ಕೋಟಿಗಟ್ಟಲೆ ಹಣ ಬ್ಯಾಂಕ್ ಗೆ ಕಟ್ಟಿ, ತೆರಿಗೆ ಪಾವತಿಸಿ ಸಾಕು!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 15: ಅವಕಾಶ ಕೊಟ್ಟಿದ್ದಾಗ ಬಳಸಿಕೊಂಡಿದ್ದರೆ 60ರಷ್ಟು ದುಡ್ಡು ಉಳೀತಿತ್ತು. ಈಗ ನೋಡಿ, ಬಾಯಿ ಬಡಿದುಕೊಳ್ಳೋ ಪರಿಸ್ಥಿತಿ ಬಂದಿದೆ. ಕಪ್ಪು ಹಣದ ಲೆಕ್ಕ ತೋರಿಸಿ, ಸರಕಾರದ ನಿಯಮದ ಪ್ರಕಾರವೇ ತೆರಿಗೆ ಕಟ್ಟುತ್ತೀನಿ ಎಂದು ಹೊರಟವರ ಬಗ್ಗೆ ಈಗ ಕೇಳಿ ಬರುತ್ತಿರುವ ಮಾತಿದು.

ಕಪ್ಪು ಹಣವನ್ನು ಸ್ವಯಂ ಘೋಷಿಸಿಕೊಂಡರೆ, ಮೂಲವನ್ನು ಪ್ರಶ್ನೆ ಮಾಡೋದಿಲ್ಲ ಬರೀ ಶೇ 40ರಷ್ಟು ತೆರಿಗೆ ವಿಧಿಸ್ತೀವಿ ಎಂದು ಕೇಂದ್ರ ಸರಕಾರ ಈ ಹಿಂದೆ ಒಂದು ಘೋಷಣೆ ಮಾಡಿತ್ತು. ಕೆಲವರು ಆ ಸಂದರ್ಭದಲ್ಲಿ ತಮ್ಮ ಬಳಿಯಿದ್ದ ಕಪ್ಪು ಹಣಕ್ಕೆ ಒಂದು ಗತಿ ಕಾಣಿಸಿದರು. ಈಗ ಏನಾಗಿದೆ ಅಂದರೆ, ಹಣಕ್ಕೆ ತೆರಿಗೆ, ಅದರ ಜೊತೆಗೆ ತೆರಿಗೆಯ ಶೇ 200ರಷ್ಟು ದಂಡ ಕಟ್ಟಲೇ ಬೇಕು.[ಕಪ್ಪು ಹಣ ಘೋಷಣೆಗೆ ಅವಕಾಶ, ತಪ್ಪಿದ್ರೆ ಜೈಲುವಾಸ]

How to caluculate tax on unaccounted money?

ಈಗ ಎಷ್ಟು ಮೊತ್ತಕ್ಕೆ ಎಷ್ಟು ತೆರಿಗೆ ಅನ್ನೋ ಲೆಕ್ಕಾಚಾರ ನೋಡಿಬಿಡೋಣ. 2.50,000ದವರೆಗೆ ಯಾವುದೇ ತೆರಿಗೆಯನ್ನು ವಿಧಿಸೋದಿಲ್ಲ. ಆ ನಂತರದ ಮೊತ್ತಕ್ಕೆ ತೆರಿಗೆಯನ್ನು ಲೆಕ್ಕ ಹಾಕುವ ವಿಧಾನವನ್ನು ಇಲ್ಲಿ ಕೊಡಲಾಗಿದೆ. ಕಪ್ಪು ಹಣಕ್ಕೆ ತೆರಿಗೆ ಹಾಗೂ ದಂಡದ ಲೆಕ್ಕಾಚಾರ ತಿಳಿಯಲು ವೆಬ್ ಸೈಟ್ ಇಲ್ಲಿದೆ.[ಕಪ್ಪು ಹಣ ಖಾತೆ: ಒಟ್ಟು 2,428 ಕೋಟಿ ರು ಆದಾಯ ಸಂಗ್ರಹ]

5 ಲಕ್ಷಕ್ಕೆ ಶೇ 10ರ ತೆರಿಗೆ
ತೆರಿಗೆ 25 ಸಾವಿರ
ದಂಡ 50 ಸಾವಿರ
ಒಟ್ಟು 75 ಸಾವಿರ

10 ಲಕ್ಷಕ್ಕೆ ಶೇ 20ರ ತೆರಿಗೆ
ತೆರಿಗೆ 1.25 ಲಕ್ಷ
ದಂಡ 2.50 ಲಕ್ಷ
ಒಟ್ಟು 3.75 ಲಕ್ಷ

20 ಲಕ್ಷಕ್ಕೆ ಶೇ 30ರ ತೆರಿಗೆ
ತೆರಿಗೆ 4.25 ಲಕ್ಷ
ದಂಡ 8.50 ಲಕ್ಷ
ಒಟ್ಟು 12.75 ಲಕ್ಷ

40 ಲಕ್ಷಕ್ಕೆ ಶೇ 30ರ ತೆರಿಗೆ
ತೆರಿಗೆ 10.25 ಲಕ್ಷ
ದಂಡ 20.50 ಲಕ್ಷ
ಒಟ್ಟು 30.75 ಲಕ್ಷ

80 ಲಕ್ಷಕ್ಕೆ ಶೇ 30ರ ತೆರಿಗೆ
ತೆರಿಗೆ 22.25 ಲಕ್ಷ
ದಂಡ 44.50 ಲಕ್ಷ
ಒಟ್ಟು 67.75 ಲಕ್ಷ

1 ಕೋಟಿ ರುಪಾಯಿಗೆ ಶೇ 30ರ ತೆರಿಗೆ
ತೆರಿಗೆ 28.75 ಲಕ್ಷ
ದಂಡ 56.50 ಲಕ್ಷ
ಒಟ್ಟು 84.75 ಲಕ್ಷ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Income tax caluculation on un accounted money has given here. You can check in a online tool, how much tax has to pay to the central government with 200% fine on tax.
Please Wait while comments are loading...