HDFC ಬ್ಯಾಂಕ್ ಷೇರಿನ ಬಲವರ್ಧನೆ: ಸೋಮವಾರ ಶೇಕಡಾ 3.97ರಷ್ಟು ಏರಿಕೆ
ಮುಂಬೈ, ಜುಲೈ 6: ದೇಶದ ಬಹುದೊಡ್ಡ ಖಾಸಗಿ ಬ್ಯಾಂಕ್ ಹೆಚ್ಡಿಎಫ್ಸಿ ಬ್ಯಾಂಕಿನ ಷೇರಿನ ಮೌಲ್ಯ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಭರ್ಜರಿ ವಹಿವಾಟು ಕಂಡಿದ್ದು, 3.97% ರಷ್ಟು ಏರಿಕೆ ಕಂಡಿದೆ.
Recommended Video
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಅದರ ಪ್ರಗತಿ ಶೇಕಡಾ 21ರಷ್ಟು ವರ್ಷದಿಂದ ವರ್ಷಕ್ಕೆ (YOY) ಏರಿಕೆ ಕಂಡಿದೆ. ಇದು ಹಿಂದಿನ ವರ್ಷದಲ್ಲಿ 8.30 ಟ್ರಿಲಿಯನ್ಗೆ ಹೋಲಿಸಿದರೆ, ಈ ವರ್ಷ 10.05 ಟ್ರಿಲಿಯನ್ ಡಾಲರ್ಗೆ ತಲುಪಿದೆ.
ಬೆಳಿಗ್ಗೆ 11:21 ಕ್ಕೆ, ಎಚ್ಡಿಎಫ್ಸಿ ಬ್ಯಾಂಕ್ ಅದರ ಹಿಂದಿನ ವಹಿವಾಟು ಮುಕ್ತಾಯಕ್ಕಿಂತ ಶೇಕಡಾ 3.34ರಷ್ಟು ಹೆಚ್ಚಳವಾಗಿ 1,110.10 ರುಪಾಯಿಗೆ ವಹಿವಾಟು ನಡೆಸುತ್ತಿದೆ. ಸೆನ್ಸೆಕ್ಸ್ 1.20% ಏರಿಕೆ ಕಂಡು 36,453.48 ಕ್ಕೆ ತಲುಪಿದೆ.

2020ರ ಹಣಕಾಸು ವರ್ಷ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ನಲ್ಲಿನ ಠೇವಣಿಗಳು ಶೇಕಡಾ 25 ಪರ್ಸೆಂಟ್ರಷ್ಟು ಹೆಚ್ಚಳಗೊಂಡು 11.90 ಟ್ರಿಲಿಯನ್ಗೆ ತಲುಪಿದ್ದು, ಕ್ಯೂ 1 ಎಫ್ವೈ 20 ರಲ್ಲಿ 9.55 ಟ್ರಿಲಿಯನ್ ಆಗಿತ್ತು. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ, ಠೇವಣಿಗಳು 11.48 ಟ್ರಿಲಿಯನ್ ಆಗಿವೆ ಎಂದು ಎಕ್ಸ್ಚೇಂಜ್ ಫೈಲಿಂಗ್ ತಿಳಿಸಿದೆ.
ಎಚ್ಡಿಎಫ್ಸಿ ಬ್ಯಾಂಕಿನ ಪ್ರಸ್ತುತ ಮತ್ತು ಉಳಿತಾಯ ಖಾತೆ ಅನುಪಾತ ಅಥವಾ ಸಿಎಎಸ್ಎ ಅನುಪಾತವು 30 ಜೂನ್ 2020 ರ ವೇಳೆಗೆ ಸುಮಾರು ಶೇಕಡಾ 40 ರಷ್ಟಿದೆ, ಇದು ಹಿಂದಿನ ವರ್ಷದ ಶೇಕಡಾ 39.7% ಮತ್ತು ಮಾರ್ಚ್ 2020 ರ ಕೊನೆಯಲ್ಲಿ 42.2% ರಷ್ಟಿತ್ತು.
ಎಚ್ಡಿಎಫ್ಸಿ ಬ್ಯಾಂಕ್ ಜೂನ್ ತ್ರೈಮಾಸಿಕದಲ್ಲಿ ಪೋಷಕ ವಸತಿ ಅಭಿವೃದ್ಧಿ ಹಣಕಾಸು ನಿಗಮ (ಎಚ್ಡಿಎಫ್ಸಿ) ಯೊಂದಿಗೆ ಗೃಹ ಸಾಲ ಒಪ್ಪಂದದ ಪ್ರಕಾರ ನೇರ ನಿಯೋಜನೆ ಮಾರ್ಗದ ಮೂಲಕ 1,376 ಕೋಟಿ ಮೌಲ್ಯದ ಸಾಲಗಳನ್ನು ಖರೀದಿಸಿದೆ.
ಎಚ್ಡಿಎಫ್ಸಿ ಬ್ಯಾಂಕಿನ ನಿವ್ವಳ ಲಾಭ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 17.72 ರಷ್ಟು ಏರಿಕೆ ಕಂಡು 6,927.69 ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 5885.12 ಕೋಟಿ ರುಪಾಯಿ 2020 ರ ಕ್ಯೂ 4 ರಲ್ಲಿ ಒಟ್ಟು ಆದಾಯ ಶೇಕಡಾ 15.10 ರಷ್ಟು ಏರಿಕೆ ಕಂಡು, 35,917.63 ಕೋಟಿಗೆ ತಲುಪಿದೆ. 2019 ರ ಕ್ಯೂ 4 ರಲ್ಲಿ 31,204.46 ಕೋಟಿ ರುಪಾಯಿಗಳಷ್ಟಿತ್ತು.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications