ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 1ರಿಂದ ದೇಶಾದ್ಯಂತ ಏಕಸ್ವರೂಪ ತೆರಿಗೆ ಜಾರಿ: ಕೇಂದ್ರ

ಬಹುದಿನಗಳಿಂದ ನಿರೀಕ್ಷಿಸಲಾಗುತ್ತಿರುವ ಜಿಎಸ್ ಟಿ ಜಾರಿಗೆ ಇದೀಗ ಸಕಾಲ ಕೂಡಿಬಂದಿದ್ದು, ಶೀಘ್ರದಲ್ಲೇ ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ಬರುವ ದಿನ ನನಸಾಗಿದೆ.

|
Google Oneindia Kannada News

ನವದೆಹಲಿ, ಫೆಬ್ರವರಿ 28: ಇದೇ ವರ್ಷದ ಜುಲೈ 1ರಿಂದ ದೇಶಾದ್ಯಂತ ಏಕ ಸ್ವರೂಪ ತೆರಿಗೆ ವ್ಯವಸ್ಥೆ (ಸರಕು ಮತ್ತು ಸೇವಾ ತೆರಿಗೆ - ಜಿಎಸ್ ಟಿ) ಜಾರಿಗೆ ಬರಲಿದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ತಿಳಿಸಿದರು.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

ಈ ಹಿಂದೆ, ಕೆಲ ರಾಜ್ಯಗಳಿಂದ ಜಿಎಸ್ ಟಿಗೆ ಕೆಲ ರಾಜ್ಯ ಸರ್ಕಾರಗಳಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಇದೀಗ ಎಲ್ಲಾ ರಾಜ್ಯ ಸರ್ಕಾರಗಳೂ ಜಿಎಸ್ ಟಿಗೆ ಸಮ್ಮತಿ ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಹದ್ದೋಶದ ಏಕಸ್ವರೂಪ ತೆರಿಗೆ ವ್ಯವಸ್ಥೆ ಯಾವುದೇ ಅಡೆತಡೆಯಿಲ್ಲದೆ ಜಾರಿಗೊಳಿಸಬಹುದಾಗಿದೆ ಎಂದು ಅವರು ಹೇಳಿದರು.[ಜಿಎಸ್ ಟಿ ಜಾರಿಯಾದರೆ ಆಗುವ 9 ಅನುಕೂಲಗಳು]

GST to be rolled out on July 1: Economic Affairs Secretary Shaktikanta Das

ರಾಜ್ಯ ಸರ್ಕಾರಗಳ ಬೆಂಬಲ ಸಿಕ್ಕ ನಂತರವೂ ಕೇಂದ್ರ ಸರ್ಕಾರವು ಜಿಎಸ್ ಟಿ ಕೌನ್ಸಿಲ್ ಒಪ್ಪಿಗೆ ಪಡೆಯಬೇಕಿದೆ. ಈಗಾಗಲೇ ಜಿಎಸ್ ಟಿಗೆ ಸಂಬಂಧಪಟ್ಟ ಐ-ಜಿಎಸ್ ಟಿ (ಇಂಟಿಗ್ರೇಟೆಡ್ ಜಿಎಸ್ ಟಿ), ಸಿ - ಜಿಎಸ್ ಟಿ (ಸೆಂಟ್ರಲ್ ಜಿಎಸ್ ಟಿ) ಹಾಗೂ ಎಸ್ - ಜಿಎಸ್ ಟಿ (ಸ್ಟೇಟ್ ಜಿಎಸ್ ಟಿ) ಗಳ ಕರಡು ಪ್ರತಿಗಳಿಗೆ ಜಿಎಸ್ ಟಿ ಕೌನ್ಸಿಲ್ ನ ಅಂಕಿತ ದೊರೆತ ನಂತರ ಮಾರ್ಚ್ 9ರಿಂದ ಸಂಸತ್ತಿನಲ್ಲಿ ಬಜೆಟ್ ಅಧಿವೇಶನದಲ್ಲಿ ಮಂಡಿಸಿ ಲೋಕಸಭೆಯಲ್ಲಿ ಅದಕ್ಕೆ ಒಪ್ಪಿಗೆ ಪಡೆಯಬೇಕಿದೆ ಎಂದು ದಾಸ್ ವಿವರಿಸಿದ್ದಾರೆ.[ನಾಲ್ಕು ಹಂತದ ಜಿಎಸ್ ಟಿ ದರ ನಿಗದಿ: ಅರುಣ್ ಜೇಟ್ಲಿ]

English summary
Economic Affairs Secretary Shaktikanta Das said on Tuesday that the Goods and Services Tax (GST) will be implemented from July 1, as all states are in line now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X