ನಿಮ್ಮ ಆನ್ ಲೈನ್ ವ್ಯವಹಾರದ ಮೇಲೆ ಸರಕಾರದ ಕಣ್ಣು

Posted By:
Subscribe to Oneindia Kannada

ನವದೆಹಲಿ, ಜೂನ್ 13: ಆನ್ ಲೈನ್ ನಲ್ಲಿ ನೀವು ಖರೀದಿ ಮಾಡ್ತಿದೀರಾ? ಅದರ ಮಾಹಿತಿಯನ್ನೂ ಸರಕಾರ ಪಡೆಯಲಿದೆ. ಮುಂದಿನ ತಿಂಗಳಿಂದ ನಿಮ್ಮ ಖರ್ಚಿನ ಬಗ್ಗೆ ಕೂಡ ಸರಕಾರ ಸಮೀಕ್ಷೆ ನಡೆಸಲಿದೆ. ಇದೇ ಮೊದಲ ಸಲ ಇ ಕಾಮರ್ಸ್ ಗೆ ಸಂಬಂಧಪಟ್ಟ ಖರ್ಚು-ವೆಚ್ಚಗಳ ಬಗ್ಗೆ ಸರಕಾರ ಪ್ರಶ್ನೆ ಮಾಡಲಿದೆ.

ಮುಂದಿನ ಗ್ರಾಹಕರ ವೆಚ್ಚಗಳ ಸಮೀಕ್ಷೆಯು ದೇಶದಾದ್ಯಂತ ನಡೆಯಲಿದ್ದು, ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್ ಕೈಗೊಳ್ಳಲಿದೆ. ಸಾಂಖ್ಯಿಕ ಸಚಿವಾಲಯದ ಅಡಿಯಲ್ಲಿ ಇದು ಬರಲಿದೆ. ಜುಲೈನಲ್ಲಿ ಆರಂಭವಾಗುವ ಸಮೀಕ್ಷೆ ಮುಂದಿನ ವರ್ಷದ ಜೂನ್ ನವರೆಗೆ ನಡೆಯಲಿದೆ.

ನೋಟು ರದ್ದು : ಪರಿಸ್ಥಿತಿ ಲಾಭ ಪಡೆದ ಇ ಕಾಮರ್ಸ್ ಕಂಪನಿಗಳು

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆಯ ಅಥವಾ ಕುಟುಂಬಗಳ ಖರ್ಚು ಹೇಗಿರುತ್ತದೆ, ಯಾವ ವಸ್ತು ಅಥವಾ ಸೇವೆಗೆ ಹೇಗೆ ಖರ್ಚು ಮಾಡುತ್ತಾರೆ ಎಂಬುದನ್ನು ಈ ಸಮೀಕ್ಷೆ ಗಮನಿಸುತ್ತದೆ. ಈ ಬಗ್ಗೆ ಎಕನಾಮಿಕ್ಸ್ ಟೈಮ್ಸ್ ನಲ್ಲಿ ವರದಿ ಪ್ರಕಟವಾಗಿದ್ದು, ಆನ್ ಲೈನ್ ಮಾರುಕಟ್ಟೆಯ ಕೈಗಳು ಎಷ್ಟು ವಿಸ್ತಾರವಾಗಿದೆ, ಏಷ್ಯಾ ರಾಷ್ಟ್ರಗಳಲ್ಲಿ ಅದರ ಪರಿಣಾಮವನ್ನು ವಿವರಿಸಲಾಗಿದೆ.

14.5 ಬಿಲಿಯನ್ ಅಮೆರಿಕನ್ ಡಾಲರ್ ಇಕಾಮರ್ಸ್ ವ್ಯವಹಾರ

14.5 ಬಿಲಿಯನ್ ಅಮೆರಿಕನ್ ಡಾಲರ್ ಇಕಾಮರ್ಸ್ ವ್ಯವಹಾರ

ಕಳೆದ ವರ್ಷ ಅಂದಾಜು ಮಾಡಿದ ಪ್ರಕಾರ ಭಾರತದ ಇಕಾಮರ್ಸ್ ವಲಯವು 14.5 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ವ್ಯವಹಾರ ಮಾಡಿದೆ. ಇದು ರೆಡ್ ಸೀರ್ ಕನ್ಸಲ್ಟಿಂಗ್ ಅಧ್ಯಯನವು ಬಯಲು ಮಾಡಿರುವ ಸಂಖ್ಯೆ. ದೇಶದ ಚಿಲ್ಲರೆ ಮಾರಾಟದ ಪ್ರಮಾಣಕ್ಕೆ ಹೋಲಿಸಿದರೆ (750 ಬಿಲಿಯನ್ ಅಮೆರಿಕ ಡಾಲರ್) ಇದು ತೀರಾ ಕಡಿಮೆ.

ಐದನೇ ಒಂದು ಭಾಗದಷ್ಟು ಆನ್ ಲೈನ್ ವ್ಯವಹಾರ

ಐದನೇ ಒಂದು ಭಾಗದಷ್ಟು ಆನ್ ಲೈನ್ ವ್ಯವಹಾರ

ಆದರೆ, ಇ ಕಾಮರ್ಸ್ ವ್ಯವಹಾರ ಶೀಘ್ರವಾಗಿ ಬೆಳೆಯಲಿದೆ. ಅಮೆರಿಕ ಮೂಲದ ಕಂಪೆನಿಯೊಂದರ ಸಮೀಕ್ಷೆ ಪ್ರಕಾರ 2021ರ ವೇಳೆಗೆ ಏಷ್ಯಾ ಪೆಸಿಫಿಕ್ ದೇಶಗಳ ಒಟ್ಟು ವ್ಯವಹಾರದಲ್ಲಿ ಐದನೇ ಒಂದು ಭಾಗವನ್ನು ಆನ್ ಲೈನ್ ವ್ಯವಹಾರ ಆವರಿಸಿಕೊಂಡಿರುತ್ತದೆ. ಸದ್ಯಕ್ಕೆ ಚೀನಾ ದೇಶವು ಏಷ್ಯಾದ ದೊಡ್ಡ ಆನ್ ಲೈನ್ ಮಾರುಕಟ್ಟೆ.

ಶೀಘ್ರವಾಗಿ ಬೆಳೆಯುತ್ತಿರುವ ಆನ್ ಲೈನ್ ಚಿಲ್ಲರೆ ಮಾರುಕಟ್ಟೆ

ಶೀಘ್ರವಾಗಿ ಬೆಳೆಯುತ್ತಿರುವ ಆನ್ ಲೈನ್ ಚಿಲ್ಲರೆ ಮಾರುಕಟ್ಟೆ

ಆದರೆ, ನೆನಪಿರಲಿ ಜಾಗತಿಕ ಮಟ್ಟದಲ್ಲಿ ಶೀಘ್ರವಾಗಿ ಬೆಳೆಯುತ್ತಿರುವ ಆನ್ ಲೈನ್ ಚಿಲ್ಲರೆ ಮಾರುಕಟ್ಟೆ ಭಾರತದ್ದು. ರಾಷ್ಟ್ರೀಯ ವೆಚ್ಚ ಸಮೀಕ್ಷೆಯಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಕುಟುಂಬಗಳ ಐದು ಸಾವಿರ ನಗರ ಬ್ಲಾಕ್ ಹಾಗೂ ಏಳು ಸಾವಿರ ಹಳ್ಳಿಗಳನ್ನು ಇದರಲ್ಲಿ ಒಳಗೊಳ್ಳಲಾಗುತ್ತದೆ.

ಹಣದುಬ್ಬರದ ಮೇಲೆ ಆನ್ ಲೈನ್ ದರಗಳ ಪಾತ್ರ

ಹಣದುಬ್ಬರದ ಮೇಲೆ ಆನ್ ಲೈನ್ ದರಗಳ ಪಾತ್ರ

ಸರಕಾರ ನೇಮಿಸುವ ಡೇಟಾ ಮ್ಯಾನೇಜರ್ ಗಳು ಹಣದುಬ್ಬರದ ಮೇಲೆ ಆನ್ ಲೈನ್ ದರಗಳ ಪಾತ್ರ ಏನು ಎಂಬುದನ್ನು ಕೂಡ ಪರಿಶೀಲಿಸಲಿದ್ದಾರೆ. ಸದ್ಯಕ್ಕೆ ಆನ್ ಲೈನ್ ಮಾರುಕಟ್ಟೆ ತುಂಬ ಪ್ರಬಲವಾಗಿಲ್ಲ ಅಂದರೂ ಅವುಗಳಿಂದ ದರಗಳ ಮೇಲೆ ಆಗುವ ಪರಿಣಾಮ, ಭವಿಷ್ಯದಲ್ಲಿ ಚಿಲ್ಲರೆ ಮಾರಾಟ ದರ ನೀತಿಯ ಮೇಲೆ ಆಗುವ ಪರಿಣಾಮವನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Shop online? The government of India (GoI) wants to know the details. Starting next month, government surveys on expenditure will, for the first time, ask questions on ecommerce spending habits.
Please Wait while comments are loading...