GST: ಕ್ರೆಡಿಟ್‌, ಡೆಬಿಟ್‌ ಕಾರ್ಡ್ ಮೂಲಕ ₹2000ಕ್ಕಿಂತ ಕಡಿಮೆ ವಹಿವಾಟಿಗೂ 18% ತೆರಿಗೆ?

ಸೆಪ್ಟೆಂಬರ್ 9 ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆ ನಡೆಯಲಿದ್ದು, ಮತ್ತೊಂದು ಹೊರೆ ಬೀಳುವ ಆತಂಕ ಶುರುವಾಗಿದೆ. ಕೌನ್ಸಿಲ್, ಬಿಲ್‌ಡೆಸ್ಕ್ ಮತ್ತು ಸಿಸಿಎವೆನ್ಯೂಗಳಂತಹ ಪಾವತಿ ಅಗ್ರಿಗೇಟರ್‌ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ₹2,000 ವರೆಗಿನ ವಹಿವಾಟಿನ ಮೇಲೆ 18% ಜಿಎಸ್‌ಟಿಯನ್ನು ವಿಧಿಸುವ ಸಾಧ್ಯತೆಯನ್ನು ಪರಿಗಣಿಸಲಿದೆ ಎಂದು ಹೇಳಿದೆ.

ಸಿಎನ್‌ಬಿಸಿ ಟಿವಿ18 ನ ವರದಿ ಪ್ರಕಾರ, ಪ್ಯಾನೆಲ್ ಪಾವತಿ ಸಂಗ್ರಾಹಕರು ವಹಿವಾಟುಗಳಿಗೆ ಮಧ್ಯವರ್ತಿಗಳಾಗಿ ಕೆಲಸ ಮಾಡುವುದರಿಂದ ಅದನ್ನು ಬ್ಯಾಂಕ್‌ಗಳೆಂದು ಪರಿಗಣಿಸಬಾರದು ಎಂದು ಸರಕು ಮತ್ತು ಸೇವಾ ತೆರಿಗೆ (GST) ಫಿಟ್‌ಮೆಂಟ್ ಹೇಳಿದೆ. ಫಿಟ್‌ಮೆಂಟ್ ಸಮಿತಿಯು ಈ ಪಾವತಿ ಅಗ್ರಿಗೇಟರ್‌ಗಳ (ಪಿಎ) ಮೇಲೆ ಜಿಎಸ್‌ಟಿ ವಿಧಿಸುವ ಸಾಧ್ಯತೆ ಹೆಚ್ಚಾಗಿದೆ. ಸದ್ಯ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ₹2,000 ಕ್ಕಿಂತ ಕಡಿಮೆ ಮೊತ್ತದ ವಹಿವಾಟುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಇದೆ.

GST Council to Consider 18 Tax on Digital Transactions Up to Rs 2 000

ಭಾರತದಲ್ಲಿ ಆಗುವ ಒಟ್ಟು ಡಿಜಿಟಲ್ ಪಾವತಿಗಳಲ್ಲಿ 80 ಪ್ರತಿಶತಕ್ಕಿಂತ ಹೆಚ್ಚು ₹2000 ಕ್ಕಿಂತ ಕಡಿಮೆ ವಹಿವಾಟಿನದ್ದಾಗಿದೆ. 2016 ರಲ್ಲಿ ನೋಟು ಅಮಾನ್ಯೀಕರಣದ ಸಮಯದಲ್ಲಿ ಹೊರಡಿಸಲಾದ ಸರ್ಕಾರದ ಅಧಿಸೂಚನೆಯ ಪ್ರಕಾರ, ಅಗ್ರಿಗೇಟರ್ ಗಳು ಈ ವಹಿವಾಟುಗಳ ಮೇಲೆ ವ್ಯಾಪಾರಿಗಳಿಗೆ ನೀಡಲಾಗುವ ಸೇವೆಗಳ ಮೇಲೆ ತೆರಿಗೆ ವಿಧಿಸಿರಲಿಲ್ಲ.

ಅಧಿಕಾರಿಗಳು ಜಿಎಸ್‌ಟಿ ಆಡಳಿತದ ಅನುಷ್ಠಾನಕ್ಕೆ ಹೊಂದಿಕೆಯಾಗುವ 2017-18 ಆರ್ಥಿಕ ವರ್ಷದಿಂದ ತೆರಿಗೆಗಳನ್ನು ಸಂಗ್ರಹಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ಸೆಪ್ಟೆಂಬರ್ 9ರಂದು ನಡೆಯುವ ಸಭೆಯ ನಂತರ ಜಿಎಸ್‌ಟಿ ಕೌನ್ಸಿಲ್ ಅಂತಹ ವಹಿವಾಟುಗಳ ತೆರಿಗೆಯ ಬಗ್ಗೆ ಸ್ಪಷ್ಟೀಕರಣ ನೀಡುವ ಸಾಧ್ಯತೆ ಎನ್ನುವ ವದಂತಿಗಳ ನಡುವೆ ಈ ಸುದ್ದಿ ಬಂದಿದೆ.

ಅಗ್ರಿಗೇಟರ್ ಗಳು ಪ್ರಸ್ತುತ ವ್ಯಾಪಾರಿಗಳಿಗೆ ಪ್ರತಿ ವಹಿವಾಟಿಗೆ ಗೆ 0.5% ರಿಂದ 2% ವರೆಗೆ ಶುಲ್ಕ ವಿಧಿಸುತ್ತಿವೆ. ಈಗ ಜಿಎಸ್‌ಟಿ ಹೇರಿದರೆ, ಹೆಚ್ಚುವರಿ ವೆಚ್ಚವನ್ನು ವ್ಯಾಪಾರಿಗಳಿಗೆ ವರ್ಗಾಯಿಸಬಹುದು. ಪ್ರಸ್ತುತ ಪಾವತಿ ಅಗ್ರಿಗೇಟರ್ ಗಳು ಕ್ಯೂಆರ್ ಕೋಡ್, ಪಿಒಎಸ್‌ ಯಂತ್ರಗಳು ಮತ್ತು ನೆಟ್‌ ಬ್ಯಾಂಕಿಂಗ್‌ನಂತಹ ಡಿಜಿಟಲ್ ಪಾವತಿ ವಿಧಾನಗಳ ಶ್ರೇಣಿಗಳನ್ನು ಸುಲಭಗೊಳಿಸಿದ್ದು, ₹2,000 ಕ್ಕಿಂತ ಕಡಿಮೆ ವಹಿವಾಟುಗಳ ಮೇಲೆ ಜಿಎಸ್‌ಟಿ ಪಾವತಿಸಲು ಜವಾಬ್ದಾರರಾಗಿರುವುದಿಲ್ಲ.

ಸಣ್ಣ ವ್ಯಾಪಾರಸ್ಥರ ಮೇಕೆ ಪರಿಣಾಮ

ಸಣ್ಣ ವಹಿವಾಟಿನ ಮೇಲೆ 18% ರಷ್ಟು ಜಿಎಸ್‌ಟಿ ವಿಧಿಸಿದರೆ ಕಡಿಮೆ ಮೌಲ್ಯದ ವಹಿವಾಟುಗಳನ್ನು ನೆಚ್ಚಿಕೊಂಡಿರುವ ಸಣ್ಣ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರಸ್ತುತ ಇರುವ ವ್ಯವಸ್ಥೆ ಪ್ರಕಾರ 1% ಪಾವತಿ ಗೇಟ್‌ವೇ ಶುಲ್ಕದೊಂದಿಗೆ, ವ್ಯಾಪಾರಿಯು ರೂ 10 ಶುಲ್ಕವನ್ನು ಭರಿಸಬೇಕಾಗುತ್ತದೆ. ಜಿಎಸ್‌ಟಿ ಅನುಷ್ಠಾನದ ಬಳಿಕ ಈ ಶುಲ್ಕ ₹11.80 ಕ್ಕೆ ಹೆಚ್ಚಾಗುತ್ತದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಪ್ರಸ್ತುತ ಡಿಜಿಟಲ್ ಪಾವತಿಯ ಅತ್ಯಂತ ಜನಪ್ರಿಯ ರೂಪವಾಗಿದ್ದು, ವಿಶೇಷವಾಗಿ ಸಣ್ಣ-ಮೌಲ್ಯದ ವಹಿವಾಟುಗಳಿಗೆ, ಇದು ಡಿಜಿಟಲ್ ವಹಿವಾಟುಗಳ ಮೇಲೆ ಸೀಮಿತ ಒಟ್ಟಾರೆ ಪರಿಣಾಮವನ್ನು ಉಂಟುಮಾಡಿದೆ. 2024ರಲ್ಲಿ ಯುಪಿಐ ವಹಿವಾಟು 57% ಬೆಳವಣಿಗೆಯಾಗಿದೆ, 131 ಶತಕೋಟಿ ವಹಿವಾಟು ನಡೆದಿವೆ.

ಯುಪಿಐ ಭಾರತದಲ್ಲಿ ಒಟ್ಟು ಡಿಜಿಟಲ್ ಚಿಲ್ಲರೆ ಪಾವತಿಗಳಲ್ಲಿ 80% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಜಿಎಸ್‌ಟಿಯು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಸುವ ಡಿಜಿಟಲ್ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ಯುಪಿಐ ವಹಿವಾಟುಗಳು ಪ್ರಸ್ತುತ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR)ಗೆ ಒಳಗಾಗುವುದಿಲ್ಲವಾದ್ದರಿಂದ, ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಇದರ ಪರಿಣಾಮ ರೂ 2,000 ಕ್ಕಿಂತ ಕಡಿಮೆ ವಹಿವಾಟುಗಳಿಗೆ ಯುಪಿಐ ಹೆಚ್ಚಿನ ಆಯ್ಕೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+