ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಚಯವೇ ಇಲ್ಲದ ಯೋಗಿ ಮಾತಿನಂತೆ ನಿರ್ಧಾರ ಕೈಗೊಂಡಿದ್ದ ಎನ್‌ಎಸ್‌ಇ ಮಾಜಿ ಸಿಇಒ!

|
Google Oneindia Kannada News

ನವದೆಹಲಿ, ಫೆಬ್ರವರಿ 14: ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್‌ ಎನ್‌ಎಸ್‌ಇಯ ಮಾಜಿ ಮುಖ್ಯಸ್ಥರು ಚಿತ್ರಾ ರಾಮಕೃಷ್ಣ ಹಿಮಾಲಯದ ಓರ್ವ ಯೋಗಿಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಯೋಗಿಯ ಸಲಹೆಯನ್ನು ಪಡೆದು ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ ಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ತಿಳಿಸಿದೆ ಎಂದು reuters ವರದಿ ಮಾಡಿದೆ.

4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯದ ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ ಎನ್​ಎಸ್​ಇ (NSE)ಗೆ ಮಾಜಿ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಚಿತ್ರಾ ರಾಮಕೃಷ್ಣ ತಾನು ನೋಡದ, ತನಗೆ ಪರಿಚಯವೇ ಇಲ್ಲದ ಹಿಮಾಲಯದ ಯೋಗಿಯೋರ್ವರ ಸಲಹೆಯನ್ನು ಪಡೆದುಕೊಂಡೇ ನಿರ್ಧಾರವನ್ನು ಕೈಗೊಳ್ಳುತ್ತಿದ್ದರು. NSEಯ ಪ್ರಮುಖ ವ್ಯವಹಾರ ಯೋಜನೆಗಳು ಮತ್ತು ಅಜೆಂಡಾ ಸೇರಿದಂತೆ ಹಲವಾರು ವಿಚಾರಗಳನ್ನು ಆ ಅಪರಿಚಿತ ಯೋಗಿಯೊಂದಿಗೆ ಹಂಚಿಕೊಂಡಿದ್ದಾರೆ ಎಂಬ ವಿಚಾರವನ್ನು ಸೆಬಿ ಬಹಿರಂಗಪಡಿಸಿದೆ.

NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ ! NSE ಷೇರು ಪೇಟೆಯಲ್ಲಿ ಖರೀದಿಸಿದ ಚಿನ್ನ ಇನ್ಮುಂದೆ ಡೆಲಿವರಿ ಸಿಗುತ್ತೆ !

"ಎನ್‌ಎಸ್‌ಇಯ ಹಣಕಾಸು ಮತ್ತು ವ್ಯವಹಾರ ಯೋಜನೆಗಳ ಮಾಹಿತಿ ಹಂಚಿಕೆಯು, ಊಹೆಗೂ ನಿಲುಕದ, ಸ್ಟಾಕ್ ಎಕ್ಸ್‌ಚೇಂಜ್‌ನ ತಳಹದಿಯನ್ನೇ ಅಲುಗಾಡಿಸಬಲ್ಲ ಕಾರ್ಯವಾಗಿದೆ," ಸೆಬಿ ತನ್ನ ಆದೇಶದಲ್ಲಿ ಉಲ್ಲೇಖ ಮಾಡಿದ್ದು, ಚಿತ್ರಾ ರಾಮಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳಿಗೆ ಈ ಸಂಬಂಧವನ್ನು ದಂಡವನ್ನು ವಿಧಿಸಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಹಣಕಾಸು‌ ಜಾಗೃತಿ ಕಾರ್ಯಕ್ರಮ: NSE ಜೊತೆ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆಕಾಲೇಜು ವಿದ್ಯಾರ್ಥಿಗಳಿಗೆ ಹಣಕಾಸು‌ ಜಾಗೃತಿ ಕಾರ್ಯಕ್ರಮ: NSE ಜೊತೆ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ

 ಹಲವು ವರ್ಷಗಳಿಂದ ಲೋಪದೋಷ ಆರೋಪ ಎದುರಿಸುತ್ತಿದೆ ಎನ್‌ಎಸ್‌ಇ

ಹಲವು ವರ್ಷಗಳಿಂದ ಲೋಪದೋಷ ಆರೋಪ ಎದುರಿಸುತ್ತಿದೆ ಎನ್‌ಎಸ್‌ಇ

"ವೈಯಕ್ತಿಕ ಕಾರಣಗಳನ್ನು" ಉಲ್ಲೇಖಿಸಿ 2016 ರಲ್ಲಿ ಎನ್‌ಎಸ್‌ಇ ತೊರೆದ ರಾಮಕೃಷ್ಣ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಸಾಂಸ್ಥಿಕ ಆಡಳಿತದ ಲೋಪದೋಷಗಳ ಆರೋಪಗಳು ಹಲವಾರು ವರ್ಷಗಳಿಂದ NSE ಎದುರಿಸುತ್ತಿದೆ. ಎನ್‌ಎಸ್‌ಸಿ 2017 ರಲ್ಲಿ ಐಪಿಒ ಆರಂಭ ಮಾಡಿತ್ತು. ಆದರೆ ಇದರಲ್ಲಿ ಹಲವಾರು ಲೋಪ ದೋಷಗಳು ಕಂಡು ಬಂದಿದೆ ಎಂಬ ಆರೋಪ ಕೇಳಿ ಬಂದಿತ್ತು. ಮೂರು ವರ್ಷಗಳ ತನಿಖೆಯ ನಂತರ, ಸೆಬಿ ಈ ಮಾಹಿತಿಯನ್ನು ಹೊರಹಾಕಿದ್ದು, ಸುಮಾರು 90 ಮಿಲಿಯನ್ ಡಾಲರ್‍ ದಂಡವನ್ನು ವಿಧಿಸಿದೆ. ಆರು ತಿಂಗಳವರೆಗೆ ಸೆಕ್ಯುರಿಟೀಸ್ ಮಾರುಕಟ್ಟೆಗಳಲ್ಲಿ ಹಣವನ್ನು ಸಂಗ್ರಹಿಸುವುದನ್ನು ನಿರ್ಬಂಧ ಮಾಡಿದೆ.

"ಆಧ್ಯಾತ್ಮಿಕ ಶಕ್ತಿ" ಕರೆಯಲ್ಪಡುತ್ತಿದ್ದ ಅಪರಿಚಿತ ವ್ಯಕ್ತಿ

ಆದರೆ ಎನ್‌ಎಸ್‌ಇ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಿದೆ ಮತ್ತು ಹೊಸ ಐಪಿಒಗಾಗಿ ಕರಡು ಸಲ್ಲಿಕೆ ಮಾಡಲು SEBI ಯ ಅನುಮೋದನೆಯನ್ನು ಕೋರಿದೆ. ಆದರೆ ಆ ತನಿಖೆಯ ಸಮಯದಲ್ಲಿ, SEBI ಅಪರಿಚಿತ ವ್ಯಕ್ತಿಗೆ ಚಿತ್ರಾ ರಾಮಕೃಷ್ಣ ಅವರ ಇಮೇಲ್‌ನಿಂದ ದಾಖಲೆಗಳನ್ನು ಕಳುಹಿಸಿರುವುದನ್ನು ಪತ್ತೆ ಹಚ್ಚಿದೆ. ಇನ್ನು ಚಿತ್ರಾ ರಾಮಕೃಷ್ಣ ಆ ಅಪರಿಚಿತ ವ್ಯಕ್ತಿಯನ್ನು "ಆಧ್ಯಾತ್ಮಿಕ ಶಕ್ತಿ" ಎಂದು ಕರೆಯುತ್ತಿದ್ದು, 20 ವರ್ಷಗಳಿಂದ ಮಾರ್ಗದರ್ಶನವನ್ನು ಪಡೆದಿದ್ದರು ಎಂದು reuters ವರದಿ ಉಲ್ಲೇಖಿಸಿದೆ. ಇನ್ನು "ಆಧ್ಯಾತ್ಮಿಕ ಸ್ವಭಾವದ" ವ್ಯಕ್ತಿಯೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದು ಗೌಪ್ಯತೆ ಅಥವಾ ಸಮಗ್ರತೆಗೆ ರಾಜಿಯಾಗುವುದಿಲ್ಲ ಎಂದು ಚಿತ್ರಾ ರಾಮಕೃಷ್ಣ ತನ್ನ ಪ್ರತಿವಾದದಲ್ಲಿ ಸೆಬಿಗೆ ತಿಳಿಸಿದರು.

"ಕೇವಲ ಅವರ ಕೈ ಬೊಂಬೆ"

ಈ ಯೋಗಿಗಳೇ ಆನಂದ್​ ಸುಬ್ರಮಣಿಯನ್​ ಅವರ ನೇಮಕಕ್ಕೆ ಚಿತ್ರಾಗೆ ಮಾರ್ಗದರ್ಶನ ನೀಡಿದ್ದರು ಎಂದು ಕೂಡಾ ವರದಿಯು ಹೇಳಿದೆ. ಈ ಯೋಗಿಗಳು ಎಲ್ಲಾ ವಿಷಯದಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದರು, ರಾಮಕೃಷ್ಣ ಅವರು "ಕೇವಲ ಅವರ ಕೈಯಲ್ಲಿ ಬೊಂಬೆ" ಎಂದು ಸೆಬಿಯು ಹೇಳಿದೆ. ಈ ಯೋಗಿಗಳಿಗೆ ಸೇರಿದ್ದು ಎಂದು ಹೇಳಲಾದ ಇಮೇಲ್‌ ವಿಳಾಸಕ್ಕೆ ಸೆಬಿಯು ಕಳುಹಿಸಿದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎನ್‌ಎಸ್‌ಇ ಮತ್ತು ಅದರ ಮಂಡಳಿಯು ಗೌಪ್ಯ ಮಾಹಿತಿಯ ವಿನಿಮಯದ ಬಗ್ಗೆ ತಿಳಿದಿತ್ತು. ಆದರೆ ಈ ವಿಚಾರವನ್ನು ಮುಚ್ಚಿಟ್ಟಿತ್ತು ಎಂದು ಕೂಡಾ ಸೆಬಿ ಹೇಳಿದೆ.

 ಎಷ್ಟು ದಂಡ ವಿಧಿಸಲಾಗಿದೆ?

ಎಷ್ಟು ದಂಡ ವಿಧಿಸಲಾಗಿದೆ?

ಮಾಹಿತಿ ಮುಚ್ಚಿಟ್ಟಿದ್ದ ಈ ಹಿನ್ನೆಲೆ ಎನ್‌ಎಸ್‌ಇಗೆ 20 ಮಿಲಿಯನ್ ರೂಪಾಯಿ ($270,000) ದಂಡ ವಿಧಿಸಲಾಗಿದೆ. ಆರು ತಿಂಗಳವರೆಗೆ ಯಾವುದೇ ವಹಿವಾಟು ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಚಿತ್ರಾ ರಾಮಕೃಷ್ಣನ್‌ಗೆ ಸೆಬಿಯು 30 ಮಿಲಿಯನ್ ರೂಪಾಯಿಗಳ ದಂಡವನ್ನು ವಿಧಿಸಿದೆ. ಮೂರು ವರ್ಷಗಳ ಕಾಲ ಯಾವುದೇ ಸೆಬಿ ನೋಂದಾಯಿತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದಕ್ಕೆ ನಿರ್ಬಂಧ ವಿಧಿಸಿದೆ. (ಒನ್‌ಇಂಡಿಯಾ ಸುದ್ದಿ)

Recommended Video

ತಲೆಗೆ ಕೇಸರಿ ಶಾಲು ಹಾಕಿರೋರ್ಯಾರು? ಕಿಚ್ಚು ಹತ್ತಿಸೋ ವೈರಲ್ ವಿಡಿಯೋ | Oneindia Kannada

English summary
Himalaya yogi ran India's top bourse as puppet master says SEBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X