ಮತ್ತೆ ಸುದ್ದಿಯಲ್ಲಿ ಹೌಸಿಂಗ್.ಕಾಂ ಸಿಇಒ ರಾಹುಲ್ !

ನವದೆಹಲಿ, ಮೇ.5: ರಾಜೀನಾಮೆ ಪ್ರಹಸನದ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ಹೌಸಿಂಗ್.ಕಾಂ ಸಿಇಒ ರಾಹುಲ್ ಯಾದವ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ರಾಜೀನಾಮೆ ಹಿಂಪಡೆದು ಕಚೇರಿ ಮರಳಿದ ಕೆಲದಿನಗಳಲ್ಲೇ ತಮ್ಮ ಬಳಿ ಇದ್ದ ಷೇರುಗಳನ್ನು ಸಂಸ್ಥೆಯ ಉದ್ಯೋಗಿಗಳಿಗೆ ಹಂಚುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಹುಲ್ ನಡೆ 'ಫೆರಾರಿ ಮಾರಿದ ಫಕೀರ ಕಥೆ'ಯನ್ನು ನೆನಪಿಸುತ್ತದೆ.

ಹೌಸಿಂಗ್. ಕಾಂ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಯಾದವ್ ಅವರು ತಮ್ಮ ಬಳಿ ಇದ್ದ 150 ರಿಂದ 200 ಕೋಟಿ ರು ಮೌಲ್ಯದ ವೈಯಕ್ತಿಕ ಷೇರುಗಳನ್ನು ಸಂಸ್ಥೆಯ 2,251 ಉದ್ಯೋಗಿಗಳಿಗೆ ಹಂಚಿದ್ದಾರೆ. ಸಿಇಒ ಮಾಡಿರುವ ಈ ಹಂಚಿಕೆ ಕಾರ್ಯದಿಂದ ಹೌಸಿಂಗ್.ಕಾಂನ ಪ್ರತಿ ಉದ್ಯೋಗಿಯೂ ಸಂಸ್ಥೆಯ ಷೇರುದಾರನಾಗಿದ್ದಾನೆ. [ರಾಜೀನಾಮೆ ಡ್ರಾಮಾ ಖತಂ, ಮನೆಯಿಂದ ಆಫೀಸಿಗೆ ಸಿಇಒ]

ಯಾಕಪ್ಪ ಈಗಲೇ ಈ ರೀತಿ ಹಂಚುವ ಬುದ್ಧಿ ಎಂದು ಪ್ರಶ್ನಿಸಿದರೆ, ನನಗೀಗ 26 ವರ್ಷ ವಯಸ್ಸು, ಹಣಕಾಸಿನ ಬಗ್ಗೆ ಹೆಚ್ಚಿನ ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಹೌಸಿಂಗ್.ಕಾಂ ಆರಂಭವಾಗಿದ್ದು, ಜಾಗತಿಕ ಸಮಸ್ಯೆಯಾಗಿರುವ ಮನೆ ಹುಡುಕಾಟಕ್ಕೆ ಒಂದು ಪರಿಹಾರ ನೀಡಲು ಹೌಸಿಂಗ್.ಕಾಂ ಆರಂಭಿಸಲಾಯಿತು.

Housing.com CEO Rahul Yadav gives away all his shares to employees

ಜಾಗತಿಕವಾಗಿ 500ಕ್ಕೂ ಮೀರಿದ ಉದ್ಯಮ ಸಂಸ್ಥೆಗಳ ಒಕ್ಕೂಟ ರಚಿಸುವ ಕನಸಿದೆ. ಸಂಶೋಧನೆ ಹಾಗೂ ಅಭಿವೃದ್ಧಿ, ತಂತ್ರಜ್ಞಾನ ಅಳವಡಿಕೆ ಇದರಿಂದ ಮಾತ್ರ ಸಾಧ್ಯ ಎಂದಿದ್ದಾರೆ.

ಏ.30ರಂದು ರಾಹುಲ್ ಬರೆದ ರಾಜೀನಾಮೆ ಪತ್ರ ಪ್ರಮುಖ ದಿನ ಪತ್ರಿಕೆಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಗೊಂಡಿತ್ತು.

I had calculated long back (by taking avg life expectancy minus avg sleeping hrs) that I only have ~3L (hours) in my life. ~3L hrs are certainly not much to waste with you guys!

ಎಂದು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದರು. ನಂತರ ಬೋರ್ಡ್ ಸದಸ್ಯರ ಜೊತೆ ಸಭೆ ನಡೆಸಿ ರಾಜೀನಾಮೆ ವಾಪಸ್ ಪಡೆದುಕೊಂಡಿದ್ದರು.

ಹೌಸಿಂಗ್.ಕಾಂ : ಯಾದವ್ ಹಾಗೂ 11 ಜನ ಐಐಟಿಯನ್ ಗಳು ಸೇರಿ ಆರಂಭಿಸಿದ ರಿಯಲ್ ಎಸ್ಟೇಟ್ ಆಧಾರಿತ ಸಂಸ್ಥೆ ಇದಾಗಿದೆ. ತಂತ್ರಜ್ಞಾನ ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿರುವ ಈ ಸಂಸ್ಥೆಗೆ ಜಪಾನ್ ನ ಸಾಫ್ಟ್ ಬ್ಯಾಂಕ್ ಸುಮಾರು 90 ಮಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+