ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಪ್ ರಿಪ್ಲೈ, ಉಲ್ಲೇಖ ಸಂದೇಶ ಸೌಲಭ್ಯ ಬಳಕೆ ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಜೂನ್ 13: ಫೇಸ್ ಬುಕ್ ಒಡೆತನದ ವಾಟ್ಸಪ್ ಸಂದೇಶ ವಾಹಕ ಹೊಸ ಸೌಲಭ್ಯವನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಸದ್ಯಕ್ಕೆ ಬೀಟಾ ಅವೃತ್ತಿ(2.16.118)ಯಲ್ಲಿದ್ದು, ಪರೀಕ್ಷೆ ನಡೆಸಲಾಗುತ್ತಿದೆ. ಈ ಸೌಲಭ್ಯದ ಮೂಲಕ ಹಳೆ ಸಂದೇಶಗಳನ್ನು ಉಲ್ಲೇಖಿಸಿ ಪ್ರತಿ ಉತ್ತರ ನೀಡಬಹುದಾಗಿದೆ.

ಈ ಹೊಸ ಸೌಲಭ್ಯ ವ್ಯಕ್ತಿಯಿಂದ ವ್ಯಕ್ತಿಗೆ ಕಳಿಸುವ ಸಂದೇಶ ಹಾಗೂ ಗುಂಪಿಗೆ ಕಳಿಸುವ ಸಂದೇಶ ಎರಡಕ್ಕೂ ಅನ್ವಯವಾಗಲಿದೆ.
ಸಾಮಾಜಿಕ ಜಾಲತಾಣ ವಾಟ್ಸ್ ಆಪ್​ನ ಬೀಟಾ ವರ್ಶಿನ್​ನಲ್ಲಿ ಬೇರೆಯವರು ಮಾಡಿರುವ ಕೋಟ್(ಹೇಳಿಕೆ) ನಿಮಗೆ ಇಷ್ಟವಾದಲ್ಲಿ ಅದನ್ನು ನಿಮ್ಮದೇ ಖಾತೆ ಮೂಲಕ ನಿಮ್ಮ ನೆಚ್ಚಿನ ಗ್ರೂಪ್ ಅಥವಾ ಸದಸ್ಯರಿಗೆ ಅಪ್​ಲೋಡ್ ಮಾಡುವುದು ಮತ್ತು ಅದಕ್ಕೆ ಮರುಉತ್ತರ ಕಳಿಸಬಹುದು.

How to use WhatsApp's message quotes feature

ಏನು ಪ್ರಯೋಜನ: ವಾಟ್ಸಪ್ ನಲ್ಲಿ ಇನ್ನು ಮುಂದೆ ಗ್ರೂಪ್ ಚಾಟಿಂಗ್ ಮತ್ತಷ್ಟು ಸುಲಭವಾಗಲಿದೆ. ಸ್ನೇಹಿತರು ಕಳುಹಿಸಿದ ಮೆಸೇಜಿಗೆ ಅಲ್ಲೇ ರಿಪ್ಲೈ ಮಾಡಬಹುದು. ಹಳೆ ಸಂದೇಶವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಬಹುದು. ಉದಾಹರಣೆ ನಿನ್ನೆ ದಿನ ನಿಮ್ಮ ಗೆಳಯನೊಬ್ಬ ನಿಮಗೆ ಶುಭ ಹಾರೈಸಿದ ಸಂದೇಶ ಬಂದಿರುತ್ತದೆ. ಆ ಸಂದೇಶವನ್ನು ನೀವು ಇತರರೊಡನೆ ಒಮ್ಮೆಗೆ ಹಂಚಿಕೊಳ್ಳಬಹುದು. ಈ ಮುಂಚೆ ಕಾಪಿ ಅಂಡ್ ಪೇಸ್ಟ್ ಸೌಲಭ್ಯ ಮಾತ್ರ ಇತ್ತು. ಈಗ ಸಂದೇಶ ಕಳಿಸಿದವರ ಐಡಿ ಸಮೇತ ಸಂದೇಶ ಕಳಿಸಬಹುದು.

ಈ ಸೌಲಭ್ಯ ದ ಜೊತೆಗೆ ಜಿಐಎಫ್ ವಾಲ್​ಪೇಪರ್​ಗಳು, ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಕೂಡಾ ವಾಟ್ಸಪ್ ಹೊರ ತರಲಿದೆ. ಈಗಾಗಳೇ ಪಿಡಿಎಫ್, Doc ಫೈಲ್ ..ಇತ್ಯಾದಿಗೆ ಹೊಂದಿಕೊಳ್ಳುತ್ತಿದೆ. ಎನ್ ಕ್ರಿಪ್ಷನ್ ಗಟ್ಟಿಗೊಳಿಸಿ ನಿಮ್ಮ ಸಂದೇಶಗಳ ಸುರಕ್ಷಿತೆ ನಮಗೆ ಮುಖ್ಯ ಎಂದು ವಾಟ್ಸಪ್ ಸಾರಿದೆ.

ಟೆಲಿಗ್ರಾಂ ಎಂಬ ವಾಟ್ಸಪ್ ನಂತೆ ಇರುವ ಚಾಟ್ ಸಾಫ್ಟ್ ವೇರ್ ನಲ್ಲಿ ಈಗಾಗಲೇ ಈ ರಿಪ್ಲೈ ಸೌಲಭ್ಯ ಇದೆ. ನಿಮಗೆ ಬಂದಿರುವ ಮಸೇಜಿಗೆ ಅಲ್ಲೇ ರಿಪ್ಲೈ ಮಾಡಲು ಸಾಧ್ಯವಾಗುವುದರಿಂದ ಮುಖ್ಯ ಪ್ರಯೋಜವೆಂದರೆ ಯಾರು ಯಾವ ವಿಷ್ಯಕ್ಕೆ ರಿಪ್ಲೈ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ವಾಟ್ಸಪ್ ಬೀಟಾ ಆವೃತ್ತಿಯನ್ನು ಪಡೆದು ಈ ಸೌಲಭ್ಯ ಪರೀಕ್ಷಿಸಬಹುದು. ಅಥವಾ ಬಳಕೆದಾರರಿಗೆ ಅಧಿಕೃತವಾಗಿ ಸೌಲಭ್ಯ ಹೊರ ಬರುವ ತನಕ ಕಾಯಬಹುದು. ಈ ಸೌಲಭ್ಯ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಬ್ಬರಿಗೂ ಸಿಗುತ್ತಿದೆ.

English summary
Facebook owned WhatsApp has rolled out a new feature for its Android beta testers that lets users quote a specific message and reply to it. The WhatsApp update is available for both person-to-person chat and groups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X