ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವೇ ಗಂಟೆಯಲ್ಲಿ Zoom ಆ್ಯಪ್ ಸಿಇಒ ಸಂಪತ್ತು 29,000 ಕೋಟಿ ರೂಪಾಯಿ ಏರಿಕೆ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 01: ಕೆಲವೇ ಗಂಟೆಗಳಲ್ಲಿ, ಜ್ಹೂಮ್ ವೀಡಿಯೋ ಕಮ್ಯುನಿಕೇಷನ್ಸ್ ಇಂಕ್. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎರಿಕ್ ಯುವಾನ್ 4.2 ಬಿಲಿಯನ್ ಡಾಲರ್ ಶ್ರೀಮಂತರಾಗಿದ್ದಾರೆ.

ಕೋವಿಡ್-19 ಸಾಂಕ್ರಾಂಮಿಕದ ನಡುವೆ Zoom ಆ್ಯಪ್ ಬಳಕೆದಾರರ ಸಂಖ್ಯೆಯು ಹೆಚ್ಚಾಗಿದ್ದು, ವರ್ಚುವಲ್-ಮೀಟಿಂಗ್ ಕಂಪನಿಯ ಷೇರುಗಳು ಅಮೆರಿಕಾದ ವಹಿವಾಟಿನಲ್ಲಿ ಶೇ 26 ರಷ್ಟು ಏರಿಕೆಯಾಗಿ 410 ಡಾಲರ್‌ಗೆ ತಲುಪಿದೆ. ಅಲ್ಲದೆ ಕಂಪನಿಯ ತ್ರೈಮಾಸಿಕ ಆದಾಯದಲ್ಲೂ ಏರಿಕೆಯಾಗಿದೆ.

ಜೆಫ್ ಬೇಜೋಸ್ ಸಂಪತ್ತು ಈಗ 200 ಬಿಲಿಯನ್ ಡಾಲರ್: ಈ ಸಾಧನೆ ಮಾಡಿದ ವಿಶ್ವದ ಮೊದಲಿಗಜೆಫ್ ಬೇಜೋಸ್ ಸಂಪತ್ತು ಈಗ 200 ಬಿಲಿಯನ್ ಡಾಲರ್: ಈ ಸಾಧನೆ ಮಾಡಿದ ವಿಶ್ವದ ಮೊದಲಿಗ

ಜ್ಹೂಮ್ ವೀಡಿಯೋ ಕಮ್ಯುನಿಕೇಷನ್ಸ್ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಎರಿಕ್ ಯುವಾನ್ ಕಂಪನಿಯಲ್ಲಿ ಶೇಕಡಾ 22ರಷ್ಟು ಪಾಲನ್ನು ಹೊಂದಿದ್ದು, ಕೆಲವೇ ಗಂಟೆಯಲ್ಲಿ ಅವರ ಸಂಪತ್ತು 4 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 29,000 ಕೋಟಿ ರೂಪಾಯಿ) ಹೆಚ್ಚಾಗಿದೆ. ಷೇರು ಮೌಲ್ಯವು ಹೀಗೆ ಹೆಚ್ಚಾಗುತ್ತ ಹೋದರೆ ಯುವಾನ್ ಅವರ ಭವಿಷ್ಯದ ಸಂಪತ್ತು 20 ಬಿಲಿಯನ್ ಡಾಲರ್ ಮೀರುತ್ತದೆ.

In Just A Few Hours, Zoom CEO Eric Yuan Became $4 Billion Richer

ಜುಲೈ 31 ರವರೆಗಿನ ಮೂರು ತಿಂಗಳಲ್ಲಿ ಮಾರಾಟವು ಶೇಕಡಾ 355 ರಷ್ಟು ಏರಿಕೆಯಾಗಿ 663.5 ಮಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಸಾಫ್ಟ್‌ವೇರ್ ತಯಾರಕ ಸೋಮವಾರ ವರದಿ ಮಾಡಿದೆ . ಜನವರಿಯಲ್ಲಿ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಮಾರಾಟವು 2.39 ಬಿಲಿಯನ್ ಡಾಲರ್ ಆಗಲಿದೆ ಎಂದು ಜ್ಹೂಮ್ ಹೇಳಿದೆ. ಅಂದರೆ ಆದಾಯವು ಕೇವಲ ಒಂದು ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ.

ಸದ್ಯ 11.2 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಸಂಪತ್ತನ್ನು ಹೊಂದಿರುವ ಯುವಾನ್‌ ಒಂದೆಡೆಯಾದರೆ, ಅಮೆಜಾನ್.ಕಾಮ್ ಇಂಕ್ ನ ಸಿಇಒ ಜೆಫ್ ಬೆಜೋಸ್ ಸಂಪತ್ತು ಜುಲೈನಲ್ಲಿ ಒಂದೇ ದಿನದಲ್ಲಿ 13 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್‌ ಕಳೆದ ತಿಂಗಳು 24 ಗಂಟೆಗಳಲ್ಲಿ 8 ಬಿಲಿಯನ್ ಡಾಲರ್ ಸಂಪತ್ತನ್ನ ಸೇರಿಸಿದ್ದಾರೆ.

ಕಳೆದ ವಾರವಷ್ಟೇ ಅಮೆಜಾನ್ ಸಿಇಒ ಜೆಫ್ ಬೇಜೋಸ್ 200 ಬಿಲಿಯನ್ ಡಾಲರ್ ತಲುಪಿದ ಮೊದಲ ವ್ಯಕ್ತಿ ಎನ್ನಿಸಿಕೊಂಡರೆ, ಎಲೋನ್ ಮಸ್ಕ್‌ 100 ಬಿಲಿಯನ್ ಡಾಲರ್ ದಾಟಿದ್ದಾರೆ.

English summary
In just a few hours, Zoom Video Communications Inc. Chief Executive Officer Eric Yuan got $4.2 billion richer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X