ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಮಾಡಿಲ್ಲವೇ? ಈ ಸುದ್ದಿ ನಿಮಗಾಗಿ

Subscribe to Oneindia Kannada

ಬೆ೦ಗಳೂರು, ಜುಲೈ, 28: ಆದಾಯ ತೆರಿಗೆ ಪಾವತಿಗೆ ಕೊನೆ ದಿನ (ಜುಲೈ 31) ಸಮೀಪಿಸುತ್ತಿದೆ. ನಿಮ್ಮ ತೆರಿಗೆ ಪಾವತಿಯನ್ನು ಇನ್ನು ಸಲ್ಲಿಕೆ ಮಾಡಿಲ್ಲವೇ? ಆನ್ ಲೈನ್ ನಲ್ಲಿ ಸಲ್ಲಿಕೆ ಮಾಡಲು ಸಮಸ್ಯೆ ಆಗುತ್ತಿದೆಯೇ? ಅದಕ್ಕೆಲ್ಲ ಪರಿಹಾರ ಇಲ್ಲಿದೆ.

ತೆರಿಗೆ ಪಾವತಿದಾರರಿಗೆ ನೆರವಾಗಲು ಮುಂದಾಗಿರುವ ಇಲಾಖೆ ಬೆಂಗಳೂರಿನ ಅರಮನೆ ಮ್ಯೆದಾನದಲ್ಲಿ ವಿಶೇಷ ಕೌಂಟರ್ ಗಳನ್ನು ತೆರೆಯಲಿದೆ. ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ 80 ವಿಶೇಷ ಕೌ೦ಟರ್ ತೆರೆಯಲಾಗಿದ್ದು ನಾಗರಿಕರು ಉಪಯೋಗ ಪಡೆದುಕೊಳ್ಳಬಹುದು.[ತೆರಿಗೆ ಟೋಪಿ ತಪ್ಪಿಸಲು ಇಲಾಖೆ ಮಾಸ್ಟರ್ ಪ್ಲ್ಯಾನ್]

I-T department sets up counters to file tax returns, Bengaluru

ತೆರಿಗೆ ಬಾಕಿ ಉಳಿಸಿಕೊ೦ಡಿರುವ ವೇತನದಾರರು ಮತ್ತು ಪಿ೦ಚಣಿದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಹಣ ಪಾವತಿಗೆ ಬೇಕಾದಂತೆ ಎಟಿಎಂ ಮತ್ತು ಬ್ಯಾಂಕ್ ಸೇವೆಯನ್ನು ಸ್ಥಳದಲ್ಲೇ ಒದಗಿಸಲಾಗಿದೆ.[ತೆರಿಗೆ ವಂಚಕರ ಪ್ಯಾನ್, ಎಲ್ ಪಿಜಿ ಸಬ್ಸಿಡಿ ಕಡಿತ]

ಸುಲಲಿತವಾಗಿ ಸಮಗ್ರ ಮಾಹಿತಿ ನೀಡಲು ಹೆಲ್ಪ್ ಡೆಸ್ಕ್ ಗಳನ್ನು ತೆರೆಯಲಾಗಿದ್ದು ತೆರಿಗೆ ಪಾವತಿ ಮಾಡಿ ಮುಗಿಸಿ ದಂಡದಿಂದ ತಪ್ಪಿಸಿಕೊಳ್ಳಬಹುದು. ಕೌಂಟರ್ ಗಳು ಜುಲೈ 29 ರಿಂದ 31 ರವರೆಗೆ ಮೂರು ದಿನ ಕಾಲ ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Since the last date for filing income tax returns of salaried employees and pensioners is July 31, the Income Tax Department is setting up special counters at Gayathri Vihar, Palace Grounds, Bengaluru, from July 29 to 31.
Please Wait while comments are loading...