Vijay: ವಿಜಯ್ ರಾಜಕೀಯ ದರ್ಬಾರ್ ಸಂಭ್ರಮದ ನಡುವೆ ಕುಟುಂಬದಲ್ಲಿ ಮಹಾ ಬಿರುಕು, ಪತ್ನಿ - ಮಕ್ಕಳು ದೂರ.. ದೂರ
Vijay: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿರುವ ಸೂಪರ್ ಸ್ಟಾರ್ ವಿಜಯ್ ಅವರ ರಾಜಕೀಯ ಜೀವನ ಪ್ರಜ್ವಲವಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನವು ಹಳ್ಳ ಹಿಡಿದಿದೆ. ದಕ್ಷಿಣ ಭಾರತೀಯ ಸಿನಿಮಾ ರಂಗದ ಸೂಪರ್‌ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ದಳಪತಿ ವಿಜಯ್ ಅವರ ಪಕ್ಷವಾದ ತಮಿಳು ವೆಟ್ರಿ ಕಳಗಂ (ಟಿವಿಕೆ) ವಿಧಾನಸಭಾ ಚುನಾವಣೆಯಲ್ಲಿ ಯಾರು ನಿರೀಕ್ಷೆಯೂ ಮಾಡದ ಸಾಧನೆ ಮಾಡಿದೆ. ವಿಜಯ್ ಅವರ ಪಕ್ಷವು 234 ಸ್ಥಾನಗಳ ವಿಧಾನಸಭೆಯಲ್ಲಿ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ವಿಜಯ್ ಅವರಿಗೆ ಕಾಂಗ್ರೆಸ್ ಪಕ್ಷವು ಬೆಂಬಲ ಸೂಚಿಸುವುದಾಗಿ ಹೇಳಿದೆ. ಆದರೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದರೂ ಇನ್ನುಳಿದ ಪಕ್ಷಗಳ ಬೆಂಬಲ ಅವಶ್ಯಕತೆ ಇದೆ. ಆದರೆ, ವಿಜಯ್ ಬಾಳಿನಲ್ಲಿ ಎಲ್ಲವೂ ಸರಿ ಇಲ್ಲ. ವಿಜಯ್ ತಮಿಳುನಾಡು ವಿಧಾನಸಭೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ನಟಿ ತ್ರಿಷಾ ಅವರ ಮನೆಗೆ ಬಂದು ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ, ವಿಜಯ್ ಅವರು ತಮ್ಮ ಪತ್ನಿ ಮತ್ತು ಮಕ್ಕಳಿಂದ ದೂರವಾಗಿದ್ದಾರೆ.

ವಿಜಯೋತ್ಸವದ ಆಚರಣೆಗಳಲ್ಲಿ ವಿಜಯ್ ಅವರು ಹೊರಗಿನವರ ಜೊತೆಗಿದ್ದರು, ಆದರೆ ಅವರ ಪ್ರೀತಿಪಾತ್ರರಿಂದ ದೂರ ಉಳಿಯುವಂತಾಗಿದೆ. ಮೇ 4 ರಂದು ದಳಪತಿ ವಿಜಯ್‌ಗೆ ಎರಡು ಪಟ್ಟು ಸಂತೋಷವಾದ ದಿನ. ಒಂದೆಡೆ, ಅವರ ಪಕ್ಷ ಅಧಿಕಾರದ ಏಣಿಯನ್ನು ಹತ್ತುತ್ತಿದ್ದರೆ, ಮತ್ತೊಂದೆಡೆ, ಅದು ಅವರ ಆಪ್ತ ಸ್ನೇಹಿತೆ ನಟಿ ತ್ರಿಷಾ ಕೃಷ್ಣನ್ ಅವರು 43ನೇ ಹುಟ್ಟುಹಬ್ಬದ ಸಂಭ್ರಮವಾಗಿತ್ತು. ಚುನಾವಣೆ ಫಲಿತಾಂಶ ಪ್ರಕಟವಾಗುವ ದಿನ ತ್ರಿಶಾ ಅವರು ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ದರು. ನಂತರ ನೇರವಾಗಿ ವಿಜಯ್ ಅವರ ಮನೆಗೆ ಹೋದರು. ಇಬ್ಬರೂ ಒಟ್ಟಿಗೆ ತಮ್ಮ ವಿಜಯವನ್ನು ಸಂಭ್ರಮಿಸಿದರು.
ಆದಾಗ್ಯೂ, ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಅವರ ಇಬ್ಬರು ಮಕ್ಕಳು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ವಿಜಯ್ ಅವರ ಗೆಲುವಿನ ಬಗ್ಗೆ ಅವರ ಪತ್ನಿ ಹಾಗೂ ಮಕ್ಕಳು ಏನೂ ಹೇಳಲಿಲ್ಲ. ವಿಜಯ್ ಗೆಲುವಿನ ನಂತರ ಅವರ ತಂದೆ - ತಾಯಿಯನ್ನು ಭೇಟಿ ಮಾಡಿದರು. ಅವರೊಂದಿಗೆ ಮನೆಯ ಬಾಲ್ಕನಿಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು. ಆದಾಗ್ಯೂ, ಅವರ ಪತ್ನಿ ಮತ್ತು ಮಕ್ಕಳ ಮೌನವು ಅನೇಕ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಮಗ ಜೇಸನ್ ಸಂಜಯ್ ಮೌನ
ವಿಜಯ್ ಅವರ 26 ವರ್ಷದ ಮಗ ಜೇಸನ್ ಸಂಜಯ್ ತನ್ನ ತಂದೆಯ ಐತಿಹಾಸಿಕ ಸಾಧನೆಯ ಬಗ್ಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಜೇಸನ್ ಸಂಪೂರ್ಣವಾಗಿ ಮೌನವಾಗಿದ್ದಾರೆ. ಅವರು ತಮ್ಮ ತಂದೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ. ಅವರ ಹೆಸರಿನಿಂದ ವಿಜಯ್ ಎಂಬ ಉಪನಾಮವನ್ನು ತೆಗೆದುಹಾಕಲು ಚಿಂತಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಜೇಸನ್ ಸ್ವತಃ ಚಲನಚಿತ್ರ ನಿರ್ದೇಶನದಲ್ಲಿ ತೊಡಗುತ್ತಿದ್ದಾರೆ. ಅವರ ಕಿರುಚಿತ್ರ ಸಿಗ್ಮಾ ಭಾರೀ ವೈರಲ್ ಆಗಿತ್ತು.
ತನ್ನ ತಂದೆಯ ಅಕ್ರಮ ಸಂಬಂಧ ಅಥವಾ ವಿವಾಹೇತರ ಸಂಬಂಧ ಮತ್ತು ತಾಯಿಯನ್ನು ನಡೆಸಿಕೊಂಡ ರೀತಿಯಿಂದ ಮಗ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ಮಗಳು ದಿವ್ಯಾ ಸಶಾ ಸಹ ತಂದೆಯಿಂದ ದೂರವಾಗಿದ್ದಾರೆ
ಮಗ ಮಾತ್ರವಲ್ಲ, ವಿಜಯ್ ಅವರ ಮಗಳು ದಿವ್ಯಾ ಸಶಾ ಸಹ ವಿಜಯ್ ಅವರ ಗೆಲುವಿನ ಸಂಭ್ರಮದಿಂದ ದೂರವಾಗಿದ್ದಾರೆ. 2005ರಲ್ಲಿ ಜನಿಸಿದ ದಿವ್ಯಾ ಒಬ್ಬ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ್ತಿ. ಬಾಲ್ಯದಲ್ಲಿ ಥೇರಿ ಚಿತ್ರದಲ್ಲಿ ತನ್ನ ತಂದೆಯೊಂದಿಗೆ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು. ದಿವ್ಯಾ ಅವರು ಸೋಶಿಯಲ್ ಮೀಡಿಯಾದಿಂದ ದೂರವಿದ್ದಾರೆ. ತಮ್ಮ ತಂದೆಯ ಪ್ರಮುಖ ರಾಜಕೀಯ ಸಾಧನೆ ಬಗ್ಗೆ ಮಕ್ಕಳು ಮಾತನಾಡದೆ ಇರುವುದು ಅವರ ಕುಟುಂಬದಲ್ಲಿನ ಆಳವಾದ ಬಿರುಕಿನ ಸಂಕೇತವಾಗಿದೆ.
ದಾಂಪತ್ಯ ಜೀವನಕ್ಕೆ ಪತ್ನಿ ಸಂಗೀತಾ ವಿದಾಯ
ಇನ್ನು ಈಚೆಗೆ ವಿಜಯ್ ಸಂಗೀತ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 1999ರಲ್ಲಿ ವಿವಾಹವಾದ ಈ ದಂಪತಿ ಕಳೆದ ಎರಡು ವರ್ಷಗಳಿಂದ ದೂರವಿದ್ದರು. ಸಂಗೀತಾ ತಮ್ಮ ಆರೋಪಗಳಲ್ಲಿ ಮಾನಸಿಕ ಹಿಂಸೆ ಮತ್ತು ಅವಮಾನ ದಂತಹ ಕಠಿಣ ಪದಗಳನ್ನು ಬಳಸಿದ್ದಾರೆ. ಇತರ ನಟಿಯರು ತಮ್ಮ ಪತಿಯೊಂದಿಗೆ ರಜೆಯ ಫೋಟೋಗಳನ್ನು ಪೋಸ್ಟ್ ಮಾಡಿದಾಗ, ಅವರು ಅಸಹಾಯಕರಾದ್ದರು ಎಂದೂ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು.
ರಾಜಕೀಯ ಗ್ಲಾಮರ್‌ನಿಂದ ಕುಟುಂಬ ಸಂಬಂಧಕ್ಕೆ ಕುತ್ತು
ದಳಪತಿ ವಿಜಯ್ ಈಗ ತಮಿಳುನಾಡಿನಲ್ಲಿ ಪ್ರಮುಖ ರಾಜಕೀಯ ನಾಯಕ ಹಾಗೂ ಮುಂದಿನ ಮುಖ್ಯಮಂತ್ರಿ. ರಶ್ಮಿಕಾ ಮಂದಣ್ಣ, ನಯನತಾರಾ ಮತ್ತು ಇಡೀ ಚಲನಚಿತ್ರೋದ್ಯಮ ಅವರಿಗೆ ಅಭಿನಂದನೆ ಸಲ್ಲಿಸುತ್ತಿದೆ. ಆದರೆ ಕಟು ಸತ್ಯವೆಂದರೆ ವಿಜಯ್ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯಿಂದ ತಮ್ಮ ಸಂತೋಷದ ಅರಮನೆಯನ್ನು ನಿರ್ಮಿಸುವ ಅಡಿಪಾಯ ಅಲುಗಾಡಿದೆ. "ಲಿಯೋ" ಚಿತ್ರದಲ್ಲಿ 15 ವರ್ಷಗಳ ನಂತರ ತ್ರಿಷಾ ಮತ್ತು ವಿಜಯ್ ಅವರ ಪುನರ್‌ಮಿಲನವನ್ನು ಅಭಿಮಾನಿಗಳು ಇಷ್ಟಪಟ್ಟರು, ಆದರೆ ಅದು ಅವರ ಕುಟುಂಬದಲ್ಲಿ ದೊಡ್ಡ ಬಿರುಕಿಗೆ ಕಾರಣವಾಯಿತು. ಈ ಕಾರಣಗಳಿಗೆ ರಾಜಕೀಯವಾಗಿ ಗೆದ್ದ ವಿಜಯ್ ಅವರು ಕುಟುಂಬದ ವಿಚಾರದಲ್ಲಿ ಸೋತರೇ ಎಂಬ ಚರ್ಚೆ ಶುರುವಾಗಿದೆ.














Click it and Unblock the Notifications