ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ಬಳಿಕ ಚಿನ್ನದ ಬೆಲೆ ಗಗನ ಚುಂಬನ

By Mahesh
|
Google Oneindia Kannada News

ನವದೆಹಲಿ, ಜೂನ್ 21: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ಚಿನ್ನ, ಪಾದರಕ್ಷೆ ಸೇರಿದಂತೆ ಇತರ ಪರಿಕರಗಳಿಗೆ ವಿಧಿಸಬೇಕಿದ್ದ ದರಗಳ ಪಟ್ಟಿಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಕಟಿಸಿದ ಬಳಿಕ ಭಾರಿ ಚರ್ಚೆ ಮೊದಲುಗೊಂಡಿದೆ.

ಖಾದಿ, ಪೂಜಾ ಸಾಮಗ್ರಿಗಳಿಗೆ ಜಿಎಸ್ಟಿಯಿಂದ ವಿನಾಯಿತಿಖಾದಿ, ಪೂಜಾ ಸಾಮಗ್ರಿಗಳಿಗೆ ಜಿಎಸ್ಟಿಯಿಂದ ವಿನಾಯಿತಿ

ಚಿನ್ನದ ಮೇಲೆ ಶೇ. 3ರಷ್ಟು, ರಫ್ ಡೈಮೆಂಡ್ ಗಳ ಮೇಲೆ ಶೇ. 0.25ರಷ್ಟು ಸುಂಕ, ವಜ್ರ, ಇತರೆ ಅಲಂಕಾರಿಗೆ ಹರಳುಗಳ ಮೇಲೂ ಶೇ. 3ರಷ್ಟು ತೆರಿಗೆ ವಿಧಿಸಲಾಗಿದೆ.

ಆದರೆ, ಚಿನ್ನದ ಮೇಲಿನ ಶೇ 3ರಷ್ಟು ತೆರಿಗೆ ಶೇ 5ಕ್ಕೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಲಿರುವ ಹಿನ್ನಲೆಯಲ್ಲಿ ಜುಲೈ 1 ರಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಲಿದೆ.

GST rate on gold likely to be hiked

ಪ್ರಸ್ತುತ ಚಿನ್ನಕ್ಕೆ ಶೇ. 2 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಜಿ.ಎಸ್.ಟಿ. ಅಡಿ ಚಿನ್ನಕ್ಕೆ ಶೇ. 3 ರಷ್ಟು ತೆರಿಗೆ ವಿಧಿಸಲಾಗಿದೆ. ಜಿ.ಎಸ್.ಟಿ. ಅಡಿ ಚಿನ್ನಕ್ಕೆ ಶೇ. 5 ರಷ್ಟು ತೆರಿಗೆ ಹಾಕುವ ಪ್ರಸ್ತಾಪಕ್ಕೆ ಮತ್ತೊಮ್ಮೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 30 ಸಾವಿರ ರೂ.ನಿಂದ 70 ಸಾವಿರ ರೂಪಾಯಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ.

ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?

ಚಿನ್ನಾಭರಣ ಮೇಕಿಂಗ್ ಚಾರ್ಜ್

ಚಿನ್ನಾಭರಣ ಮೇಕಿಂಗ್ ಚಾರ್ಜ್

ಇನ್ನು ಜಿ.ಎಸ್.ಟಿ. ಅಡಿ ಚಿನ್ನಾಭರಣ ಮೇಕಿಂಗ್ ಚಾರ್ಜ್ ಶೇ. 5 ರಷ್ಟಿದ್ದು, ಇದನ್ನು ಕಡಿಮೆ ಮಾಡಬೇಕೆಂಬ ಒತ್ತಾಯ ಚಿನ್ನಾಭರಣ ವರ್ತಕರ ಒಕ್ಕೂಟದಿಂದ ಕೇಳಿ ಬಂದಿದೆ. ಐಷಾರಾಮಿ ಜೀವನಕ್ಕೆ ಕಡಿವಾಣ ಹಾಕುವ ಭೂತವನ್ನು ಮೈಮೇಲೆ ಹೊತ್ತು ತಿರುಗುತ್ತಿರುವ ಕೇರಳ ಸರ್ಕಾರದಿಂದ ಚಿನ್ನದ ಮೇಲಿನ ತೆರಿಗೆ ಹೆಚ್ಚಳಕ್ಕೆ ಭಾರಿ ಒತ್ತಡ ಬಂದಿದೆ.

ಆಭರಣ ಮಳಿಗೆಗೆ ಹೊರೆ

ಆಭರಣ ಮಳಿಗೆಗೆ ಹೊರೆ

ಸದ್ಯ ಜ್ಯುವೆಲ್ಲರಿ ಮಾಲೀಕರು, ಚಿನ್ನದ ಮೇಲೆ ಶೇ 10ರಷ್ಟು ಕಸ್ಟಮ್ಸ್ ತೆರಿಗೆ, ಶೇ1ರಷ್ಟು ಅಬಕಾರಿ ಪ್ಲಸ್ ಶೇ 1.2 ವ್ಯಾಟ್ ಕಟ್ಟುತ್ತಿದ್ದಾರೆ. ಒಟ್ಟಾರೆ ಆಭರಣ ಖರೀದಿ ಸಮಯದಲ್ಲಿ ಇದು ಒಟ್ಟಾರೆ ಶೇ 12.43ಕ್ಕೆ ಹಾಗೂ ಚಿನ್ನದ ಬಾರುಗಳನ್ನು ಖರೀದಿಸುವಾಗ ಶೇ 11.23ರಷ್ಟು ತೆರಿಗೆ ಬೀಳಲಿದೆ.

ಜಿಎಸ್ ಟಿ ನಂತರದ ಸ್ಥಿತಿ

ಜಿಎಸ್ ಟಿ ನಂತರದ ಸ್ಥಿತಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ ) ಜಾರಿ ಗೊಂಡ ಬಳಿಕ ಒಂದು ವೇಳೆ ಶೇ 3ರಷ್ಟು ಚಿನ್ನದ ಮೇಲೆ ಹಾಗೂ ಶೇ 18ರಷ್ಟು ಮೇಕಿಂಗ್ ಚಾರ್ಜ್ ಮೇಲೆ ಬಿದ್ದರೆ, ಕಸ್ಟಮ್ಸ್ ಡ್ಯೂಟಿ ಸೇರಿದಂತೆ ಒಟ್ಟಾರೆ 15.67% ತೆರಿಗೆ ದರವಾಗಲಿದೆ. ಹೀಗಾಗಿ ಚಿನ್ನದ ಮೇಲಿನ ದರ ಏರಿಕೆ ಸಾಧ್ಯವಿಲ್ಲದಿದ್ದರೆ ಮೇಕಿಂಗ್ ಚಾರ್ಜ್ ಕಡಿತಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ.

ಜೇಟ್ಲಿ ನಿರ್ಧಾರ ಏನು?

ಜೇಟ್ಲಿ ನಿರ್ಧಾರ ಏನು?

ಚಿನ್ನದ ಕಳ್ಳ ಸಾಗಣೆಗೆ ತಡೆ, ಹಳೆ ಚಿನ್ನ ಹೂಡಿಕೆ ಮೂಲಕ ಆಮದು ಮೇಲೆ ನಿಯಂತ್ರಣ ಹೊಂದಲು ಹೆಣಗಾಡಿದ ನಂತರ ಈಗ ಜಿಎಸ್ ಟಿ ಅಸ್ತ್ರವನ್ನು ಜೇಟ್ಲಿ ಬಿಡುತ್ತಿದ್ದಾರೆ. ಚಿನ್ನದ ಮೇಲೆ ರಿಯಾಯಿತಿ ಬೇಡ ಎಂದು ಕೇರಳದ ವಿತ್ತ ಸಚಿವ ಥಾಮಸ್ ಐಸಾಕ್ ಪ್ರತಿಪಾದಿಸಿದ್ದಾರೆ. ಜೇಟ್ಲಿ ಅವರ ಜಿಎಸ್ ಟಿಯು 1,200ಕ್ಕೂ ಅಧಿಕ ವಸ್ತಗಳನ್ನು ನಾಲ್ಕು ಸ್ಲ್ಯಾಬ್ ನಲ್ಲಿ ಹೊಂದಿದ್ದು, 5%, 12%, 18% ಹಾಗೂ 28% ನಂತೆ ತೆರಿಗೆ ವಿಧಿಸಲಾಗುತ್ತಿದೆ. ಖಾದಿ, ಪೂಜಾ ಸಾಮಾಗ್ರಿ ಸೇರಿದಂತೆ ಕೆಲ ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

English summary
GST rate on gold likely to be hiked. Finance Minister Arun Jaitley has favoured the low tax rate of 3% on gold to prevent smuggling. But, Kerala state and the Central Board of Excise and Customs keen on imposing a higher 5% levy on the precious metal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X