ಎಸ್‌ಬಿಐ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ಪಡೆಯೋದು ಹೇಗೆ?
ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸುತ್ತಿದೆ. ಡೋರ್ ಸ್ಟೆಪ್ ಬ್ಯಾಂಕಿಂಗ್ ಎಂಬ ವ್ಯವಸ್ಥೆಯನ್ನು ಹೊಸದಾಗಿ ಅಳವಡಿಸಿಕೊಳ್ಳುತ್ತಿದೆ. ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಕೊಂಡೊಯ್ಯುವ ಉದ್ದೇಶ ಹೊಂದಿದೆ.
ಕೋವಿಡ್ 19 ನಿರ್ಬಂಧ, ಮಾರ್ಗಸೂಚಿಗಳಿಂದ ಬ್ಯಾಂಕುಗಳಿಗೆ ತೆರಳಲು ಕಷ್ಟಪಡುವ ಗ್ರಾಹಕರಿಗೆ ಈ ಹೊಸ ವ್ಯವಸ್ಥೆಯಿಂದ ಅನುಕೂಲವಾಗಲಿದೆ, ಅದಷ್ಟು ಬೇಗ ಈಗ ಹೊಸ ಸೆಗೆ ನೋಂದಾಯಿಸಿಕೊಂಡು, ಸೇವೆ ಲಾಭ ಪಡೆಯಿರಿ ಎಂದು ಸಂಸ್ಥೆ ಟ್ವೀಟ್ ಮಾಡಿದೆ.
Your bank is now at your doorstep. Register for doorstep banking today!
— State Bank of India (@TheOfficialSBI) June 19, 2021
To know more: https://t.co/m4Od9LFR3G
Toll-Free no. 1800 1037 188 or 1800 1213 721#DoorstepBanking #DSB #Banking #StayAtHome #SBIAapkeSaath pic.twitter.com/Fr81GwcdL6
ನೋಂದಣಿ ಹೇಗೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಈ ಸೇವೆ ಪಡೆಯಲು ನೋಂದಣಿ ಮಾಡಿಕೊಳ್ಳುವುದು ಅಗತ್ಯವಾಗಿದ್ದು, 1800 1037 188 ಅಥವಾ 1800 1213 721 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು. ಅಥವಾ ಅಧಿಕೃತ ವೆಬ್ ತಾಣದ ಲಿಂಕ್ (https://bank.sbi/dsb) ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಿ.

ಈ ವ್ಯವಸ್ಥೆಯಲ್ಲಿ ಮೂರು ರೀತಿ ಸೇವೆ ಲಭ್ಯವಿದ್ದು, ಪಿಕ್ ಅಪ್ ಸೇವೆ, ಡೆಲಿವರಿ ಸೇವೆ ಹಾಗೂ ಇನ್ನಿತರ ಸೇವೆಗಳಿವೆ. ಪಿಕ್ ಅಪ್ ಸೇವೆಯಲ್ಲಿ ಚೆಕ್/ಡ್ರಾಫ್ಟ್/ಪೇ ಆರ್ಡರ್, ಹೊಸ ಚೆಕ್ ಬುಕ್ ಮನವಿ, ಐಟಿ ಚಲನ್ ಇನ್ನಿತರ ಸೇವೆಗಳು ಲಭ್ಯವಿರಲಿದೆ.
ಡೆಲಿವರಿ ಸೇವೆಯಲ್ಲಿ ಡ್ರಾಫ್ಟ್, ಪೇ ಆರ್ಡರ್, ಡೆಪಾಸಿಟ್ ರಸತಿ, ಖಾತೆ ಬ್ಯಾಲೆನ್ಸ್ ವಿವರ, ಟಿಡಿಎಸ್/ಫಾರ್ಮ್ 16 ಸರ್ಟಿಫಿಕೇಟ್, ಗಿಫ್ಟ್ ಕಾರ್ಡ್ ಪಡೆಯುವುದು ಮುಂತಾದವುಗಳು ಸೇರಿವೆ. ಇದಲ್ಲದೆ, ನಗದು ವಿಥ್ ಡ್ರಾ, ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಒದಗಿಸುವ ಸೇವೆಗಳಿವೆ.
ಇದಲ್ಲದೆ, ಎಸ್‌ಬಿಐ ಇತ್ತೀಚೆಗೆ ಹೊಸ ಮಾದರಿ ವೈಯಕ್ತಿಕ ಸಾಲ ಯೋಜನೆ ಪ್ರಕಟಿಸಿದೆ. ಕವಚ್ ವೈಯಕ್ತಿಕ ಸಾಲ ಯೋಜನೆಯು ಕೋವಿಡ್ 19 ಸೋಂಕಿತರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಕೋವಿಡ್ ಆರೈಕೆಗೆ ತಗುಲುವ ಖರ್ಚು ವೆಚ್ಚ ನಿಭಾಯಿಸಲು ಸಹಕಾರಿಯಾಗಲಿದೆ. ಶೇ 8.5ರ ವಾರ್ಷಿಕ ಬಡ್ಡಿದರದಂತೆ 5 ಲಕ್ಷ ರು ಲಭ್ಯವಾಗಲಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications