳ ವೈಯಕ್ತಿಕ ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ ಕಂಡು ಬಂದಿದೆ. ವಾರ್ಷಿಕವಾಗಿ 5 ಲಕ್ಷ ಆದಾಯ(Taxable Income) ಹೊಂದಿರುವವರಿಗೆ ಈ ಮೊತ್ತ 2,000 ರು ನಿಂದ 5,000 ರು ಗೆ ಏರಿಸಲಾಗಿದೆ.[ಒಂದಷ್ಟು ಹೊಸ ಘೋಷಣೆ, ಹಳೆ ಯೋಜನೆಗಳ ಮುಂದುವರಿಕೆ; ಓಡದ ಜೇಟ್ಲಿ ರೈಲು]

* ಮನೆ ಬಾಡಿಗೆ ಭತ್ಯೆ ಮಿತಿ ಹೆಚ್ಚಳ: HRA ದರ 24,000 ರು ನಿಂದ 60,000 ರು ಗೆ ಏರಿಸಲಾಗಿದೆ.

* 1 ಕೋಟಿ ರು ಅಧಿಕ ಸೂಪರ್ ರಿಚ್ ಗ್ರಾಹಕರಿಗೆ ಶೇ 15ರಷ್ಟು ಸರ್ಚ್ ಚಾರ್ಜ್ ಏರಿಕೆ.[ಬಜೆಟ್ 2017ರ ಪ್ರಮುಖ ಘೋಷಣೆಗಳು]

Income Tax Rates For Financial Year (FY) 2017-18 And Assessment Year (AY) 2016-17

ಆರ್ಥಿಕ ವರ್ಷ: ಏಪ್ರಿಲ್ 01ರಿಂದ ಮಾರ್ಚ್ 31ರ ಅವಧಿ. [ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]
ತೆರಿಗೆ ಪಾವತಿ ವರ್ಷ: ಒಂದು ಆರ್ಥಿಕ ವರ್ಷ ಅವಧಿಯಲ್ಲಿ ತೆರಿಗೆ ಪಾವತಿಗೆ ಒಳಪಡುವ ಕಾಲ (assessment year)[ಅಪನಗದೀಕರಣ ಪರಿಣಾಮ ಜಿಡಿಪಿ ಪಾರದರ್ಶಕ, ದೈತ್ಯ: ಜೇಟ್ಲಿ]

ಉದಾಹರಣೆ: 5 ಲಕ್ಷ ರು ಆದಾಯವಿದ್ದವರಿಗೆ ಏಪ್ರಿಲ್ 2017 ರಿಂದ ಮಾರ್ಚ್ 31, 2018ರ ತನಕ ತೆರಿಗೆ ಪಾವತಿ ವರ್ಷವಾಗಿದೆ. ಜುಲೈ 31, 2018 ರ ತನಕ ಆದಾಯ ತೆರಿಗೆ ಪಾವತಿಗೆ ಅವಕಾಶವಿರುತ್ತದೆ. 2017-18 ರ assessment year ಇದಾಗಿರುತ್ತದೆ. [ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]

ತೆರಿಗೆದಾರರು ಹಾಗೂ ಮಹಿಳೆಯರು
Income Tax Slab (in Rs.) Tax Slab
0 to Rs 2,50,000 No tax
2,50,001 to 5,00,000 5%
5,00,001 to 10,00,000 20%
Above 10,00,000 30%

________________________________

ಹಿರಿಯ ನಾಗರಿಕರು (60 ವರ್ಷದಿಂದ 80 ವರ್ಷ ತನಕ)
Income Tax Slab (in Rs.) Tax Slab
0 to Rs 3,00,000 No tax
3,00,001 to 5,00,000 10%
5,00,001 to 10,00,000 20%
Above 10,00,000 30%

__________________________________________

ಹಿರಿಯ ನಾಗರಿಕರು (80 ವರ್ಷ ಅದಕ್ಕಿಂತ ಹೆಚ್ಚು)
Income Tax Slab (in Rs.) Tax Slab
0 to Rs 5,00,000 No tax
5,00,001 to 10,00,000 20%
Above 10,00,000 30%

ತೆರಿಗೆ ದರವು ಸರ್ ಚಾರ್ಜ್, ಎಜುಕೇಷನ್ ಸೆಸ್, ಸೆಕಂಡರಿ ಹಾಗೂ ಉನ್ನತ ಶಿಕ್ಷಣ ಸೆಸ್ ನಿಂದ ಹೊರತುಪಡಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Finance Minister Arun Jaitley presented Union Budget 2016 on February 01, 2017. There were no changes in the income tax slabs for financial year 2017-18 and assessment year 2016-17.
Please Wait while comments are loading...