ಮಾರ್ಗಸೂಚಿ ದರ ಏರಿಕೆಯಿಂದ ಖರೀದಿದಾರರಿಗೆ ಹೊರೆ

ಬೆಂಗಳೂರು, ನವೆಂಬರ್ 25: ಮಾರ್ಗಸೂಚಿ ದರದಲ್ಲಿ ಮಾಡಲಾಗಿರುವ ಹೆಚ್ಚಳದಿಂದಾಗಿ ಆಸ್ತಿಯ ಒಟ್ಟಾರೆ ವೆಚ್ಚ ಹೆಚ್ಚಲಿದ್ದು ಇದು ಖರೀದಿದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಬ್ರಿಗೇಡ್ ಗ್ರೂಪ್ ನ ಸಿಎಂಡಿ ಎಂ.ಆರ್.ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಅನೇಕ ನಗರಗಳಲ್ಲಿ ಕಳೆದ ವರ್ಷದಿಂದೀಚೆಗೆ ರಿಯಲ್ ಎಸ್ಟೇಟ್ ಮಾರುಕಟ್ಟೆಯು ನಿಷ್ಕ್ರಿಯವಾಗಿದೆ. ಆದರೆ ಅದೃಷ್ಟವಶಾತ್ ಬೆಂಗಳೂರು ಈ ಟ್ರೆಂಡ್ ನಿಂದ ಪ್ರತ್ಯೇಕವಾಗುಳಿದಿತ್ತು. ಆದರೆ ರಾಜ್ಯ ಸರ್ಕಾರದ ಈ ಕ್ರಮದ ಬಳಿಕ ನಾಗರಿಕರ ಪ್ರಾಥಮಿಕ ಸಾಮಾಜಿಕ ಅಗತ್ಯವಾಗಿರುವ ವಸತಿ ಕ್ಷೇತ್ರವು ಹೊರೆಯ ಪರಿಣಾಮ ಎದುರಿಸಲಿದೆ ಎಂದು ಬೊಟ್ಟು ಮಾಡಿದರು.

ಖರೀದಿದಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕದ ಕುರಿತು ಮರು ಚಿಂತನೆ ನಡೆಸಬೇಕು ಮತ್ತು ಮಾರುಕಟ್ಟೆಯ ಭಾವನೆಗೆ ಪುನಶ್ಚೇತನ ನೀಡಲು ನೆರವಾಗಬೇಕು ಎಂದು ಅವರು ಮನವಿ ಮಾಡಿದರು.

Impact of increase in guidance value rates

ಈ ಅನಿರೀಕ್ಷಿತ ಏರಿಕೆಯು ಸಾರ್ವಜನಿಕ ಹೂಡಿಕೆದಾರರಲ್ಲಿ ದಿಗಿಲು ಮೂಡಿಸಲಿದೆ. ಒಂದೋ ಅವರು ತುರ್ತು ಖರೀದಿಗಿಳಿಯುತ್ತಾರೆ ಅಥವಾ ತಮ್ಮ ನಿರ್ಧಾರವನ್ನು ಮುಂದೂಡುತ್ತಾರೆ. ಎರಡೂ ಕೂಡಾ ಖರೀದಿದಾರ ಹಾಗೂ ಮಾರಾಟಗಾರನಿಗೆ ಉತ್ತಮವಲ್ಲ. ಮಾರ್ಗಸೂಚಿ ದರವು ಖರೀದಿದಾರನಿಗೆ ಮಾರುಕಟ್ಟೆಯ ಪರಿಸ್ಥಿತಿಯನ್ನು ಅರಿಯುವ ಮಾನದಂಡದಂತಿರಬೇಕು.

ಸರ್ಕಾರವು ಇದನ್ನು ಜನ ಸಾಮಾನ್ಯರಿಗೆ ಸೇವೆಯ ರೂಪದಲ್ಲಿ ಒಳಸುರಿ ನೀಡಬಹುದು ಮತ್ತು ನೋಂದಣಿ ಜೊತೆಗೆ ಥಳಕು ಹಾಕುವುದನ್ನು ತಪ್ಪಿಸಬಹುದು ಎಂದು ಕ್ರೆಡಾಯ್ ಬೆಂಗಳೂರಿನ ಕಾರ್ಯದರ್ಶಿ ಶ್ರೀ ಸುರೇಶ್ ಹರಿ ಸಲಹೆ ನೀಡಿದರು. (ಒನ್ಇಂಡಿಯಾ ಬಿಜಿನೆಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+