ದೀಪಾವಳಿ ಕೊಡುಗೆ, ಡಿಶ್ ಟಿವಿ 250 ಚಾನೆಲ್ ಪ್ಯಾಕೇಜ್ ಪಡೆಯೋದು ಹೇಗೆ?

ಬೆಂಗಳೂರು, ಅಕ್ಟೋಬರ್ 15: ದೇಶದ ಪ್ರಮುಖ ಡಿಟಿಎಚ್ ಸಂಸ್ಥೆ ಡಿಶ್ ಟಿವಿ ತನ್ನ ಗ್ರಾಹಕರಿಗೆ ದೀಪಾವಳಿ ಕೊಡುಗೆ ರೂಪದಲ್ಲಿ ಹಳೆ ದರದಲ್ಲೇ 250ಪ್ಲಸ್ ಚಾನೆಲ್ ಗಳನ್ನು ನೀಡುತ್ತಿದೆ.

Recommended Video

      ನಾಲ್ಕನೇ ಬಾರಿಗೆ ಸಿಎಂ ಆಗಲು ಹೊರಟಿರುವ ಬಿ ಎಸ್ ಯಡಿಯೂರಪ್ಪ ಎಷ್ಟು ದಿನ ಆಡಳಿತ ನಡೆಸಿದ್ದರು? | Oneindia Kannada

      ಟ್ರಾಯ್ ಹೊಸ ನಿಯಮಗಳು ಜಾರಿಗೆ ಬಂದ ಬಳಿಕ ಕೋಟ್ಯಂತರ ಮಂದಿ ಡಿಟಿಎಚ್ ತೊರೆದು ಕೇಬಲ್ ಟಿವಿ ಸೇವೆಗೆ ಮೊರೆ ಹೋಗಿದ್ದಾರೆ. ಇನ್ನು ಕೆಲವರು ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್ ಮುಂತಾದ ವಿಡಿಯೋ ಸೇವೆಗಳನ್ನು ಬಳಸತೊಡಗಿದ್ದಾರೆ. ಹೀಗಾಗಿ ಡಿಟಿಎಚ್ ಸೇವಾ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಸೆಳೆಯಲು ಆಫರ್ ಗಳನ್ನು ನೀಡುತ್ತಿವೆ.

      ಡಿಶ್ ಟಿವಿ ಗ್ರಾಹಕರು ತಿಂಗಳಿಗೆ 219 ರೂಪಾಯಿ ರಿಚಾರ್ಜ್‌ ಮಾಡಿಸಿ 250ಕ್ಕೂ ಹೆಚ್ಚು ಚಾನೆಲ್ ವೀಕ್ಷಿಸಬಹುದು. ಆದರೆ ಈ ಕೊಡುಗೆಯ ಲಾಭ ಪಡೆಯಲು 2 ವರ್ಷಗಳವರೆಗಿನ ಚಂದಾದಾರಿಕೆ ಪಡೆಯಬೇಕು. ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಎಸ್‌ಡಿ ಪ್ಯಾಕ್‌ ಅನ್ನು 24 ತಿಂಗಳು (2 ವರ್ಷ) 5,256 ರೂ. ನಲ್ಲಿ ರಿಚಾರ್ಜ್​ ಮಾಡಿಕೊಳ್ಳಬೇಕು. ಅಂದರೆ 12 ತಿಂಗಳಿಗೆ 2,628 ರೂ. (ಒಂದು ವರ್ಷ). ಈ ಮೊತ್ತ ತಿಂಗಳಿಗೆ 219 ರೂ. ಆಗಿರಲಿದೆ. ಇದೇ ಎಚ್ ಡಿ ಚಾನೆಲ್ ಬಳಸಿದರೆ 7,176 ರು (ತಿಂಗಳಿಗೆ 299ರು) ಆಗಲಿದೆ.

      ಹೊಸ ಪ್ಯಾಕೇಜ್ ಗಳು

      ಹೊಸ ಪ್ಯಾಕೇಜ್ ಗಳು

      * ಫ್ಯಾಮಿಲಿ ಇಂಗ್ಲಿಷ್ ಎಸ್‌ಡಿ ಪ್ಯಾಕ್‌ನ ಬೆಲೆ 24 ತಿಂಗಳವರೆಗೆ 7,800 ರೂ. (ತಿಂಗಳಿಗೆ 325 ರೂ.) ರಿಚಾರ್ಜ್ ಪ್ಲ್ಯಾನ್​
      * 24 ತಿಂಗಳ ಫ್ಯಾಮಿಲಿ ಇಂಗ್ಲಿಷ್ ಎಚ್‌ಡಿ ಪ್ಯಾಕ್‌ಗೆ 10,776 ರೂ. (ತಿಂಗಳಿಗೆ 449 ರೂ.),
      * ಫ್ಯಾಮಿಲಿ ಕ್ರಿಕೆಟ್ ಪ್ಯಾಕ್ ಎಸ್‌ಡಿ ಪ್ಯಾಕ್‌ಗೆ 6,600 ರೂ.( ತಿಂಗಳಿಗೆ 275 ರೂ. )
      * ಫ್ಯಾಮಿಲಿ ಕ್ರಿಕೆಟ್ ಎಚ್​ಡಿ ಪ್ಯಾಕ್​ 8,376 ರೂ. ( ತಿಂಗಳಿಗೆ 349 ರೂ.) ಕೂಡ ಲಭ್ಯವಿದೆ.

      ನಾಲ್ಕು ವಿಧಾನದಲ್ಲಿ ಬದಲಾಯಿಸಬಹುದು

      ನಾಲ್ಕು ವಿಧಾನದಲ್ಲಿ ಬದಲಾಯಿಸಬಹುದು

      ಡಿಶ್ ಟಿವಿ ಪ್ಯಾಕ್ ಬದಲಾಯಿಸಲು ಡಿಶ್ ಟಿವಿ ವೆಬ್ ಸೈಟಿಗೆ ಭೆಟಿ ನೀಡಿ, ಕಸ್ಟಮರ್ ಕೇರ್ ಇಮೇಲ್ ಗೆ ಪತ್ರ ಕಳಿಸಿ, 57575 ಗೆ ಎಸ್ಎಂಎಸ್ ಕಳಿಸಿ ಅಥವಾ ಡಿಶ್ ಟಿವಿ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ. ಆನ್ ಲೈನ್ ನಲ್ಲಿ ಬದಲಾವಣೆ ಮಾಡಲು ಡಿಶ್ ಟಿವಿ ಅಕೌಂಟ್ ಗೆ ಲಾಗಿನ್ ಆಗಿ ಹಾಲಿ ಪ್ಲ್ಯಾನ್ ಅಪ್ಗ್ರೇಡ್ ಅಥವಾ ಡೌನ್ ಗ್ರೇಡ್ ಮಾಡಿ, ಯೋಜನೆ ಸೇವ್ ಮಾಡಿ.

      ಇಮೇಲ್ ಮುಖಾಂತರ ಪ್ಲ್ಯಾನ್ ಬದಲಾಯಿಸುವುದು

      ಇಮೇಲ್ ಮುಖಾಂತರ ಪ್ಲ್ಯಾನ್ ಬದಲಾಯಿಸುವುದು

      ವಿ.ಸಿ ನಂಬರ್ ಅಥವಾ ನೋಂದಾಯಿತ ನಂಬರ್ ಹಾಕಿ, ಹೆಸರು, ಕೆಟಗೆರಿ1 ಹಾಗೂ1, ಇಮೇಲ್ ತುಂಬಿ, ಇಮೇಲ್ ರಚಿಸಿ ಸಬ್ಮಿಟ್ ಮಾಡಿ. ಡಿಶ್ ಟಿವಿ ಕಸ್ಟಮರ್ ಕೇರ್ ಗೆ ಇಮೇಲ್ ಹಾಕುವ ಮೊದಲು ಡಿಶ್ ಟಿವಿ ಪ್ಯಾಕೇಜ್ ಬಗ್ಗೆ ಖಚಿತ ಪಡಿಸಿಕೊಳ್ಳಿ.

      ಎಸ್ಎಂಎಸ್ ಮೂಲಕ ಕೂಡಾ ಬದಲಾಯಿಸಬಹುದು

      ಎಸ್ಎಂಎಸ್ ಮೂಲಕ ಕೂಡಾ ಬದಲಾಯಿಸಬಹುದು

      57575ಗೆ ಕಾಲ್ ಮೀ ಎಂದು ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಿಂದ ಎಸ್ಎಂಎಸ್ ಕಳಿಸಿ. ಗ್ರಾಹಕ ಸೇವಾ ಕಾರ್ಯಕಾರಿ ಸಿಬ್ಬಂದಿ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತಾರೆ. ನಂತರ ಅವರು ನೀಡುವ ಸೂಚನೆ ಬಳಸಿ ನಿಮ್ಮ ಡಿಶ್ ಟಿವಿ ಯೋಜನೆ ಬದಲಾಯಿಸಿಕೊಳ್ಳಬಹುದು.

      ಇದೆಲ್ಲವೂ ಕಷ್ಟವೆನಿಸಿದರೆ ಡಿಶ್ ಟಿವಿ ಟೋಲ್ ಫ್ರೀ ಸಂಖ್ಯೆ 1800-2583747 ಗೆ ಕರೆ ಮಾಡಿ ಪ್ಯಾಕೇಜ್ ಬದಲಾಯಿಸಿಕೊಳ್ಳಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+