ಬಾಳೆಹಣ್ಣು vs ಖರ್ಜೂರ: ಬೇಸಿಗೆಯಲ್ಲಿ ಯಾವುದು ನಿಮ್ಮ ದೇಹಕ್ಕೆ ಹೆಚ್ಚು ಉತ್ತಮ?
ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಯಾವ ಹಣ್ಣುಗಳನ್ನು ಸೇವಿಸದರೆ ಅದರ ನೇರ ಪರಿಣಾಮ ನಮ್ಮ ದೇಹದ ಮೇಲೆ ಬೀರುತ್ತದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಬಾಳೆಹಣ್ಣು ಮತ್ತು ಖರ್ಜೂರ ಎರಡೂ ಪೌಷ್ಟಿಕ ಹಣ್ಣುಗಳಾಗಿದ್ದರೂ ಬೇಸಿಗೆಕಾಲದಲ್ಲಿ ಅವುಗಳ ಪರಿಣಾಮ ಸ್ವಲ್ಪ ವಿಭಿನ್ನವಾಗಿರುತ್ತದೆ.
ಬೇಸಿಗೆಯಲ್ಲಿ ಶಕ್ತಿ ಮತ್ತು ಹೈಡ್ರೇಷನ್
ಬಾಳೆಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚು ಇರುವುದರಿಂದ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಇದು ಬೇಸಿಗೆಯಲ್ಲಿ ಉತ್ತಮ ಆಯ್ಕೆ. ಖರ್ಜೂರಗಳು ಹೆಚ್ಚು ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಹೊಂದಿರುವುದರಿಂದ ತಕ್ಷಣ ಶಕ್ತಿ ನೀಡುತ್ತವೆ, ಆದರೆ ದೇಹವನ್ನು ತಂಪಾಗಿಡುವಲ್ಲಿ ಅಷ್ಟಾಗಿ ಸಹಾಯಕವಾಗುವುದಿಲ್ಲ.

ತಕ್ಷಣದ ಶಕ್ತಿ vs ನಿಧಾನ ಶಕ್ತಿ
ಬೇಸಿಗೆಯಲ್ಲಿ ವಿಪರೀತ ಬೆವರು ಮತ್ತು ಬಿಸಿಲಿನಿಂದ ಆಯಾಸವಾಗುವುದು ಸಹಜ. ಈ ಸಮಯದಲ್ಲಿ ದೇಹಕ್ಕೆ ತಕ್ಷಣ ಶಕ್ತಿ ಬೇಕಾದರೆ ಖರ್ಜೂರಗಳು ಉಪಯುಕ್ತ. ಆದರೆ ದಿನವಿಡೀ ದೇಹಕ್ಕೆ ಸಮತೋಲನ ಶಕ್ತಿ ಬೇಕಾದರೆ ಬಾಳೆಹಣ್ಣು ಉತ್ತಮ.
ಜೀರ್ಣಕ್ರಿಯೆ ಮತ್ತು ಬೇಸಿಗೆ ಸಮಸ್ಯೆಗಳು
ಬೇಸಿಗೆಯಲ್ಲಿ ಜೀರ್ಣಕ್ರಿಯೆ ನಿಧಾನವಾಗುವ ಸಾಧ್ಯತೆ ಇರುತ್ತದೆ. ಬಾಳೆಹಣ್ಣು ಹೊಟ್ಟೆಗೆ ಹಗುರವಾಗಿದ್ದು ಜೀರ್ಣ ಕ್ರಿಯೆಗೆ ತುಂಬಾ ಸಹಾಯಕವಾಗಿರುತ್ತದೆ. ಖರ್ಜೂರದಲ್ಲಿ ನಾರಿನಂಶ ಹೊಂದಿದ್ದರೂ ಹೆಚ್ಚು ಸೇವಿಸಿದರೆ ಉಷ್ಣತೆ ಹೆಚ್ಚಿಸಬಹುದು.
ತೂಕ ಮತ್ತು ದೇಹದ ಉಷ್ಣತೆ
ಬೇಸಿಗೆಯಲ್ಲಿ ಹೆಚ್ಚು ಕ್ಯಾಲೊರಿಯ ಆಹಾರಗಳನ್ನು ಸೇವಿಸದೆ ಬಾಳೆಹಣ್ಣುಗಳು ಕಡಿಮೆ ಕ್ಯಾಲೊರಿಯುಳ್ಳವು. ಖರ್ಜೂರಗಳು ಹೆಚ್ಚು ಕ್ಯಾಲೊರಿಯುಳ್ಳವು, ಆದ್ದರಿಂದ ಮಿತವಾಗಿ ಮಾತ್ರ ಸೇವಿಸಬೇಕು.
ಬ್ಲಡ್ ಶುಗರ್ ನಿಯಂತ್ರಣ
ಖರ್ಜೂರಗಳಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚು ಇರುವುದರಿಂದ ಅವನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಏರಬಹುದು. ಆದ್ದರಿಂದ ಬೇಸಿಗೆಯಲ್ಲಿ ಖರ್ಜೂರಗಳನ್ನು ಮಿತವಾಗಿ ಸೇವಿಸುವುದು ಉತ್ತಮ. ಬಾಳೆಹಣ್ಣುಗಳಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುತ್ತದೆ ಆದ್ದರಿಂದ ಮಿತ ಪ್ರಮಾಣದಲ್ಲಿ ಸೇವಿಸಿದರೆ ಶುಗರ್ ನಿಯಂತ್ರಣಕ್ಕೆ ಸಹಾಯಕವಾಗಬಹುದು.
ಬೇಸಿಗೆಯಲ್ಲಿ ಕಾಲದಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?
ಬೇಸಿಗೆಯಲ್ಲಿ ದೈನಂದಿನ ಸೇವನೆಗೆ ಬಾಳೆಹಣ್ಣು ಉತ್ತಮ ಆಯ್ಕೆ. ಇದು ದೇಹವನ್ನು ತಂಪಾಗಿಡುತ್ತದೆ ಮತ್ತು ಹೈಡ್ರೇಷನ್ ಕಾಪಾಡುತ್ತದೆ. ಖರ್ಜೂರಗಳನ್ನು ಮಾತ್ರ ಮಿತವಾಗಿ, ವಿಶೇಷವಾಗಿ ತಕ್ಷಣ ಶಕ್ತಿ ಬೇಕಾದಾಗ ಮಾತ್ರ ಸೇವಿಸುವುದು ಉತ್ತಮ. ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಬಾಳೆಹಣ್ಣು ಹೆಚ್ಚು ಸೂಕ್ತ. ಖರ್ಜೂರಗಳನ್ನು ಮಿತಿಯಲ್ಲಿ ಸೇವಿಸುವುದು ಒಳ್ಳೆಯದು.














Click it and Unblock the Notifications