ಎಚ್1 ಬಿ ವೀಸಾ ಮಸೂದೆ ತಿದ್ದುಪಡಿ ಮತ್ತೆ ಜಾರಿಗೆ

Posted By:
Subscribe to Oneindia Kannada

ವಾಷಿಂಗ್ಟನ್, ಜನವರಿ 06: ಭಾರತದ ಸಾಫ್ಟ್ ವೇರ್ ಉದ್ಯೋಗಿಗಳಿಗೆ ಅಮೆರಿಕಕ್ಕೆ ಹಾರಲು ವರವಾಗಿರುವ ಎಚ್1- ಬಿ ವೀಸಾವನ್ನು ತೆಗೆದು ಹಾಕುತ್ತಿಲ್ಲ, ಬದಲಿಗೆ ಮಹತ್ವದ ತಿದ್ದುಪಡಿಯೊಂದಿಗೆ ಮತ್ತೊಮ್ಮೆ ಮಸೂದೆ ಮಂಡನೆ ಮಾಡಲಾಗುವುದು ಎಂದು ಯುಎಸ್ ಕಾಂಗ್ರೆಸ್ ತಿಳಿಸಿದೆ. ಇದರಿಂದಾಗಿ ಸುಮಾರು 150 ಬಿಲಿಯನ್ ಡಾಲರ್ ಐಟಿ ಸೇವಾ ಕ್ಷೇತ್ರದ ಆತಂಕ ನಿವಾರಣೆಯಾಗಿದೆ.

ಎಚ್1 ಬಿ ವೀಸಾ ಪಡೆಯ ಬಯಸುವವರು ಕನಿಷ್ಠ ಸಂಬಳ 100,000 ಡಾಲರ್ ವಾರ್ಷಿಕ ಪಡೆಯುತ್ತಿರಬೇಕು ಹಾಗೂ ಮಾಸ್ಟರ್ ಡಿಗ್ರಿಗೆ ಇದ್ದ ವಿನಾಯಿತಿ ರದ್ದು ಪ್ರಮುಖ ತಿದ್ದುಪಡಿಯಾಗಿದೆ. ಡಿಸ್ನಿ, ಸೋಕಾಲ್ ಎಡಿಸನ್ ಹಾಗೂ ಇನ್ನಿತರ ಸಂಸ್ಥೆಗಳು ಹಾಲಿ ಎಚ್1 ಬಿ ವೀಸಾ ವ್ಯವಸ್ಥೆಯಲ್ಲಿ ತಿದ್ದುಪಡಿಗೆ ಆಗ್ರಹಿಸಿ, ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಇನ್ಫಿ, ಟಿಸಿಎಸ್ ವಿರುದ್ಧ ತನಿಖೆಗೆ ಮುಂದಾದ ಅಮೆರಿಕ]

H1-B visa reform Bill reintroduced in U.S. Congress

ಸಂಬಳ ಮಿತಿ ಹೆಚ್ಚಳ ಹಾಗೂ ಇನ್ನಿತರ ತಿದ್ದುಪಡಿ ಮೂಲಕ ಸ್ಥಳೀಯರಿಗೆ ಉದ್ಯೋಗ ಹಾಗೂ ಕೌಶಲ್ಯವುಳ್ಳವರಿಗೆ ಮಾತ್ರ ವೀಸಾ ಸಿಗುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕಾಂಗ್ರೆಸ್ಸಿನ ಸ್ಕಾಟ್ ಪೀಟರ್ಸ್ ಹೇಳಿದ್ದಾರೆ. [ಎಚ್ 1 ಬಿ ಉಳ್ಳ ದಂಪತಿಗೆ ವರ್ಕ್ ಪರ್ಮಿಟ್]

2014-15ರ ಅವಧಿಯಲ್ಲಿ ಎಚ್1-ಬಿ ವೀಸಾದ ಅಡಿಯಲ್ಲಿ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಕಂಪೆನಿಗಳು ಒಟ್ಟು 86 ಸಾವಿರದಷ್ಟು ಟೆಕ್ಕಿಗಳನ್ನು ಅಮೆರಿಕಕ್ಕೆ ಕಳುಹಿಸಿತ್ತು. ಆದರೆ, ಈಗ ಸ್ಕಿಲ್ಡ್ ವರ್ಕರ್ ವೀಸಾ ಸಂಪೂರ್ಣ ಸ್ಥಗಿತಗೊಂಡರೆ ಏನು ಗತಿ ಎಂಬ ಆತಂಕ ಮೂಡಿತ್ತು. ಆದರೆ, ಈಗ ಆತಂಕ ಕೊಂಚ ತಗ್ಗಿದೆ.

ಯೂರೋಪಿಯನ್ ಒಕ್ಕೂಟದಿಂದ ಹೊರಹೋಗುವ ಬ್ರಿಟನ್ ನಿರ್ಧಾರದಿಂದ ಭಾರತದ ಐಟಿ ವಲಯಕ್ಕೆ ಭಾರಿ ಹೊಡೆತ ಉಂಟಾಗಿದೆ. ಅಮೆರಿಕ ಹಾಗೂ ಬ್ರಿಟನ್ನಿನ ಬ್ಯಾಂಕ್ ಹಾಗೂ ವಿಮಾದಾರರು ಭಾರತದ ಪ್ರಮುಖ ಗ್ರಾಹಕರಾಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಥಳೀಯರಿಗೆ ಉದ್ಯೋಗ, ಅಮೆರಿಕದಲ್ಲೇ ಬಂಡವಾಳ ಹೂಡಿಕೆಗೆ ಹೆಚ್ಚು ಒತ್ತು ನೀಡಿದ್ದು, ಇದಕ್ಕೆ ತಕ್ಕಂತೆ ವೀಸಾ ನೀತಿ ಬದಲಾವಣೆಗೊಳಪಟ್ಟಿದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Bill backing key changes in the H1-B visa programme that allows skilled workers from other countries to fill jobs in the U.S. has been reintroduced in Congress by two lawmakers who claim that it will help crack down on its abuse.
Please Wait while comments are loading...